ETV Bharat / bharat

ಹಣ ಪ್ರಿಂಟ್​ ಮಾಡುವುದು ಆರ್​ಬಿಐನ ಕೊನೆಯ ಆಯ್ಕೆಯಾಗಿಬೇಕು; ಡಿ. ಸುಬ್ಬರಾವ್ - ಭಾರತದ ಆರ್ಥಿಕತೆ

ಕೋವಿಡ್​-19 2ನೇ ಅಲೆಯಿಂದ ಉಂಟಾದ ಆರ್ಥಿಕ ಹಿಂಜರಿತ ಕಡಿಮೆ ಮಾಡಲು ಭಾರತ ಸರ್ಕಾರ ಕೋವಿಡ್​ ಬಾಂಡ್​ಗಳ ಮೂಲಕ ಸಾಲ ಸಂಗ್ರಹಿಸಬಹುದು. ಆದರೆ, ಇಂಥ ಸಾಲವು ಬಜೆಟ್​ನಲ್ಲಿ ಇಡಲಾದ ಸಾಲದ ಮಿತಿಯನ್ನು ಮೀರಬಾರದು, ಅದರ ಭಾಗವಾಗಿರಬೇಕು ಎಂದು ಸುಬ್ಬರಾವ್ ತಿಳಿಸಿದರು.

Money printing by RBI should be last option, says D Subbarao
ಹಣ ಪ್ರಿಂಟ್​ ಮಾಡುವುದು ಆರ್​ಬಿಐ ನ ಕೊನೆಯ ಆಯ್ಕೆಯಾಗಿಬೇಕು; ಡಿ. ಸುಬ್ಬರಾವ್
author img

By

Published : Jun 9, 2021, 9:27 PM IST

ನವದೆಹಲಿ: ಕೇಂದ್ರೀಯ ಬ್ಯಾಂಕ್ ಆರ್​ಬಿಐ ನೇರವಾಗಿ ಹಣ ಮುದ್ರಿಸಬಹುದು ಮತ್ತು ಅದರಿಂದ ಸರ್ಕಾರಕ್ಕೆ ಹಣಕಾಸು ಒದಗಿಸಬಹುದು. ಆದರೆ, ಯಾವುದೇ ಪರ್ಯಾಯ ಮಾರ್ಗಗಳಿದ್ದಾಗ ಹಾಗೆ ಮಾಡುವುದನ್ನು ತಪ್ಪಿಸಬೇಕು ಎಂದು ಆರ್‌ಬಿಐ ಮಾಜಿ ಗವರ್ನರ್ ಡಿ. ಸುಬ್ಬರಾವ್ ಬುಧವಾರ ಹೇಳಿದ್ದಾರೆ.

ಆರ್​ಬಿಐ ನೇರವಾಗಿ ಹಣ ಮುದ್ರಿಸಿ ಸರ್ಕಾರಕ್ಕೆ ನೀಡುವ ಯಾವ ಕಾರಣವೂ ಈಗ ಭಾರತದಲ್ಲಿ ಇಲ್ಲ ಎಂದು ಗಮನಸೆಳೆದಿದ್ದಾರೆ. ಮಾರ್ಚ್ 2021 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ನಿರೀಕ್ಷೆಗಿಂತ ಶೇ 7.3 ಕ್ಕಿಂತ ಕಡಿಮೆಯಾಗಿದೆ. 2021-22ರಲ್ಲಿ ಈ ಕೊರತೆಯನ್ನು ಜಿಡಿಪಿಯ ಶೇ 6.8 ಕ್ಕೆ ಇಡಲಾಗಿದೆ. ಇದನ್ನು 2025-26ರ ವೇಳೆಗೆ ಶೇ 4.5ಕ್ಕೆ ಇಳಿಸಲಾಗುವುದು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ.

ಕೊರೊನಾ ವೈರಸ್​ ಎರಡನೇ ಅಲೆಯಿಂದ ಉಂಟಾದ ಅನಿಶ್ಚಿತತೆಗಳ ಮಧ್ಯೆ, ರಿಸರ್ವ್ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದ ದೇಶದ ಬೆಳವಣಿಗೆಯ ದರವನ್ನು ನಿರೀಕ್ಷಿತ ಶೇ 10.5 ರಿಂದ ಶೇ 9.5 ಕ್ಕೆ ಇಳಿಸಿದೆ. ಸಾಲ ಸಂಗ್ರಹಿಸಲು ಕೋವಿಡ್ ಬಾಂಡ್ ಒಂದು ಆಯ್ಕೆಯೇ ಎಂಬ ಪ್ರಶ್ನೆಗೆ, ಮಾರುಕಟ್ಟೆಯಲ್ಲಿ ಸಾಲ ಪಡೆಯುವ ಬದಲು ಕೋವಿಡ್ ಬಾಂಡ್‌ಗಳನ್ನು ಸಾರ್ವಜನಿಕರಿಗೆ ನೀಡುವ ಮೂಲಕ ಸರ್ಕಾರವು ತನ್ನ ಸಾಲ ಅಗತ್ಯತೆಗಳ ಒಂದು ಭಾಗವನ್ನು ಪೂರೈಸಿಕೊಳ್ಳಬಹುದು ಎಂದು ಸುಬ್ಬರಾವ್ ಹೇಳಿದರು.

ಸರ್ಕಾರದ ಹಣಕಾಸಿನ ಒತ್ತಡ ನಿವಾರಿಸಲು ಆರ್‌ಬಿಐ ಹೆಚ್ಚಿನ ಲಾಭ ಗಳಿಸಬಹುದೇ ಎಂಬ ಪ್ರಶ್ನೆಗೆ, ಕೇಂದ್ರ ಬ್ಯಾಂಕ್ ವಾಣಿಜ್ಯ ಸಂಸ್ಥೆಯಲ್ಲ ಮತ್ತು ಲಾಭ ಗಳಿಸುವುದು ಅದರ ಉದ್ದೇಶಗಳಲ್ಲಿ ಒಂದಲ್ಲ ಎಂದು ಹೇಳಿದರು. ಕೋವಿಡ್​-19 ಎರಡನೇ ಅಲೆಯಿಂದ ಉಂಟಾದ ಆರ್ಥಿಕ ಹಿಂಜರಿತವನ್ನು ಕಡಿಮೆ ಮಾಡಲು ಭಾರತ ಸರ್ಕಾರ ಕೋವಿಡ್​ ಬಾಂಡ್​ಗಳ ಮೂಲಕ ಸಾಲ ಸಂಗ್ರಹಿಸಬಹುದು. ಆದರೆ, ಇಂಥ ಸಾಲವು ಬಜೆಟ್​ನಲ್ಲಿ ಇಡಲಾದ ಸಾಲದ ಮಿತಿಯನ್ನು ಮೀರಬಾರದು, ಅದರ ಭಾಗವಾಗಿರಬೇಕು ಎಂದು ಅವರು ತಿಳಿಸಿದರು.

ಸರ್ಕಾರದ ಹಣಕಾಸು ಕೊರತೆ ನೀಗಿಸಲು ಆರ್​ಬಿಐ ಹಣ ಪ್ರಿಂಟ್​ ಮಾಡಬೇಕೆಂದು ಕೆಲವರು ಹೇಳುತ್ತಾರೆ. ಆದರೆ, ಈಗಲೂ ಆರ್​ಬಿಐ ಸರ್ಕಾರದ ಆರ್ಥಿಕ ಕೊರತೆ ನೀಗಿಸಲು ಹಣ ಪ್ರಿಂಟ್​ ಮಾಡುತ್ತಿದೆ. ಆದರೆ ಅದನ್ನು ಪರೋಕ್ಷವಾಗಿ ಮಾಡುತ್ತಿದೆ ಎಂದು ಸುಬ್ಬರಾವ್​ ಹೇಳಿದ್ದಾರೆ.

ಇದಕ್ಕೆ ಉದಾಹರಣೆ ನೀಡಿದ ಅವರು- ರಿಸರ್ವ ಬ್ಯಾಂಕ್ ತನ್ನ ಮುಕ್ತ ಮಾರುಕಟ್ಟೆ ಪ್ರಕ್ರಿಯೆಗಳ ಮೂಲಕ ಬಾಂಡ್​ ಖರೀದಿಸಿದಾಗ ಅಥವಾ ವಿದೇಶಿ ಕರೆನ್ಸಿ ವ್ಯವಹಾರಗಳ ಮೂಲಕ ಡಾಲರುಗಳನ್ನು ಖರೀದಿಸಿದಾಗ ಅದಕ್ಕೆ ಪಾವತಿಸಲು ನೋಟುಗಳನ್ನು ಪ್ರಿಂಟ್ ಮಾಡುತ್ತದೆ. ಈ ಹಣ ಪರೋಕ್ಷವಾಗಿ ಸರ್ಕಾರದ ಸಾಲ ತೀರಿಸಲು ಬಳಕೆಯಾಗುತ್ತದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.