ETV Bharat / bharat

ಕಾಡು ಪ್ರಾಣಿಗಳ ದಾಳಿ ತಡೆಯಲು ವಿಫಲವಾದ ಕೇರಳ: ಕೇಂದ್ರ ಕೋಟಿಗಟ್ಟಲೆ ಕೊಟ್ಟರೂ ಬಳಸದ ರಾಜ್ಯ

ಮಾನವ-ವನ್ಯಜೀವಿ ಸಂಘರ್ಷಗಳು ಹೆಚ್ಚಾಗುತ್ತಿದ್ದರೂ ಈ ಮಾಹಿತಿಯ ಪ್ರಕಾರ ಅರಣ್ಯ ಇಲಾಖೆಯು ಹಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಆಸಕ್ತಿ ತೋರಿಸುತ್ತಿಲ್ಲ ಎಂಬುದಕ್ಕೆ ಪುರಾವೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಇಡುಕ್ಕಿ ಸೇರಿದಂತೆ ಬೆಟ್ಟದ ಜಿಲ್ಲೆಗಳಲ್ಲೂ ವನ್ಯಜೀವಿ ದಾಳಿಯ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ.

crores-given-to-prevent-wild-animal-attack-unutilized-by-the-forest-department-in-idukki
ಕಾಡು ಪ್ರಾಣಿಗಳ ದಾಳಿ ತಡೆಯಲು ವಿಫಲವಾದ ಕೇರಳ
author img

By

Published : Feb 9, 2021, 7:06 PM IST

Updated : Feb 9, 2021, 7:28 PM IST

ಇಡುಕ್ಕಿ (ಕೇರಳ) : ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯವು ನಿಗದಿಪಡಿಸಿದ ಹಣವನ್ನು ರಾಜ್ಯ ಅರಣ್ಯ ಇಲಾಖೆ ಪರಿಣಾಮಕಾರಿಯಾಗಿ ಬಳಸಿಕೊಂಡಿಲ್ಲ ಎಂದು ಮಾಹಿತಿ ಹಕ್ಕು (ಆರ್‌ಟಿಐ) ದತ್ತಾಂಶದಿಂದ ಬಹಿರಂಗವಾಗಿದೆ.

ಆರ್‌ಟಿಐ ಮಾಹಿತಿ ಪ್ರಕಾರ, ಇಲಾಖೆ ಕಳೆದ 5 ವರ್ಷಗಳಲ್ಲಿ ನಿಗದಿಪಡಿಸಿದ ನಿಧಿಯ ಶೇಕಡಾ 50 ರಷ್ಟು ಹಣವನ್ನು ಮಾತ್ರ ಖರ್ಚು ಮಾಡಿದೆ. ಪ್ರಾಜೆಕ್ಟ್ ಎಲಿಫೆಂಟ್, ಪ್ರಾಜೆಕ್ಟ್ ಟೈಗರ್ ಮತ್ತು ವನ್ಯಜೀವಿ ಆವಾಸಸ್ಥಾನ ಅಭಿವೃದ್ಧಿ ಯೋಜನೆಗಳ ಅಡಿ ಈ ಹಣವನ್ನು ಹಂಚಿಕೆ ಮಾಡಲಾಗಿದೆ.

ಈ ಯೋಜನೆಗಳಲ್ಲಿ ರಾಜ್ಯವು ಒಟ್ಟು ವೆಚ್ಚದ 40 ಪ್ರತಿಶತವನ್ನು ಭರಿಸಿದರೆ ಕೇಂದ್ರವು ಶೇಕಡಾ 60 ರಷ್ಟು ಹಣವನ್ನು ನೀಡುತ್ತದೆ. 2014 ರಿಂದ 2020 ರವರೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯವು ಕೇರಳಕ್ಕೆ 71.33 ಕೋಟಿ ರೂ. ನೀಡಿದೆ . ಆದರೆ, ರಾಜ್ಯ ಇದುವರೆಗೆ ಕೇವಲ 32.74 ಕೋಟಿ ರೂ. ಮಾತ್ರ ಬಳಸಿದೆ ಎಂದು ಆರ್‌ಟಿಐ ಅಂಕಿ ಅಂಶಗಳು ತಿಳಿಸಿವೆ.

ಕೊಚ್ಚಿ ಮೂಲದ ಆರ್‌ಟಿಐ ಕಾರ್ಯಕರ್ತ ಕೆ ಗೋವಿಂದನ್ ನಂಬೂದಿರಿಯವರು ಈ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಮಾನವ - ವನ್ಯಜೀವಿ ಸಂಘರ್ಷಗಳು ಹೆಚ್ಚಾಗುತ್ತಿದ್ದರೂ ಈ ಮಾಹಿತಿಯ ಪ್ರಕಾರ ಅರಣ್ಯ ಇಲಾಖೆಯು ಹಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಆಸಕ್ತಿ ತೋರಿಸುತ್ತಿಲ್ಲ ಎಂಬುದಕ್ಕೆ ಪುರಾವೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಇಡುಕ್ಕಿ ಸೇರಿದಂತೆ ಬೆಟ್ಟದ ಜಿಲ್ಲೆಗಳಲ್ಲೂ ವನ್ಯಜೀವಿ ದಾಳಿಯ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ.

ಕಾಡು ಪ್ರಾಣಿಗಳ ದಾಳಿ ತಡೆಯಲು ವಿಫಲವಾದ ಕೇರಳ

ಕೇಂದ್ರ ಸಚಿವಾಲಯದ ನಿಧಿ ಹಂಚಿಕೆಯ ಹೊರತಾಗಿಯೂ, ರಾಜ್ಯ ಅರಣ್ಯ ಇಲಾಖೆಯು ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಕಾಡು ಪ್ರಾಣಿಗಳು ವಾಸಿಸುವ ಪ್ರದೇಶಗಳಿಗೆ ಪ್ರವೇಶಿಸುವುದನ್ನು ತಡೆಯಲು ಮತ್ತು ಮಾನವ - ವನ್ಯಜೀವಿ ಸಂಘರ್ಷಗಳನ್ನು ಕಡಿಮೆ ಮಾಡಲು ಹಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಮಾನವರೊಂದಿಗಿನ ಘರ್ಷಣೆಯನ್ನು ತಪ್ಪಿಸಲು ಅರಣ್ಯ ಗಡಿಗಳು, ಸೌರಶಕ್ತಿ ಚಾಲಿತ ಬೇಲಿಗಳು, ರೇಲಿಂಗ್‌ಗಳು ಮತ್ತು ಹೂಳೆತ್ತುವಿಕೆಗಳನ್ನು ನಿರ್ಮಿಸಲು ಈ ನಿಧಿಯನ್ನು ಬಳಸಲಾಗುತ್ತಿದೆ.

ಕಾಡಿನೊಳಗಿನ ಪ್ರಾಣಿಗಳಿಗೆ ನೀರು ಮತ್ತು ಆಹಾರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಯೋಜನೆಗಳನ್ನು ಜಾರಿಗೆ ತರಬೇಕು. ಇದಲ್ಲದೇ, ಜನರಿಗೆ, ವಿಶೇಷವಾಗಿ ಅರಣ್ಯ ಪ್ರದೇಶಗಳಿಗೆ ಹತ್ತಿರದಲ್ಲಿ ವಾಸಿಸುವವರಿಗೆ, ಕಾಡು ಪ್ರಾಣಿಗಳ ದಾಳಿಯ ಬಗ್ಗೆ ಅರಿವು ಮೂಡಿಸಲು ಜಾಗೃತಿ ಅಭಿಯಾನ ನಡೆಸಬೇಕಾಗಿದೆ. ಆದರೆ, ಇವುಗಳಲ್ಲಿ ಯಾವುದನ್ನೂ ಅರಣ್ಯ ಇಲಾಖೆ ಅಧಿಕಾರಿಗಳು ಪರಿಣಾಮಕಾರಿಯಾಗಿ ನಿರ್ವಹಿಸಿಲ್ಲ ಎಂದು ಆರ್‌ಟಿಐ ಈ ಮುಖಾಂತರ ಸಾಬೀತುಪಡಿಸುತ್ತದೆ.

Last Updated : Feb 9, 2021, 7:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.