ETV Bharat / bharat

ಹೊಸ ಬಗೆಯ ಸೈಬರ್ ವಂಚನೆ: ಆಸ್ತಿ ನೋಂದಣಿ ಮಾಹಿತಿ ಕದ್ದು ಬ್ಯಾಂಕ್ ಖಾತೆಗೆ ಕನ್ನ - ಸೈಬರ್ ಕ್ರಿಮಿನಲ್ ಗ್ಯಾಂಗ್‌

ಆಸ್ತಿ ನೋಂದಣಿ ವೆಬ್​ಸೈಟ್​ನಲ್ಲಿ ಲಭ್ಯವಿರುವ ಸಾರ್ವಜನಿಕರ ವೈಯಕ್ತಿಕ ಮಾಹಿತಿಗಳನ್ನು ಬಳಸಿಕೊಂಡು ಜನರ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

cyber-crime-in-up criminals withdrawing money

author img

By

Published : Jun 2, 2023, 6:33 PM IST

ಆಗ್ರಾ : ಪ್ರಕರಣ 1- ಮೈನ್‌ಪುರಿಯ ಬೇವರ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ನಿವಾಸಿ ಸುಶೀಲ್‌ ಕುಮಾರ್‌ ಎಂಬುವರು 19,000 ರೂ.ಗಳ ಸೈಬರ್‌ ವಂಚನೆ ಪ್ರಕರಣ ದಾಖಲಿಸಿದ್ದರು. ಮೈನ್‌ಪುರಿ ಪೊಲೀಸರು ಮತ್ತು ಸೈಬರ್ ಕ್ರೈಂ ಸೆಲ್ ಸೈಬರ್ ಕ್ರಿಮಿನಲ್ ಗ್ಯಾಂಗ್‌ನ ಆರು ದರೋಡೆಕೋರರನ್ನು ಬಂಧಿಸಿದ್ದಾರೆ. ಸೈಬರ್ ಅಪರಾಧಿಗಳಿಂದ 64,030 ರೂಪಾಯಿ ನಗದು, ಮೊಬೈಲ್, ಲ್ಯಾಪ್‌ಟಾಪ್, ಬಯೋಮೆಟ್ರಿಕ್ ಯಂತ್ರ, ಸೀಲ್, ಕಾರು ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣ 2: ಆಗ್ರಾದ ಸದರ್ ಬಜಾರ್ ನಿವಾಸಿ ರಮೇಶ್ ಕುಮಾರ್ ಅವರು ಸೈಬರ್ ಸೆಲ್‌ನಲ್ಲಿ 25,000 ರೂ.ಗಳ ಸೈಬರ್ ವಂಚನೆ ಬಗ್ಗೆ ದೂರು ನೀಡಿದ್ದರು. ಸೈಬರ್ ಕ್ರಿಮಿನಲ್ ಹರ್ಯಾಣದಲ್ಲಿರುವ ತನ್ನ ಬ್ಯಾಂಕ್ ಖಾತೆಯಿಂದ ಮೊತ್ತವನ್ನು ಎಗರಿಸಿದ್ದ. ಇಂಥ 4-5 ಪ್ರಕರಣಗಳು ಮುನ್ನೆಲೆಗೆ ಬಂದಿವೆ. ಇದರಲ್ಲಿ ಜಮೀನು ಖರೀದಿಸುವ ಮತ್ತು ಮಾರಾಟ ಮಾಡುವವರ ಬ್ಯಾಂಕ್ ಖಾತೆಯಿಂದ ಹಣವನ್ನು ಲಪಟಾಯಿಸಲಾಗಿದೆ.

ಈ ಎರಡು ಪ್ರಕರಣಗಳು ಕೇವಲ ಉದಾಹರಣೆಗಳಾಗಿವೆ. ನೀವೂ ಇತ್ತೀಚೆಗೆ ಆಸ್ತಿಯನ್ನು ಖರೀದಿಸಿದ್ದರೆ ಅಥವಾ ಮಾರಾಟ ಮಾಡಿದ್ದರೆ ಅಥವಾ ಮನೆಯನ್ನು ನೋಂದಾಯಿಸಿದ್ದರೆ ಅತ್ಯಂತ ಜಾಗರೂಕರಾಗಿರಿ. ಸೈಬರ್ ಕ್ರಿಮಿನಲ್‌ಗಳು ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಬಹುದು. ಇದು ಹೇಗೆ ಸಾಧ್ಯವಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.

ಭೂಮಿ ಖರೀದಿದಾರ, ಮಾರಾಟಗಾರ ಮತ್ತು ಸಾಕ್ಷಿಗಳ ಮಾಹಿತಿ ಈ ಎಲ್ಲ ಮಾಹಿತಿ ಡಿಜಿಟಲ್ ರೂಪದಲ್ಲಿ ನೋಂದಣಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಸಾರ್ವಜನಿಕವಾಗಿ ಲಭ್ಯವಿರುತ್ತದೆ. ಹೌದು... ನೋಂದಣಿ ಇಲಾಖೆಯ ವೆಬ್‌ಸೈಟ್‌ನಿಂದ ಡೇಟಾವನ್ನು ಕದಿಯುವ ಮೂಲಕ ಜನರನ್ನು ವಂಚಿಸಲಾಗಿದೆ. ಆಗ್ರಾದಲ್ಲಿ ಇಂತಹ ಹಲವಾರು ಪ್ರಕರಣಗಳು ಈಗಾಗಲೇ ಘಟಿಸಿವೆ. ಮೈನ್‌ಪುರಿ ಪೊಲೀಸರು ಗುರುವಾರ ಅಂತಹ ಒಂದು ಅಂತಾರಾಜ್ಯ ಸೈಬರ್ ಕ್ರಿಮಿನಲ್ ಗ್ಯಾಂಗ್ ಅನ್ನು ಭೇದಿಸಿದ್ದಾರೆ.

ಈ ಸೈಬರ್ ಕ್ರಿಮಿನಲ್​ಗಳ ಗ್ಯಾಂಗ್ ನೋಂದಣಿ ಇಲಾಖೆಯ ವೆಬ್‌ಸೈಟ್‌ನಿಂದ ಬೆರಳಚ್ಚು ಡೌನ್‌ಲೋಡ್ ಮಾಡುವ ಮೂಲಕ ಜನರ ಆಧಾರ್ ಕಾರ್ಡ್‌ಗಳನ್ನು ಕ್ಲೋನಿಂಗ್ ಮಾಡುವ ಮೂಲಕ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆ ಮಾಡಿಕೊಳ್ಳುತ್ತಿತ್ತು. ಪೊಲೀಸರ ವಿಚಾರಣೆ ವೇಳೆ ಸೈಬರ್ ಅಪರಾಧಿಗಳು ಹಲವು ಆಘಾತಕಾರಿ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.

ಸರ್ಕಾರಿ ವೆಬ್‌ಸೈಟ್‌ನಿಂದ ಡೇಟಾ ಕದಿಯುವುದು ಹೀಗೆ: ಆಗ್ರಾ ಸೈಬರ್ ಕ್ರೈಮ್ ಸೆಲ್ ನೀಡಿದ ಮಾಹಿತಿಯ ಪ್ರಕಾರ, ಸೈಬರ್ ಅಪರಾಧಿಗಳು ಮೊದಲು ತಹಸಿಲ್‌ನಿಂದ ಭೂಮಿ ನೋಂದಣಿ ಮಾಡಿಸುವ ಜನರ ಡೇಟಾವನ್ನು ಸಂಗ್ರಹಿಸುತ್ತಾರೆ. ನೋಂದಣಿ ಇಲಾಖೆಯ ವೆಬ್‌ಸೈಟ್‌ನೊಂದಿಗೆ ಆ ಡೇಟಾವನ್ನು ತಹಸಿಲ್-ವಾರು ಹೊಂದಾಣಿಕೆ ಮಾಡುತ್ತಾರೆ. ಹೀಗೆ ಮಾಡುವುದರಿಂದ ಸೈಬರ್ ಅಪರಾಧಿಗಳಿಗೆ ಭೂಮಿಯ ಖರೀದಿದಾರ, ಮಾರಾಟಗಾರರು ಮತ್ತು ಸಾಕ್ಷಿಗಳ ಬೆರಳಚ್ಚುಗಳು ಲಭ್ಯವಾಗುತ್ತವೆ. ನಂತರ ಅವನ್ನು ಡೌನ್ಲೋಡ್ ಮಾಡಿಕೊಳ್ಳಲಾಗುತ್ತದೆ.

ಇದಾದ ಬಳಿಕ ಕಂಪ್ಯೂಟರ್ ಸಿಸ್ಟಂ ಅಥವಾ ಲ್ಯಾಪ್ ಟಾಪ್, ಬಟರ್ ಪೇಪರ್ ಹಾಗೂ ಇತರೆ ಉಪಕರಣಗಳ ಸಹಾಯದಿಂದ ಜನರ ಬೆರಳಚ್ಚು ತದ್ರೂಪುಗಳನ್ನು ಸಿದ್ಧಪಡಿಸಲಾಗುತ್ತದೆ. ನಂತರ, ಅವರ ಸೆಟ್ಟಿಂಗ್‌ನ ಸಾರ್ವಜನಿಕ ಸೇವಾ ಕೇಂದ್ರದಲ್ಲಿ ಜನರ KYC ಅನ್ನು ಆನ್‌ಲೈನ್‌ನಲ್ಲಿ ಮಾಡುವ ಮೂಲಕ, ಅವರು ತಮ್ಮ ಫಿಂಗರ್ ಪ್ರಿಂಟ್‌ನ ಕ್ಲೋನ್ ಅನ್ನು ಸಕ್ರಿಯಗೊಳಿಸುತ್ತಾರೆ.

ಸಾರ್ವಜನಿಕ ಸೇವಾ ಕೇಂದ್ರದಿಂದ ಬಳಕೆದಾರರ ಐಡಿ ಮತ್ತು ಪಾಸ್‌ವರ್ಡ್ ತೆಗೆದುಕೊಳ್ಳುವ ಮೂಲಕ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಿಂದ ಲಾಗಿನ್ ಮಾಡಿ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಾಧನದಿಂದ ನಕಲಿ ತದ್ರೂಪಿ ಫಿಂಗರ್ ಪ್ರಿಂಟ್‌ನೊಂದಿಗೆ ಜನರ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂಪಡೆಯುತ್ತಾರೆ.

ತುರ್ತಾಗಿ 1930 ಗೆ ಕರೆ ಮಾಡಿ: ಆಗ್ರಾ ಪೊಲೀಸ್ ಕಮಿಷನರೇಟ್‌ನ ಸೈಬರ್ ಕ್ರೈಮ್ ಸೆಲ್‌ನ ಉಸ್ತುವಾರಿ ಇನ್ಸ್‌ಪೆಕ್ಟರ್ ಸುಲ್ತಾನ್ ಸಿಂಗ್ ಮಾತನಾಡಿ, ಸೈಬರ್ ಅಪರಾಧಿಗಳು ಪ್ರತಿದಿನ ಹೊಸ ವಿಧಾನಗಳನ್ನು ಅಳವಡಿಸಿಕೊಂಡು ಜನರನ್ನು ವಂಚಿಸುತ್ತಿದ್ದಾರೆ. ಸ್ವಲ್ಪ ಕಾಳಜಿ ವಹಿಸಿದರೆ ಜನರು ಸೈಬರ್ ವಂಚನೆ ಮತ್ತು ಸೈಬರ್ ಕ್ರೈಮ್‌ಗೆ ಬಲಿಯಾಗುವುದನ್ನು ತಪ್ಪಿಸಬಹುದು. ಸೈಬರ್ ಅಪರಾಧ ಅಥವಾ ಸೈಬರ್ ವಂಚನೆಗೆ ಬಲಿಯಾದವರು www.cybercrime.gov.in ಗೆ ಭೇಟಿ ನೀಡುವ ಮೂಲಕ ತಮ್ಮ ದೂರು ನೋಂದಾಯಿಸಿಕೊಳ್ಳಬಹುದು. ಸೈಬರ್ ವಂಚನೆಯ ಸಂದರ್ಭದಲ್ಲಿ ಜನರು ತಕ್ಷಣ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಬೇಕು. ಜೊತೆಗೆ ನಿಮ್ಮ ಸಂಬಂಧಪಟ್ಟ ಪೊಲೀಸ್ ಠಾಣೆ ಮತ್ತು ಸೈಬರ್ ಸೆಲ್‌ಗೆ ದೂರು ನೀಡಿ.

ಇದನ್ನೂ ಓದಿ : ಕ್ರಿಪ್ಟೊ ವಹಿವಾಟು ಸಾರ್ವಕಾಲಿಕ ಕುಸಿತ: 32 ತಿಂಗಳ ಕನಿಷ್ಠ ಮಟ್ಟದಲ್ಲಿ ಮಾರುಕಟ್ಟೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.