ETV Bharat / bharat

ತಹಶೀಲ್ದಾರ್​ ಮೇಲೆ ಜೆಸಿಬಿ, ಟ್ರ್ಯಾಕ್ಟರ್​​​​​​​​​​ ಹತ್ತಿಸಿ ಹಲ್ಲೆಗೆ ಯತ್ನ ... ಓಡಿ ಹೋಗಿ ಜೀವ ಉಳಿಸಿಕೊಂಡ  ಸಿಬ್ಬಂದಿ - ಟ್ರ್ಯಾಕ್ಟರ್ ಮತ್ತು ಜೆಸಿಬಿ ಡಿಕ್ಕಿ

ಆಗ್ರಾದಲ್ಲಿ ಮೈನಿಂಗ್ ಮಾಫಿಯಾದ ಅಟ್ಟಹಾಸ ಮುಂದುವರೆದಿದೆ. ಜಿಲ್ಲೆಯಲ್ಲಿ ಗುರುವಾರ ರಾತ್ರಿ ತಹಸೀಲ್ದಾರ್‌ರನ್ನು ಜೆಸಿಬಿ ಮತ್ತು ಟ್ರ್ಯಾಕ್ಟರ್‌ನಿಂದ ತುಳಿದು ಹಾಕಲು ಯತ್ನಿಸಿದ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಕಂದಾಯ ತಂಡ ಈ ದುಷ್ಕರ್ಮಿಗಳಿಂದ ಹೇಗೋ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.

ತಹಶೀಲ್ದಾರ್​ ಮೇಲೆ ಜೆಸಿಬಿ, ಟ್ರ್ಯಾಕ್ಟರ್​​​​​​​​​​ ಮೂಲಕ ಹಲ್ಲೆ

author img

By ETV Bharat Karnataka Team

Published : Oct 13, 2023, 11:01 AM IST

Updated : Oct 13, 2023, 11:36 AM IST

ಆಗ್ರಾ( ಉತ್ತರಪ್ರದೇಶ): ಇಲ್ಲಿನ ಬಾಹ ತಹಶೀಲ್​​​​ನ ನಾಯಬ್ ತಹಸೀಲ್ದಾರ್ ಮೇಲೆ ಆಗ್ರಾದಲ್ಲಿ ಮೈನಿಂಗ್ ಮಾಫಿಯಾ ಗ್ಯಾಂಗ್​​ ಗುರುವಾರ ತಡರಾತ್ರಿ ಹಲ್ಲೆ ನಡೆಸಿರುವ ವರದಿಯಾಗಿದೆ. ಆಗ್ರಾದಲ್ಲಿ ಅಕ್ರಮ ಗಣಿಗಾರಿಕೆ ಕುರಿತು ಮಾಹಿತಿ ಪಡೆದ ತಹಸೀಲ್ದಾರ್, ತಮ್ಮ ತಂಡದೊಂದಿಗೆ ಜೈತ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಹ್ತೌಲಿ ಗ್ರಾಮಕ್ಕೆ ಭೇಟಿ ನೀಡಿ, ಮಾಫಿಯಾದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಮೈನಿಂಗ್ ಮಾಫಿಯಾ ಕಾರ್ಯಕರ್ತರು ತಹಸೀಲ್ದಾರ್ ಮೇಲೆ ಟ್ರ್ಯಾಕ್ಟರ್ ಹಾಗೂ ಜೆಸಿಬಿಯಿಂದ ದಾಳಿ ನಡೆಸಲು ಯತ್ನಿಸಿದ್ದಾರೆ. ಅವರ ವಾಹನಗಳ ಮೇಲೆ ದಾಳಿ ಮಾಡಿ ಜಖಂಗೊಳಿಸುವ ಯತ್ನ ಮಾಡಿದ್ದಾರೆ.

ಟ್ರ್ಯಾಕ್ಟರ್ ಮತ್ತು ಜೆಸಿಬಿ ಡಿಕ್ಕಿಯಾಗಿ ತಹಸೀಲ್ದಾರ್ ಅವರ ಕಾರು ಜಖಂಗೊಂಡಿದೆ. ನಾಯಿಬ್ ತಹಸೀಲ್ದಾರ್ ತಮ್ಮ ಪ್ರಾಣ ಉಳಿಸಿಕೊಳ್ಳಲು ಕಾರಿನಿಂದ ಕೆಳಗೆ ಇಳಿದು ಬಂದಿದ್ದಾರೆ. ಈ ವೇಳೆ ಅವರ ಮೇಲೆ ದಾಳಿಕೋರರು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಮಾಫಿಯಾ ಗ್ಯಾಂಗ್​ನವರು ಮಾಡಿದ ಹಲ್ಲೆಯಿಂದ ತಹಸೀಲ್ದಾರ್ ಗಾಯಗೊಂಡಿದ್ದಾರೆ. ಮತ್ತೊಂದು ಕಡೆ ತಹಶೀಲ್ದಾರ್ ಜತೆ ಆಗಮಿಸಿದ್ದ ಕಂದಾಯ ಇಲಾಖೆ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹಾಗೂ ತಹಸೀಲ್ದಾರ್ ಹೊಲದ ಕಡೆ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ.

ಈ ಮಾಹಿತಿ ತಿಳಿದ ತಕ್ಷಣ ಹೆಚ್ಚುವರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಗೊಂಡ ತಹಸೀಲ್ದಾರ್‌ ಅವರನ್ನು ಬಾಹ್‌ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಬಳಿಕ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಏಳು ಟ್ರ್ಯಾಕ್ಟರ್ ಟ್ರಾಲಿಗಳನ್ನು ಪೊಲೀಸರು ಮತ್ತು ಕಂದಾಯ ತಂಡ ವಶಪಡಿಸಿಕೊಂಡಿದೆ.

ಘಟನೆ ಹಿನ್ನೆಲೆ: ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಅಕ್ರಮ ಗಣಿಗಾರಿಕೆ ಕುರಿತು ಬಹ ತಹಸೀಲ್ದಾರ್ ಅವರಿಗೆ ಮಾಹಿತಿ ಬಂದಿತ್ತು. ಈ ಮಾಹಿತಿ ಪಡೆದ ನಾಯಬ್ ತಹಸೀಲ್ದಾರ್, ತಮ್ಮ ಕಂದಾಯ ಇಲಾಖೆ ತಂಡದೊಂದಿಗೆ ಜೈತ್‌ಪುರ ಪೊಲೀಸ್ ಠಾಣೆಯ ನಹ್ತೌಲಿ ಗ್ರಾಮಕ್ಕೆ ತೆರಳಿದ್ದರು. ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿದ ವೇಳೆ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು. ಈ ವೇಳೆ, ಮೈನಿಂಗ್​ ಮಾಫಿಯಾದ ಗ್ಯಾಂಗ್​ ಇವರ ಮೇಲೆ ಹಲ್ಲೆ ಮಾಡಿದೆ.

ಈ ಬಗ್ಗೆ ಬಾಹ ತಹಸೀಲ್ದಾರ್ ಪ್ರವೇಶ್ ಕುಮಾರ್ ಮಾತನಾಡಿ, ’’ಜೈತ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಹತೌಲಿ ಗ್ರಾಮದ ಮೋರಿ ಬಳಿ ಜೆಸಿಬಿ ಮತ್ತು ಟ್ರ್ಯಾಕ್ಟರ್ ಟ್ರಾಲಿಗಳ ಮೂಲಕ ಅಕ್ರಮವಾಗಿ ಮಣ್ಣು ಗಣಿಗಾರಿಕೆ ಮಾಡಲಾಗುತ್ತಿತ್ತು. ನಾಯಬ್ ತಹಸೀಲ್ದಾರ್ ವಿಪಿನ್ ಕುಮಾರ್ ಮಿಶ್ರಾ, ಅಕ್ರಮ ಗಣಿಗಾರಿಕೆ ಮಾಡುತ್ತಿದ್ದವರನ್ನು ಬಂಧಿಸಲು ಹೋಗಿದ್ದರು. ಗೃಹ ರಕ್ಷಕರಾದ ಚಂದ್ರಭಾನ್, ಫರಾನ್ ಸಿಂಗ್ ಮತ್ತು ಚಾಲಕ ವೃಂದಾವನ ಸಹ ಅವರೊಂದಿಗಿದ್ದರು. 12ಕ್ಕೂ ಹೆಚ್ಚು ಟ್ರ್ಯಾಕ್ಟರ್ ಟ್ರಾಲಿಗಳು ಅಲ್ಲಿದ್ದವು. ಜೆಸಿಬಿ ಬಳಸಿ ಮಣ್ಣು ಅಗೆಯುವ ಕಾರ್ಯ ನಡೆದಿತ್ತು. ಕಂದಾಯ ತಂಡವನ್ನು ಕಂಡ ಮೈನಿಂಗ್ ಮಾಫಿಯಾ ಕಂಗಾಲಾಗಿತ್ತು. ಆದರೆ, ಮರುಗಳಿಗೆಯಲ್ಲೇ ಅವರು ತಹಶೀಲ್ದಾರ್​ ಮೇಲೆ ಹಲ್ಲೆ ಮಾಡಿದರು‘‘ ಎಂದಿದ್ದಾರೆ.

ಮಣ್ಣು ತುಂಬಿದ ಟ್ರ್ಯಾಕ್ಟರ್ ಟ್ರಾಲಿಯನ್ನು ನಿಲ್ಲಿಸಲು ಮುಂದಾದಾಗ ಚಾಲಕ ಟ್ರ್ಯಾಕ್ಟರ್​​​​ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಜೆಸಿಬಿ ಹಾಗೂ ಟ್ರ್ಯಾಕ್ಟರ್‌ನಿಂದ ತುಳಿದು ಹಾಕಲು ಯತ್ನಿಸಿದರು. ಡಿಕ್ಕಿಯ ರಭಸಕ್ಕೆ ಹೋಮ್ ಗಾರ್ಡ್ ಕೆಳಕ್ಕೆ ಬಿದ್ದಿದ್ದರು. ಈ ದಾಳಿಯಲ್ಲಿ ಇಬ್ಬರೂ ಗಾಯಗೊಂಡಿದ್ದಾರೆ. ಈ ವೇಳೆ, ಪ್ರಾಣ ಉಳಿಸಿಕೊಳ್ಳಲು ನಾನು ಮತ್ತು ನಾಯಬ್ ತಹಸೀಲ್ದಾರ್ ಭದ್ರತಾ ಸಿಬ್ಬಂದಿಯೊಂದಿಗೆ ಹೊಲದ ಕಡೆಗೆ ಓಡಿದ್ದಾರೆ. ಅವರನ್ನು ಬೆನ್ನಟ್ಟಿದ ಗಣಿ ಮಾಫಿಯಾ ಕಾರ್ಯಕರ್ತರು ಥಳಿಸಿದ್ದಾರೆ. ಈ ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ಬಾಹ್​ ತಹಶೀಲ್ದಾರ್​ ಹೇಳಿದ್ದಾರೆ.

ತಹಸೀಲ್ದಾರ್ ಹಾಗೂ ಕಂದಾಯ ದಳದ ಮೇಲೆ ಗಣಿ ಮಾಫಿಯಾ ದಾಳಿ ನಡೆಸಿದ ಸುದ್ದಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಏಳು ಟ್ರ್ಯಾಕ್ಟರ್ ಟ್ರಾಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಗಾಯಾಳು ತಹಸೀಲ್ದಾರ್ ಅವರನ್ನು ಬಾಹ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಇದನ್ನು ಓದಿ: ಆಂಧ್ರದಿಂದ ಸೊಲ್ಲಾಪುರಕ್ಕೆ ಅಕ್ರಮ ಗಾಂಜಾ ಸಾಗಾಣಿಕೆ; ಆರೋಪಿಗಳ ಬಂಧನ

Last Updated : Oct 13, 2023, 11:36 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.