ETV Bharat / bharat

ಮನ ತೃಪ್ತಿಗಾಗಿ ಸುಮಾರು 50ಕ್ಕೂ ಹೆಚ್ಚು ಹುಡುಗಿಯರಿಂದ ಅಶ್ಲೀಲ ವಿಡಿಯೋ ಪಡೆದ ಬಾಲಕ! - ನವದೆಹಲಿ ಸೈಬರ್​ ಅಪರಾಧ

ಬಾಲಕನೊಬ್ಬ ಕೇವಲ ತನ್ನ ಮನ ತೃಪ್ತಿಗಾಗಿ ಸುಮಾರು 50ಕ್ಕೂ ಹೆಚ್ಚು ಹುಡುಗಿಯರಿಂದ ಅಶ್ಲೀಲ ವಿಡಿಯೋ ಪಡೆದಿರುವ ಘಟನೆ ದೇಶದ ರಾಜಧಾನಿ ನವದೆಹಲಿಯಲ್ಲಿ ಕಂಡು ಬಂದಿದೆ.

cyber cell caught minor  delhi cyber cell caught minor  south west cyber cell caught  south west delhi crime news  ಬಾಲಕನನ್ನು ಬಂಧಿಸಿದ ಸೈಬರ್​ ಪೊಲೀಸರು,  ನವದೆಹಲಿಯಲ್ಲಿ ಬಾಲಕನನ್ನು ಬಂಧಿಸಿದ ಸೈಬರ್​ ಪೊಲೀಸರು,  ನವದೆಹಲಿ ಸೈಬರ್​ ಅಪರಾಧ  ನವದೆಹಲಿ ಸೈಬರ್​ ಅಪರಾಧ ಸುದ್ದಿ
ಸಂಗ್ರಹ ಚಿತ್ರ
author img

By

Published : Feb 12, 2021, 12:57 PM IST

Updated : Feb 12, 2021, 1:33 PM IST

ನವದೆಹಲಿ: ಆನ್‌ಲೈನ್ ವಂಚನೆ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಋತ್ಯ ಜಿಲ್ಲೆಯ ಸೈಬರ್ ಸೆಲ್ ತಂಡವು ಅಪ್ರಾಪ್ತನೊಬ್ಬನನ್ನು ಬಂಧಿಸಿದೆ. ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಆ ಬಾಲಕನ ಅಸಲಿಯತ್ತು ಬೆಳಕಿಗೆ ಬಂದಿದೆ.

ಇನ್​​ಸ್ಟಾಗ್ರಾಂನಲ್ಲಿ ಗಾಳ ಹಾಕುತ್ತಿದ್ದ ಬಾಲಕ!

ಬಾಲಕ ಇನ್​​​​ಸ್ಟಾಗ್ರಾಂನಲ್ಲಿ ಚೆಂದದ ಹುಡುಗಿಯರ ಫೋಟೋಗಳನ್ನು ಡೌನ್ಲೋಡ್​​​ ಮಾಡಿಕೊಂಡು ಅಶ್ಲೀಲ ಆ್ಯಪ್​ ಮೂಲಕ ಅವರ ಫೋಟೋಗೆ ನಗ್ನವಿರುವ ಫೋಟೋ ಸೇರಿಸಿ ವಿರೂಪಗೊಳಿಸುತ್ತಿದ್ದನು. ಬಳಿಕ ತನ್ನ ಇನ್​​​ಸ್ಟಾಗ್ರಾಂ ಡಿಪಿಗೆ ಹುಡುಗಿ ಫೋಟೋ ಹಾಕಿ ಅವರಿಗೆ ಫ್ರೆಂಡ್​ ರಿಕ್ವೆಸ್ಟ್​ ಕಳುಹಿಸುತ್ತಿದ್ದ. ಪರಿಚಯ ಬೆಳೆದ ಬಳಿಕ ಅಶ್ಲೀಲವಾಗಿ ಕ್ರಿಯೇಟ್​ ಮಾಡಿದ ಅವರ ಫೋಟೋಗಳನ್ನು ಕಳುಹಿಸಿ ಬ್ಲಾಕ್​ಮೇಲ್​ ಮಾಡುತ್ತಿದ್ದ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಕಿರಿಯ ವಯಸ್ಸಿನ ಹುಡುಗಿರೇ ಇವನ ಟಾರ್ಗೇಟ್​!

ಬಾಲ ಆರೋಪಿ ಬಗ್ಗೆ ಮಾಹಿತಿ ನೀಡಿದ ಪೊಲೀಸ್​ ಅಧಿಕಾರಿ

ಈ ಬಾಲಕ ಕಿರಿಯ ವಯಸ್ಸಿನ ಹುಡುಗಿಯರ ಫೋಟೋ ಕದ್ದು, ಅದಕ್ಕೆ ಅಶ್ಲೀಲ ಫೋಟೋ ಸೇರಿಸಿ ವಿರೂಪಗೊಳಿಸುತ್ತಿದ್ದ. ​ಬಳಿಕ ಅವರಿಗೆ ಆ ಫೋಟೋ ಕಳುಹಿಸಿ ಬ್ಲಾಕ್​ಮೇಲ್​ ಮಾಡತ್ತಿದ್ದ. ಈ ಬಾಲಕ ಆ ಹುಡುಗಿಯರಿಗೆ ಬಾತ್​ರೂಂಗೆ ತೆರಳಿ ನಗ್ನವಾಗಿರುವ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸುವಂತೆ ಹೇಳುತ್ತಿದ್ದ. ಇಲ್ಲವಾದಲ್ಲಿ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದ. ಇದಕ್ಕೆ ಬೆದರಿದ ಎಷ್ಟೋ ಹುಡುಗಿಯರು ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಆತನಿಗೆ ಕಳುಹಿಸಿದ್ದಾರೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಪ್ರಕರಣ ದಾಖಲು...

ಆನ್‌ಲೈನ್ ವಂಚನೆ ಮತ್ತು ಅಶ್ಲೀಲ ವಿಡಿಯೋಗಳನ್ನು ಕಳುಹಿಸಿದ ಪ್ರಕರಣವೊಂದು ಆರ್​ಕೆ​ ಪುರಂ ಪೊಲೀಸ್​ ಠಾಣೆಯಲ್ಲಿ ದಾಖಲಾಗಿತ್ತು. ಪ್ರಕರಣದ ಗಂಭೀರತೆ ಅರಿತ ನೈಋತ್ಯ ಜಿಲ್ಲೆಯ ಹೆಚ್ಚುವರಿ ಡಿಸಿಪಿ ಅಮಿತ್ ಗೋಯಲ್ ಪ್ರತಾಪ್ ಸೈಬರ್ ಸೆಲ್ ಇನ್ಸ್‌ಪೆಕ್ಟರ್ ರಾಮನ್ ಕುಮಾರ್ ಸಿಂಗ್ ನೇತೃತ್ವದಲ್ಲಿ ತಂಡವನ್ನು ರಚಿಸಿ ಆರೋಪಿ ಪತ್ತೆಗೆ ಜಾಲ ಬೀಸಿದ್ದರು.

ಬಾಲ ಆರೋಪಿ ಅರೆಸ್ಟ್​

ಸೈಬರ್ ಸೆಲ್ ತಂಡ ತಾಂತ್ರಿಕ ಮಾಹಿತಿ ಸಂಗ್ರಹಿಸಿ ಆರೋಪಿಯನ್ನು ಆತನ ಮನೆಯಲ್ಲೇ ಬಂಧಿಸಿತು. ಬಾಲ ಆರೋಪಿ ಹರಿಯಾಣದ ಫರಿದಾಬಾದ್ ಜಿಲ್ಲೆಯ ಹಳ್ಳಿಯೊಂದರ ನಿವಾಸಿ . ಬಾಲ ಆರೋಪಿಯನ್ನು ಬಂಧಿಸಿದಾಗ ಆತನ ಮೊಬೈಲ್​ನಲ್ಲಿ ಕೆಲವು ಅಶ್ಲೀಲ ವಿಡಿಯೋಗಳು ಇದ್ದವು ಎಂದು ತಿಳಿದು ಬಂದಿದೆ.

ಆತ್ಮ ತೃಪ್ತಿಗಾಗಿ ಈ ಕೆಲಸ!

ಬಂಧಿಸಿ ವಿಚಾರಣೆ ನಡೆಸಿದಾಗ ಆ ಬಾಲ ಆರೋಪಿ ಮನ ಸಂತೋಷ ಮತ್ತು ವೈಯಕ್ತಿಕ ತೃಪ್ತಿಗಾಗಿ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಪಡೆಯುತ್ತಿದ್ದೆ. ಈಗಾಗಲೇ ಸುಮಾರು 50 ಕ್ಕೂ ಹೆಚ್ಚು ಹುಡುಗಿಯರ ಬಳಿ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಪಡೆದುಕೊಂಡಿದ್ದಾನೆ ಎಂದು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.

ಈ ಘಟನೆ ಕುರಿತು ಪೊಲೀಸ್ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ.

Last Updated : Feb 12, 2021, 1:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.