ETV Bharat / bharat

ಬೆಳೆ ನಷ್ಟ, ಸಾಲಬಾಧೆ: ತೆಲಂಗಾಣದಲ್ಲಿ ನಾಲ್ವರು ರೈತರು ಆತ್ಮಹತ್ಯೆ! - ಸಾಲಬಾಧೆ ರೈತ ಆತ್ಮಹತ್ಯೆ

Farmers Suicide: ಬೆಳೆ ನಷ್ಟ ಹಾಗೂ ಸಾಲಬಾಧೆಯಿಂದ ನೊಂದೆ ನಾಲ್ವರು ರೈತರು ಆತ್ಮಹತ್ಯೆಗೆ ಶರಣಾಗಿದ್ಧಾರೆ. ತೆಲಂಗಾಣ ರಾಜ್ಯದ ಮುನುಗೋಡು, ಸಂಸ್ಥಾನ ನಾರಾಯಣಪುರ, ರೇಗೊಂಡ ಹಾಗೂ ಮುಲುಗು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

Representative image
ಪ್ರಾತಿನಿಧಿಕ ಚಿತ್ರ
author img

By

Published : Aug 12, 2023, 10:05 AM IST

ಹೈದರಾಬಾದ್​(ತೆಲಂಗಾಣ): ಅತಿವೃಷ್ಟಿಯಿಂದ ಬೆಳೆ ನಷ್ಟ ಹಾಗೂ ಸಾಲಬಾಧೆ ತಾಳಲಾರದೇ ರಾಜ್ಯದ ವಿವಿಧೆಡೆ ಶುಕ್ರವಾರ ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆಲಂಗಾಣದ ಮುನುಗೋಡು, ಸಂಸ್ಥಾನ ನಾರಾಯಣಪುರ, ರೇಗೊಂಡ ಹಾಗೂ ಮುಲುಗು ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ. ಮೃತ ರೈತರನ್ನು ರಾಜಯ್ಯ (55), ರಾಮಕೃಷ್ಣ ರೆಡ್ಡಿ (43), ರಾಜಶೇಖರ್ ರೆಡ್ಡಿ (35) ಹಾಗೂ ಅನ್ನಂ ಕೃಷ್ಣ (32) ಎಂದು ಗುರುತಿಸಲಾಗಿದೆ.

ಮೊದಲ ಪ್ರಕರಣ: ಜಯಶಂಕರ್ - ಭೂಪಾಲಪಲ್ಲಿ ಜಿಲ್ಲೆಯ ಕೊತ್ತಪಲ್ಲಿಗೋರಿ ಮಂಡಲ ವೆಂಕಟೇಶ್ವರಪಲ್ಲಿಯ ರೈತ ಗಟ್ಟು ರಾಜಯ್ಯ 1.20 ಎಕರೆ ಜಮೀನು ಹೊಂದಿದ್ದರು. ಇದರ ಜತೆಗೆ 1.20 ಎಕರೆ ಜಮೀನು ಗುತ್ತಿಗೆ ಪಡೆದು ಮೆಣಸಿನ ಗಿಡ ನಾಟಿ ಮಾಡಿದ್ದರು. ಆದರೆ ಕರಿ ಹುಳು ಬಾಧೆಯಿಂದ ಬೆಳೆ ನಾಶವಾಗಿದೆ. ಇದಕ್ಕಾಗಿ ಅವರು 5 ಲಕ್ಷ ರೂ.ಗಳ ಸಾಲ ಮಾಡಿದ್ದರು. ಬಳಿಕ ಹತ್ತಿ ನಾಟಿ ಮಾಡಿದ್ದರು. ಆದರೆ ಇತ್ತೀಚೆಗೆ ಸುರಿದ ಮಳೆಗೆ ಬಹುತೇಕ ಗಿಡಗಳು ಕೊಚ್ಚಿ ಹೋಗಿವೆ. ಶುಕ್ರವಾರ ಬೆಳಗ್ಗೆ ವಿದ್ಯುತ್ ಮೋಟರ್ ಕೂಡ ಸುಟ್ಟು ಹೋಗಿದೆ. ಇದರಿಂದ ನೊಂದ ರೈತ ಗದ್ದೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

2ನೇ ಘಟನೆ: ಮುಲುಗು ಮಂಡಲದ ದೇವಗಿರಿಪಟ್ಟಣದ ಎರ್ರಂ ರಾಮಕೃಷ್ಣ ರೆಡ್ಡಿ ಎಂಬುವರು ತಮ್ಮ 30 ಗುಂಟೆ ಜಮೀನು ಸೇರಿ 7 ಎಕರೆ ಜಮೀನು ಗುತ್ತಿಗೆ ಪಡೆದು ಹತ್ತಿ ಕೃಷಿ ಮಾಡಿದ್ದರು. ಇತ್ತೀಚೆಗಷ್ಟೇ ಸುರಿದ ಭಾರಿ ಮಳೆಗೆ ಸಂಪೂರ್ಣ ಹಾನಿಯಾಗಿದೆ. ಬೇಸಾಯಕ್ಕೆ ಮಹಿಳಾ ಸಂಘ ಸೇರಿ ಬ್ಯಾಂಕ್​​ನಿಂದ 3.50 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ತೀರಿಸಲಾಗದೇ ಮೃತಪಟ್ಟಿದ್ದಾರೆ.

3ನೇ ಪ್ರಕರಣ: ಯಾದಾದ್ರಿ-ಭುವನಗಿರಿ ಜಿಲ್ಲೆ ಚೌಟುಪ್ಪಲ ಮಂಡಲದ ಚಿಂತಲಗುಡೆಂ ನಿವಾಸಿ ಕೊಮರೆಲ್ಲಿ ರಾಜಶೇಖರ್ ರೆಡ್ಡಿ (35) ಎಂಬುವರು ತಮ್ಮಲ್ಲಿರುವ ಎರಡು ಎಕರೆ ಜೊತೆಗೆ ಮೂರು ಎಕರೆಯನ್ನು ಗುತ್ತಿಗೆ ಪಡೆದು ಕೃಷಿ ಮಾಡಿದ್ದರು. ಆದರೆ, ಬೆಳೆ ಇಳುವರಿ ಚೆನ್ನಾಗಿಲ್ಲದ ಕಾರಣ 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಕಲೆದ ಎರಡು ದಿನಗಳ ಹಿಂದೆ ಮನೆ ಬಿಟ್ಟು ಬಂದಿದ್ದ ರಾಜಶೇಖರ್ ಸಂಸ್ಥಾನ ನಾರಾಯಣಪುರಂ ಮಂಡಲದ ಗುಡಿಮಲ್ಕಾಪುರಂ ಪರಿಸರದಲ್ಲಿ ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರಿಗೆ ಓರ್ವ ಮಗನಿದ್ದು, ಕಳೆದ ಒಂದು ವಾರದ ಹಿಂದೆ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳು ಜನಿಸಿದ ಒಂದೇ ವಾರಕ್ಕೆ ರೈತ ಆತ್ಮಹತ್ಯೆ ಮಾಡಿಕೊಂಡಿರುವುದು ದುರಂತವೇ ಸರಿ.

4ನೇ ಪ್ರಕರಣ: ನಲ್ಗೊಂಡ ಜಿಲ್ಲೆಯ ಕೊರಟಿಕಲ್​ನ ಮುನುಗೋಡು ಮಂಡಲದ ರೈತ ಅನ್ನಂ ಕೃಷ್ಣ (32) ಸ್ವಂತ ಜಮೀನಿನ ಜತೆಗೆ ಎರಡೂವರೆ ಎಕರೆ ಜಮೀನು ಗುತ್ತಿಗೆ ಪಡೆದು ಹತ್ತಿ ಬೆಳೆದಿದ್ದರು. ನಿರೀಕ್ಷಿತ ಇಳುವರಿ ಬಾರದೆ 4 ಲಕ್ಷ ರೂ. ಸಾಲ ಮಾಡಿದ್ದರಂತೆ. ಅಲ್ಲದೇ ಕಳೆದ ಎರಡು ತಿಂಗಳ ಹಿಂದೆ ಪತ್ನಿ ಲಾವಣ್ಯ ಅನಾರೋಗ್ಯದ ಕಾರಣ ಖಾಸಗಿ ಆಸ್ಪತ್ರೆ ದಾಖಲಾಗಿದ್ದು, 2.50 ಲಕ್ಷ ರೂ.ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಇಷ್ಟೆಲ್ಲ ಸಾಲ ತೀರಿಸುವುದು ಹೇಗೆ? ಎಂದು ತಿಳಿಯದೇ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ತಪ್ಪಾದ ಔಷಧಿ ಸಿಂಪಡಣೆ: ಕಣ್ಣೆದುರೇ ಕಮರಿದ 4 ಎಕರೆ ದ್ರಾಕ್ಷಿ ಬೆಳೆ, ಆತ್ಮಹತ್ಯೆಗೆ ಶರಣಾದ ರೈತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.