ETV Bharat / bharat

ದಹಿ ಹಂಡಿ ಆಚರಣೆ 2023: ಇದೇ ಮೊದಲ ಬಾರಿಗೆ ತೃತೀಯಲಿಂಗೀಯರ ತಂಡ ಭಾಗಿ - ಈಟಿವಿ ಭಾರತ್​ ಕನ್ನಡ ನ್ಯೂಸ್

ಮಹಾರಾಷ್ಟ್ರದಲ್ಲಿ ಅದ್ದೂರಿಯಾಗಿ ಆಚರಣೆ ಮಾಡುವ ದಹಿ ಹಂಡಿ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ತೃತೀಯಲಿಂಗೀಯರ ಗೋವಿಂದ ತಂಡ ಭಾಗಿವಹಿಸುತ್ತಿದೆ.

ದಹಿ ಹಂಡಿ ಆಚರಣೆ
ದಹಿ ಹಂಡಿ ಆಚರಣೆ
author img

By ETV Bharat Karnataka Team

Published : Sep 6, 2023, 6:09 PM IST

ಪುಣೆ (ಮಹಾರಾಷ್ಟ್ರ) : ದೇಶದಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆ ಮನೆ ಮಾಡಿದೆ. ಎಲ್ಲೆಡೆ ಭಿನ್ನವಾಗಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಣೆ ಮಾಡಲಾಗುತ್ತಿದೆ. ಜೊತೆಗೆ ಭಾರತದಲ್ಲಿ ದಹಿ ಹಂಡಿ (ಮೊಸರು ಗಡಿಗೆ ಒಡೆಯುವ ಸ್ಪರ್ಧೆ)ಯನ್ನು ಹೆಚ್ಚಾಗಿ ಮಹಾರಾಷ್ಟ್ರ, ಗೋವಾ ಮತ್ತು ಗುಜರಾತ್‌ನಲ್ಲಿ ನಡೆಸಲಾಗುತ್ತದೆ. ಆದರೇ, ಈ ಬಾರಿಗೆ ವಿಶೇಷವಾದ ದಹಿ ಹಂಡಿ ಆಚರಣೆಗೆ ಪುಣೆ ಸಾಕ್ಷಿಯಾಗಲಿದೆ.

ತೃತೀಯಲಿಂಗೀಯರ ಗೋವಿಂದ ತಂಡ
ತೃತೀಯಲಿಂಗೀಯರ ಗೋವಿಂದ ತಂಡ

ಹೌದು ಪ್ರತಿ ವರ್ಷ ದಹಿ ಹಂಡಿ ಆಚರಣೆಯಲ್ಲಿ ಪುರಷರ ಮತ್ತು ಮಹಿಳೆಯರ ಗೋವಿಂದ ತಂಡಗಳು ಮಾತ್ರ ಪಾಲ್ಗೊಳ್ಳುತ್ತಿತ್ತು. ಈ ವರ್ಷ ಮೊದಲ ಬಾರಿಗೆ ಪುಣೆ ನಗರ ಮತ್ತು ಪಿಂಪ್ರಿ ಚಿಂಚ್‌ವಾಡ್​ನಲ್ಲಿ ಮಂಗಳಮೂರ್ತಿ ಕಿನ್ನರ ಚಾರಿಟಬಲ್ ಟ್ರಸ್ಟ್‌ನ ತೃತೀಯಲಿಂಗೀಯರ ಗೋವಿಂದ ತಂಡವು ದಹಿ ಹಂಡಿಯಲ್ಲಿ ಭಾಗವಹಿಸುತ್ತಿದೆ. ಇದು ಮಹಾರಷ್ಟ್ರದ ಮೊದಲ ತೃತೀಯಲಿಂಗೀಯರ ಗೋವಿಂದ ತಂಡವಾಗಲಿದ್ದು, 50 ಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಿದ್ದಾರೆ. ಪ್ರತಿ ತಂಡದಲ್ಲಿ 25 ಮಂದಿಯಂತೆ ಒಟ್ಟು ನಾಲ್ಕು ತಂಡಗಳಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.

ತೃತೀಯ ಲಿಂಗೀಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರಕಾರದಿಂದ ನಾನಾ ಪ್ರಯತ್ನಗಳು ನಡೆಯುತ್ತಿವೆ. ಇದರ ಜೊತೆಗೆ ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ ತೃತೀಯ ಲಿಂಗೀಯರಿಗೆ ಭದ್ರತಾ ಸಿಬ್ಬಂದಿ ಕೆಲಸವನ್ನು ನೀಡುವ ಮೂಲಕ ಸರಕಾರದ ಜೊತೆ ಕೈ ಜೋಡಿಸಿದೆ. ಇದರ ಬೆನ್ನೆಲೆ, ಮಂಗಳಮೂರ್ತಿ ಕಿನ್ನರ ಚಾರಿಟಬಲ್ ಟ್ರಸ್ಟ್‌ ತೃತೀಯ ಲಿಂಗಿಯರ ಗೋವಿಂದ ತಂಡವನ್ನು ರಚಿಸಿದೆ.

ಸಾಮಾಜಿಕ ಕಾರ್ಯಕರ್ತೆ ಶರ್ವರಿ ಗಾವಂಡೆ ಮಾತನಾಡಿ, ಕಳೆದ ಹಲವು ವರ್ಷಗಳಿಂದ ತೃತೀಯ ರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ತೃತೀಯ ಲಿಂಗೀಯರ ತಂಡ ಕಟ್ಟಬೇಕು ಎಂಬ ಯೋಚನೆ ಇತ್ತು. ಹೀಗಾಗಿ ಮಂಗಳಮೂರ್ತಿ ಕಿನ್ನಿಯರ್ ಚಾರಿಟಬಲ್​​​ ಟ್ರಸ್ಟ್ ಜೊತೆ ಮಾತನಾಡಿ ಸಿದ್ಧತೆ ಆರಂಭಿಸಿದೆ. ಆರಂಭದಲ್ಲಿ ಇವರು ತೊಂದರೆಗೀಡಾಗಿದ್ದರು. ಆದರೆ, ಇಂದು ಪುಣೆ ಮತ್ತು ಪಿಂಪ್ರಿ ಚಿಂಚ್‌ವಾಡ್‌ನಿಂದ ಒಟ್ಟು 4 ತಂಡಗಳನ್ನು ರಚಿಸಲಾಗಿದೆ ಎಂದರು.

ಮಹಾರಾಷ್ಟ್ರದಲ್ಲಿ ದಹಿ ಹಂಡಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ದಹಿಹಂಡಿಗೆ ಕ್ರೀಡಾ ಸ್ಥಾನಮಾನ ನೀಡಿದ ಬಳಿಕ ಗೋವಿಂದ ತಂಡದಲ್ಲಿ ಉತ್ಸಾಹ ಮೂಡಿದೆ. ಇದು ಬಾಲ್ಯದಲ್ಲಿ ಕೃಷ್ಣನ ಅದ್ಭುತ ಕ್ಷಣಗಳನ್ನು ಅನುಕರಿಸುತ್ತದೆ. ಬೆಣ್ಣೆ/ಮೊಸರು ತುಂಬಿದ ಮಣ್ಣಿನ ಮಡಕೆಯನ್ನು ಬಹಳ ಎತ್ತರದಿಂದ ನೇತುಹಾಕಿ ಅದನ್ನು ಒಡೆಯಲು ಮೇಲಕ್ಕೆ ತಲುಪಲು ಜನರ ಗುಂಪೊಂದು ಒಬ್ಬರ ಮೇಲ್ಬೊಬರಂತೆ ಹತ್ತುತ್ತಾರೆ. ಹೀಗೆ ಹತ್ತಿದ ಬಳಿಕ ನೆಲದಿಂದ 20 ಅಡಿ ಎತ್ತರದಲ್ಲಿ ನೇತಾಡುವ ಮಡಕೆಯನ್ನು ಕವೆಗೋಲಿನಿಂದ ಒಡೆಯುತ್ತಾರೆ.

ಈ ಸಂದರ್ಭದಲ್ಲಿ ಮತ್ತೊಂದೆಡೆ ಗೋವಿಂದರು ಮಡಿಕೆ ಹೊಡೆಯಲು ಯತ್ನಿಸುವಾಗ ಅಕ್ಕ ಪಕ್ಕದ ಜನರು ಬಣ್ಣದ ನೀರನ್ನು ಎರುಚಿ ಯಾರಿಗೂ ನೋವಾಗದ ರೀತಿಯಲ್ಲಿ ಪಿರಮಿಡ್ ಅನ್ನು ಒಡೆಯಲು ಪ್ರಯತ್ನಿಸುತ್ತಾರೆ. ಈ ಸ್ಪರ್ಧೆ ಕೊನೆಯಲ್ಲಿ ವಿಜೇತರಿಗೆ ಆಕರ್ಷಕ ನಗದು ಬಹುಮಾನಗಳನ್ನ ನೀಡಿ ಸತ್ಕರಿಸಲಾಗುತ್ತದೆ. ಅಲ್ಲದೇ, ಹಿಂದಿ, ಮರಾಠಿ, ನಟ-ನಟಿಯರು ದಹಿ ಹಂಡಿ ಪ್ರಮುಖ ಆಕರ್ಷಣೆಯಾಗುವುದು ಈ ಆಚರಣೆಯ ವಿಶೇಷ.

ಇದನ್ನೂ ಓದಿ : ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.