ETV Bharat / bharat

ಭ್ರಷ್ಟಾಚಾರ ಪ್ರಕರಣ : ಉಪಕುಲಪತಿ ವಿನಯ್​ ಪಾಠಕ್​ ವಿರುದ್ಧ ಎಫ್​ಐಆರ್​ ದಾಖಲಿಸಿದ್ದ ಡೇವಿಡ್​​ ಮರಿಯೋ ಬಂಧನ - ಡೇವಿಡ್​ ಅವರನ್ನು ಬಂಧಿಸಿದ ಇಡಿ

ಭ್ರಷ್ಟಾಚಾರ ನಡೆಸಿರುವ ಆರೋಪದ ಮೇಲೆ ಕಾನ್ಪುರ ವಿಶ್ವ ವಿದ್ಯಾಲಯದ ಉಪ ಕುಲಪತಿ ವಿನಯ್​ ಪಾಠಕ್​ ವಿರುದ್ಧ ಎಫ್​ಐಆರ್​ ದಾಖಲಿಸಿದ್ದ ಡೇವಿಡ್​ ಮರಿಯೋ ಡೆನ್ನಿಸ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

Etv Bharat
Etv Bharat
author img

By

Published : Jul 22, 2023, 1:33 PM IST

ಲಖನೌ(ಉತ್ತರ ಪ್ರದೇಶ) : ಭ್ರಷ್ಟಾಚಾರ ಪ್ರಕರಣ ಸಂಬಂಧ ಕಾನ್ಪುರ ವಿಶ್ವ ವಿದ್ಯಾಲಯದ ಉಪಕುಲಪತಿ ವಿನಯ್​ ಪಾಠಕ್​​ ವಿರುದ್ಧ ಎಫ್​ಐಆರ್​ ದಾಖಲಿಸಿದ್ದ ಡೇವಿಡ್​ ಮರಿಯೋ ಡೆನ್ನಿಸ್​ ಅವರನ್ನು ಶುಕ್ರವಾರ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಆಗ್ರಾ ವಿಶ್ವವಿದ್ಯಾಲಯದ ಎಂಬಿಬಿಎಸ್​ ಮತ್ತು ಬಿಎಎಂಎಸ್​​ ಪರೀಕ್ಷೆಯಲ್ಲಿ ಅಕ್ರಮ ನಡೆಸಿರುವ ಬಗ್ಗೆ ಬಂಧಿಸಿರುವುದಾಗಿ ತಿಳಿದುಬಂದಿದೆ. ಡೇವಿಡ್ ವಿರುದ್ಧ ಇಡಿ ಅಧಿಕಾರಿಗಳು​ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಕಳೆದ ಜೂನ್​ 28ರಂದು ಆಗ್ರಾ, ಲಖನೌ, ಕಾನ್ಪುರ್, ಕಾಸ್​ಗಂಜ್​, ಫಿರೋಜಾಬಾದ್​, ದೆಹಲಿಯ ವಿವಿದೆಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಉಪ ಕುಲಪತಿ ವಿನಯ್​ ಪಾಠಕ್​ ದೂರಿನ ಮೇಲೆ ಬಂಧನ : ಪ್ರಕರಣ ಸಂಬಂಧ 2022ರ ಆಗಸ್ಟ್​ 27ರಂದು ಆಗ್ರಾ ವಿಶ್ವ ವಿದ್ಯಾಯಲದ ಅಂದಿನ ಉಪಕುಲಪತಿಯಾಗಿದ್ದ ವಿನಯ್​ ಕುಮಾರ್​ ಪಾಠಕ್​ ಅವರ ಸೂಚನೆ ಮೇರೆಗೆ ಗಣಿತ ವಿಭಾಗದ ಮುಖ್ಯಸ್ಥ ಸಂಜೀವ್​ ಕುಮಾರ್​ ಹರಿ ಪರ್ವತ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಸೇಂಟ್​ ಜಾನ್​ ಕಾಲೇಜಿನ ಪರೀಕ್ಷಾ ಕೇಂದ್ರದಿಂದ ಉತ್ತರ ಪತ್ರಿಕೆಗಳನ್ನು ಸಾಗಿಸುತ್ತಿದ್ದ ಟೆಂಪೋ ಚಾಲಕ ದೇವೆಂದ್ರ ಎಂಬಾತನನ್ನು ಬಂಧಿಸಲಾಗಿತ್ತು. ಇವರ ಜೊತೆಗೆ ಭಿಕಂ ಸಿಂಗ್​, ಶೈಲೇಂದ್ರ ಭಗೇಲ್​ ಅಲಿಯಾಸ್​ ಶೈಲು, ಉಮೇಶ್​, ವಿದ್ಯಾರ್ಥಿ ನಾಯಕ ರಾಹುಲ್​ ಪರಾಶರ್​, ಶಿವಕುಮಾರ್​ ದಿವಾಕರ್​, ಕಾಸ್​ಗಂಜ್​ ನಿವಾಸಿ ಪುನೀತ್​, ಕಾನ್ಪುರ್​ ನಿವಾಸಿ ಅತುಲ್​, ಜಾನ್​ಪುರ್​ ನಿವಾಸಿ ದುರ್ಗೇಶ್​ ಕುಮಾರ್​ನನ್ನು ಪೊಲೀಸರು ಬಂಧಿಸಿದ್ದರು.

ಪೊಲೀಸರ ತನಿಖೆಯಲ್ಲಿ, ಆರೋಪಿ ಟೆಂಪೋ ಚಾಲಕ ದೇವೇಂದ್ರ ಎಂಬಿಬಿಎಸ್​ ಮತ್ತು ಬಿಎಎಂಎಸ್​​ ಉತ್ತರ ಪತ್ರಿಕೆಗಳನ್ನು ಒಂದು ಏಜೆನ್ಸಿಗೆ ಕಳುಹಿಸುತ್ತಿದ್ದ. ಇಲ್ಲಿ ಮಥುರಾದ ವಿದ್ಯಾರ್ಥಿ ನಾಯಕ ರಾಹುಲ್​ ಪರಾಶರ್​ ಈ ಉತ್ತರ ಪತ್ರಿಕೆಗಳನ್ನು ಪಡೆದುಕೊಳ್ಳುತ್ತಿದ್ದ. ಇದಾದ ಬಳಿಕ ರಾಹುಲ್​ ಪರಾಶರ್​ ತನ್ನ ಸಂಗಡಿಗರೊಂದಿಗೆ ಈ ಉತ್ತರ ಪತ್ರಿಕೆಗಳ ಪ್ರತಿಗಳನ್ನು ಬದಲಾಯಿಸುತ್ತಿದ್ದ ಎಂದು ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದರು.

ಡೇವಿಡ್​ ಅವರನ್ನು ಬಂಧಿಸಿದ ಇಡಿ : ಉತ್ತರ ಪತ್ರಿಕೆಗಳನ್ನು ಪಡೆಯುತ್ತಿದ್ದ ಡಿಜಿಟೆಕ್ಸ್​​ ಟೆಕ್ನಾಲಜೀಸ್​ ಏಜೆನ್ಸಿ ಬಗ್ಗೆ ಮತ್ತು ಇದರ ವ್ಯವಸ್ಥಾಪಕ ನಿರ್ದೇಶಕ ಡೇವಿಡ್​ ಬಗ್ಗೆ ವಿಚಾರಣೆಯಲ್ಲಿ ಗೊತ್ತಾದ ಬಳಿಕ ಇಡಿ ಅಧಿಕಾರಿಗಳು ಡೇವಿಡ್​ನನ್ನು ಬಂಧಿಸಿದ್ದಾರೆ. ಇದಕ್ಕೂ ಮುನ್ನ ಡೇವಿಡ್​ನನ್ನು ಹಲವು ಬಾರಿ ವಿಚಾರಣೆಗೆ ಕರೆಸಲಾಗಿತ್ತು. ಇವರ ಜೊತೆಗೆ ಜಾಮೀನಿನ ಮೇಲೆ ಹೊರಗಿದ್ದ ರಾಹುಲ್​ ಪರಾಶರ್​ ಮತ್ತು ಟೆಂಪೋ ಚಾಲಕನನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

ವಿನಯ್​ ಪಾಠಕ್​ ವಿರುದ್ಧ ಎಫ್​ಐಆರ್ ದಾಖಲಿಸಿರುವ ಡೇವಿಡ್​​ : ಪ್ರಕರಣ ಸಂಬಂಧ ಸದ್ಯ ಕಾನ್ಪುರ ವಿಶ್ವವಿದ್ಯಾಲಯ ಉಪಕುಲಪತಿಯಾಗಿರುವ ವಿನಯ್​ ಪಾಠಕ್​ ವಿರುದ್ಧ ಡೇವಿಡ್​ ಎಫ್​ಐಆರ್​ ದಾಖಲಿಸಿದ್ದಾರೆ.

ಕಳೆದ 2014ರಿಂದ ಆಗ್ರಾ ವಿಶ್ವವಿದ್ಯಾಲಯದ ಎಲ್ಲ ಪರೀಕ್ಷಾ ಕೆಲಸಗಳನ್ನು ಒಪ್ಪಂದದ ಮೇರೆಗೆ ಡಿಜಿಟೆಕ್ಸ್​ ಕಂಪನಿ ನಡೆಸಿಕೊಂಡು ಬಂದಿದೆ. ವಿಶ್ವ ವಿದ್ಯಾಲಯದ ಎಲ್ಲಾ ಪರೀಕ್ಷೆಯ ಪತ್ರಿಕೆಗಳನ್ನು ಇಲ್ಲೇ ಮುದ್ರಿಸಿ, ಇಲ್ಲಿಂದ ವಿಶ್ವ ವಿದ್ಯಾಲಯಕ್ಕೆ ಪೂರೈಕೆ ಮಾಡಲಾಗುತ್ತಿತ್ತು ಎಂದು ಡೇವಿಡ್​ ಹೇಳಿದ್ದಾರೆ. 2019ರಲ್ಲಿ ಡಿಜಿಟೆಕ್ಸ್​ ಕಂಪನಿಯ ಒಪ್ಪಂದ ಮುಗಿದಿತ್ತು. ಆದರೆ 2020ರಿಂದ 2022 ವರೆಗಿನ ವಿಶ್ವ ವಿದ್ಯಾಲಯದ ಕೆಲಸಕ್ಕೆ ಕೋಟಿ ರೂ. ಬಿಲ್​ ಬಾಕಿ ಇದೆ. ಇದನ್ನು ಕೇಳಿದಾಗ ಬಿಲ್​ ಪಾವತಿ ಮಾಡಲು ಉಪಕುಲಪತಿ ವಿನಯ್ ಪಾಠಕ್​ ಕಮಿಷನ್​ಗೆ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಿದ್ದಾರೆ.

ಈ ಸಂಬಂಧ ಎಸ್​ಟಿಎಫ್​ ತನಿಖೆ ಆರಂಭಿಸಿದೆ. ಅಲ್ಲದೆ ವಿನಯ್​ ಪಾಠಕ್​ ವಿರುದ್ಧ ಸಾಕ್ಷ್ಯಗಳನ್ನು ಕೆಲ ಹಾಕಿದೆ. ಜೊತೆಗೆ ವಿನಯ್​ ಪಾಠಕ್ ಆಪ್ತರಾದ ಅಜಯ್​ ಮಿಶ್ರಾ, ಅಜಯ್ ಜೈನ್, ಸಂತೋಷ್​ ಸಿಂಗ್​ ಅವರನ್ನು ಎಸ್​ಟಿಎಫ್​ ಬಂಧಿಸಿದೆ. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ : ಪ್ರತಿಭಟನೆ ವೇಳೆ ಗೋರಖ್​​ಪುರ ವಿವಿ ಕುಲಪತಿ, ರಿಜಿಸ್ಟ್ರಾರ್​ ಮೇಲೆ ಎಬಿವಿಪಿ ಪ್ರತಿಭಟನಾಕಾರರಿಂದ ತೀವ್ರ ಹಲ್ಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.