ಮೇಷ:ಇಂದು ನೀವು ವಿವರಿಸಲಾಗದ ಮತ್ತು ಅದ್ಭುತ ಘಟನೆಯಿಂದ ಗೊಂದಲಕ್ಕೀಡಾಗುತ್ತೀರಿ. ಅದು ಅಥವಾ ನೀವು ಅನಿರೀಕ್ಷಿತ ಆದರೆ ಪೂರಕ ಘಟನೆ ಎಂದು ಪರಿಗಣಿಸಬಹುದು. ಅದು ಭೂಮಿ ಅಲುಗಾಡಿಸುವುದಲ್ಲ. ಆದರೆ ಅದು ನಿಜಕ್ಕೂ ನಿಮ್ಮನ್ನು ವಿಷಯಗಳ ಮೌಲ್ಯಮಾಪನ ಮಾಡುವಂತೆ ಮಾಡುತ್ತದೆ. ಅಲ್ಲದೆ, ಗಡುವುಗಳನ್ನು ಮುಟ್ಟಲು ಕಷ್ಟವಾಗುತ್ತದೆ. ಆದರೆ, ನಿಮ್ಮ ಕೆಲಸದ ಪ್ರಾಮುಖ್ಯತೆ ಕುರಿತು ಜನರಿಗೆ ಹೇಳುವುದು ಉತ್ತಮ.
ವೃಷಭ:ನೀವು ಇಂದು ನಿಮ್ಮ ಮಿತ್ರರು ಮತ್ತು ಸಹವರ್ತಿಗಳ ಕುರಿತು ಅತ್ಯಂತ ನಿರಾಸೆ ಮತ್ತು ಕಿರಿಕಿರಿಯ ನಡುವೆ, ನೀವು ಅತ್ಯಂತ ಪೊಸೆಸಿವ್ ಮತ್ತು ಸ್ವಯಂ-ಕೇಂದ್ರಿತ ಭಾವನೆಯನ್ನು ವ್ಯಕ್ತಿಗಳು ಮತ್ತು ವಸ್ತುಗಳ ಬಗ್ಗೆ ಅನುಭವಿಸುತ್ತೀರಿ. ನಿಮ್ಮ ಅತಿಯಾದ ರಕ್ಷಣೆಯ ಪ್ರವೃತ್ತಿ ಯಾರನ್ನೇ ಆದರೂ ಕಿರಿಕಿರಿ ಮಾಡುತ್ತದೆ. ಇದಕ್ಕೆ ಪೂರಕವಾಗಿ ಅವರ ಅಸಮಾಧಾನ ನಿರ್ಲಕ್ಷಿಸುತ್ತೀರಿ ಮತ್ತು ಪರಿಸ್ಥಿತಿ ಸುಧಾರಿಸುವ ಬದಲು ಭೌತಿಕ ಲಾಭಗಳತ್ತ ಗಮನ ನೀಡುತ್ತೀರಿ.
ಮಿಥುನ :ದೈನಂದಿನ ಒತ್ತಡದಿಂದ ಕೊಂಚ ಬಿಡುವು ತೆಗೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಬ್ಯಾಟರಿ ರೀಚಾರ್ಜ್ ಮಾಡಿಕೊಳ್ಳಲು ಸಂತೋಷದ ಪ್ರವಾಸ ಕಾಯುತ್ತಿದೆ. ವಿರುದ್ಧ ಲಿಂಗಿಗಳ ಮೆಚ್ಚುಗೆ ಪಡೆಯುವುದು ನಿಮಗೆ ಸಹಜವಾಗಿ ಬಂದಿದೆ. ನೀವು ಯಾರನ್ನಾದರೂ ಪ್ರೀತಿಸಿದರೆ ನೀವು ಮುಂದಡಿ ಇಡುತ್ತೀರಿ. ಸಂಜೆ ಧ್ಯಾನ ಮಾಡುವುದು ನಿಮ್ಮನ್ನು ಅಥವಾ ನಿಮ್ಮ ಪ್ರಿಯತಮೆಯನ್ನು ಸಜ್ಜುಗೊಳಿಸಿಕೊಳ್ಳುವುದು.
ಕರ್ಕಾಟಕ: ಕೆಲಸದಲ್ಲಿ ಅದ್ಭುತ ಮತ್ತು ಅಸಾಧಾರಣ ದಿನ ನಿಮಗಾಗಿ ಕಾದಿದೆ. ವ್ಯವಹಾರಗಳನ್ನು ಪೂರೈಸುವಾಗ ನಿಮ್ಮ ಎಲ್ಲ ಸಂಧಾನ ಕೌಶಲ್ಯಗಳನ್ನು ಹೊಂದಿರಬೇಕು. ಅದು ಆರ್ಡರ್ ಪೂರೈಸುವುದಾಗಿರಲಿ ಅಥವಾ ಹೊಸ ಉತ್ಪನ್ನಗಳ ಬಿಡುಗಡೆ ಮತ್ತು ಮಾರ್ಕೆಟಿಂಗ್ ಆಗಿರಲಿ, ನಿಮ್ಮ ನಾಯಕತ್ವ ಕೌಶಲ್ಯಗಳು ಗಡುವಿನ ಅಂತಿಮ ಹಂತದಲ್ಲಿ ಮುಂಬದಿಗೆ ಬರುತ್ತವೆ.
ಸಿಂಹ : ನೀವು ಇಂದು ಒಳ್ಳೆಯದಾಗುತ್ತದೋ ಇಲ್ಲವೋ ಎಂದು ಆತಂಕಗೊಂಡಿದ್ದೀರಿ. ಆದರೆ ನಿಮಗೆ ಶುಭಸುದ್ದಿ ಇದೆ: ಈ ದಿನ ನಿಮಗೆ ಪುರಸ್ಕಾರಗಳನ್ನು ಮಾತ್ರ ನೀಡುತ್ತದೆ. ಇದು ನಿಮ್ಮ ಕೆಲಸದ ಸ್ಥಳಕ್ಕೆ ಅತ್ಯಂತ ನಿಜವಾಗಿದೆ, ಅಲ್ಲಿ ನಿಮ್ಮ ಆಂತರಿಕ ಪ್ರತಿಭೆಗಳನ್ನು ಇಂದು ಗುರುತಿಸಲಾಗುತ್ತದೆ. ನಿಮ್ಮ ಸಹೋದ್ಯೋಗಿಗಳಿಂದ ಸಕಾರಾತ್ಮಕ ಬೆಂಬಲ ಪಡೆಯಿರಿ ಮತ್ತು ಮೇಲಧಿಕಾರಿಗಳಿಂದ ಸ್ಫೂರ್ತಿದಾಯಕ ಸಲಹೆಗಳನ್ನು ಪಡೆಯಿರಿ.
ಕನ್ಯಾ:ನಿಮ್ಮ ಸಂವಹನ ಮತ್ತು ಸೃಜನಶೀಲ ಕೌಶಲ್ಯಗಳು ಅತ್ಯುತ್ತಮ ಆಯುಧಗಳು. ನೀವು ಜೀವನದ ಆಸ್ವಾದದಿಂದ ಅತಿಯಾಗಿ ತುಂಬಿದ್ದೀರಿ ಮತ್ತು ಉತ್ಸಾಹದ ಬುಗ್ಗೆಯಾಗಿದ್ದೀರಿ. ಆದರೆ ನಿಮ್ಮ ಸೃಜನಶೀಲತೆ ಒತ್ತಡ ಅಥವಾ ಆಯಾಸಗೊಂಡಿದ್ದಾಗ ಮಾತ್ರ ಅರಳುತ್ತದೆ.
ತುಲಾ: ನೀವು ದೊಡ್ಡ ಗುರಿಯನ್ನು ಇರಿಸಿಕೊಂಡಾಗ ಸಣ್ಣ ವಿಷಯಗಳು ನಿಮಗೆ ಹೆಚ್ಚು ಕಿರಿಕಿರಿ ಮಾಡುತ್ತವೆ. ಆದರೆ, ಅದು ನಿಮ್ಮ ಸ್ಫೂರ್ತಿಯನ್ನು ಹಾಳು ಮಾಡಲು ಬಿಡಬೇಡಿ, ಏಕೆಂದರೆ ಇಂದು ನೀವು ಹೊಸ ಆಲೋಚನೆಗಳನ್ನು ಸ್ವೀಕರಿಸುತ್ತಿರುತ್ತೀರಿ. ನೀವು ಗ್ರಹಿಸಬಲ್ಲ ವಿಷಯಗಳಿಗೆ ಅವಕಾಶ ನೀಡಿ ಮತ್ತು ಸಮತೋಲನ ಕಾಪಾಡಿಕೊಳ್ಳಿ.
ವೃಶ್ಚಿಕ:ನೀವು ಈಗ ಎಲ್ಲ ಎತ್ತರಗಳನ್ನೂ ಅನುಭವಿಸಿದ್ದೀರಿ. ಇಂದು ವೃತ್ತಿ ಜಗತ್ತಿನಲ್ಲಿ ಇಳಿಕೆಯನ್ನೂ ಕಾಣಲಿದ್ದೀರಿ. ನಿಮ್ಮ ಬಾಸ್, ಸಹೋದ್ಯೋಗಿಗಳು ಮತ್ತು ನಿಮ್ಮ ನಡುವಿನ ಸಮೀಕರಣ ಕೊಂಚ ಅಲುಗಾಡಿದೆ. ಆದರೆ, ಸಂಜೆಯ ವೇಳೆಗೆ ನೀವು ಸರಿಪಡಿಸಿಕೊಳ್ಳುತ್ತೀರಿ. ಹೊಸಬರು ವೃತ್ತಿಯ ಅವಕಾಶಗಳನ್ನು ಎದುರು ನೋಡುತ್ತಾರೆ.
ಧನು:ನೀವು ಇಂದು ಯಾವುದು ಸರಿ ಮತ್ತು ನ್ಯಾಯವೋ ಅದನ್ನು ಎತ್ತಿ ಹಿಡಿಯುತ್ತೀರಿ. ಅನ್ಯಾಯ ಮತ್ತು ತಾರತಮ್ಯದ ವಿರುದ್ಧ ಹೋರಾಟ ಮಾಡಲು ನೀವು ಸರಿಯಾದ ಸ್ಫೂರ್ತಿಯನ್ನು ಹೊಂದಿದ್ದೀರಿ. ನಿಮ್ಮ ಇಚ್ಛಾಶಕ್ತಿಯಂತೆಯೇ ದಿನವೂ ಅದ್ಭುತವಾಗಿದೆ. ನೀವು ಇಂದು ಎದ್ದು ನಿಂತು ಎಲ್ಲವನ್ನೂ ಜಯಿಸಿರಿ.
ಮಕರ;ವಿಶ್ವಾಸದ ಕೊರತೆ ದಿನದ ಮೊದಲರ್ಧದಲ್ಲಿ ನಿಮಗೆ ಮ್ಲಾನವದನರನ್ನಾಗಿಸುತ್ತದೆ. ಮತ್ತು ಅದಕ್ಕೆ ಪೂರಕವಾಗಿ, ನೀವು ಪೂರ್ಣಕಾಲಿಕ ಕೆಲಸ ನೀಡಲಾದ ಕಂಪನಿಯಲ್ಲದೆ ಬೇರೆ ಕಡೆ ಕೆಲಸದಲ್ಲಿರುತ್ತೀರಿ. ಸಂಕಟದ ಮುಖ ಸಂಜೆಗೆ ಸಂತೋಷದತ್ತ ಹೊರಳುತ್ತದೆ. ಮತ್ತು ನೀವು ಮಿತ್ರರು ಹಾಗೂ ಬಂಧುಗಳೊಂದಿಗೆ ಬೆರೆತು ಒಳ್ಳೆಯ ಸಮಯ ಕಳೆಯುತ್ತೀರಿ.
ಕುಂಭ:ಇಂದು ದೊಡ್ಡ ವಿಷಯಗಳಿಗೆ ಪ್ರಮುಖ ದಿನ. ನೀವು ಅಂತಿಮವಾಗಿ ಮನೆ ಕೊಳ್ಳಲು, ಉದ್ಯೋಗ ಬದಲಿಸಿಕೊಳ್ಳಲು ಅಥವಾ ವಿವಾಹವಾಗಲು ನಿರ್ಧರಿಸಿದ್ದೀರಿ! ದಿಢೀರ್ ಮತ್ತು ಅನಿರೀಕ್ಷಿತ ಲಾಭಗಳು ಕೂಡಾ ನಿಮಗೆ ಕಾದಿವೆ. ಪ್ರತಿಷ್ಠೆ ಮತ್ತು ಪುರಸ್ಕಾರಗಳು ಇಂದು ನಿಮ್ಮವಾಗಿವೆ. ಗುರುತಿಸುವಿಕೆಯಿಂದ ನೀವು ಬದ್ಧರಾಗಿರಲು ನೆರವಾಗುತ್ತದೆ.
ಮೀನ:ನೀವು ಎಷ್ಟು ಕೆಲಸ ಮಾಡಬೇಕು ಮತ್ತು ಲಭ್ಯವಿರುವ ಸಮಯದಲ್ಲಿ ಎಷ್ಟು ಸಾಧಿಸಬೇಕು ಎಂದು ವಾಸ್ತವ ಚಿತ್ರಣ ಬೇಕೆಂದರೆ ನೀವು ಮಾಡಬೇಕಾಗಿರುವ ಕೆಲಸಗಳ ಪಟ್ಟಿ ಸಿದ್ಧಪಡಿಸುವುದು ಅಗತ್ಯ. ನಿಮ್ಮಿಂದ ಅತಾರ್ಕಿಕ ಬೇಡಿಕೆಗಳು ಮತ್ತಷ್ಟು ತಡವಾಗಲು ಕಾರಣವಾಗುತ್ತದೆ.