ETV Bharat / bharat

ಚಲಿಸುತ್ತಿದ್ದ ಕಾರಿನಿಂದ ಹುಡುಗಿಯನ್ನು ಹೊರದಬ್ಬಿದ ಪ್ರೇಮಿ... - ಈಟಿವಿ ಭಾರತ್ ಕನ್ನಡ ಸುದ್ದಿ

ಚಲಿಸುತ್ತಿದ್ದ ಕಾರಿನಿಂದ ಯುವತಿಯನ್ನು ಪ್ರೇಮಿಯೇ ಹೊರಗೆಸೆದು ಪರಾರಿಯಾಗಿರುವ ಘಟನೆ ಬಿಹಾರದ ಮಜಾಫರ್​​ಪುರ ಬಸ್​ ನಿಲ್ದಾಣದಲ್ಲಿ ನಡೆದಿದೆ.

ಬಿಹಾರದ ಮಜಾಫರ್​​ಪುರ
ಬಿಹಾರದ ಮಜಾಫರ್​​ಪುರ
author img

By ETV Bharat Karnataka Team

Published : Sep 6, 2023, 5:20 PM IST

Updated : Sep 6, 2023, 5:43 PM IST

ಮುಜಾಫರ್‌ಪುರ (ಬಿಹಾರ) : ಚಲಿಸುತ್ತಿದ್ದ ವಾಹನದಿಂದ ಯುವತಿಯೊಬ್ಬಳು ರಸ್ತೆಗೆ ಬಿದ್ದ ಘಟನೆ ಬಿಹಾರದ ಮುಜಾಫರ್‌ಪುರ ಬಸ್‌ ನಿಲ್ದಾಣದಲ್ಲಿ ನಡೆದಿದೆ. ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಸ್ಥಳೀಯರು ತರಾತುರಿಯಲ್ಲಿ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಜ್ಞೆ ಬಂದಾಗ ಬಾಲಕಿ ಹೇಳಿದ ಮಾತು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಬಳಿಕ ಈ ಬಗ್ಗೆ ತಮ್ಮ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.

ಫೇಸ್‌ಬುಕ್ ಪ್ರೀತಿ : 3 ವರ್ಷಗಳ ಹಿಂದೆ ಸೀತಾಮರ್ಹಿಯ ಯುವಕನೊಂದಿಗೆ ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿದ್ದೆ ಎಂದು ಬಾಲಕಿ ಹೇಳಿದ್ದಾಳೆ. ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ಪ್ರೀತಿ ವ್ಯಕ್ತಪಡಿಸಿ ಮದುವೆಗೆ ಮುಂದಾಗಿದ್ದಾರೆ. ನಂತರ ಕುಟುಂಬಸ್ಥರು ಮನವೊಲಿಸಿದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಪಾಟ್ನಾದಲ್ಲಿರುವ ಹುಡುಗನ ಬಳಿ ಹೋಗಿದ್ದಾರೆ.

ಪಾಟ್ನಾದಲ್ಲಿ ಬಾಲಕಿಯ ಅಧ್ಯಯನ: ಇಬ್ಬರೂ ಕಳೆದ 3 ವರ್ಷಗಳಿಂದ ಪಾಟ್ನಾದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಮತ್ತು ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದರು. ಕೆಲ ದಿನಗಳ ಹಿಂದೆ ಯುವತಿಗೆ ತನ್ನ ಬಾಯ್‌ಫ್ರೆಂಡ್ ಮೋಸ ಮಾಡಿದ್ದು, ಫೇಸ್‌ಬುಕ್ ಮೂಲಕ ಹಲವು ಹುಡುಗಿಯರ ಜತೆ ಸಂಪರ್ಕ ಹೊಂದಿದ್ದಾನೆ ಎಂದು ತಿಳಿದು ಬಂದಿದೆ. ಈ ವಿಷಯ ತಿಳಿದ ಹುಡುಗಿ ವಿರೋಧಿಸಲು ಆರಂಭಿಸಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳವೂ ನಡೆಯುತ್ತಿತ್ತು.

ಕಾರಿನಿಂದ ಬಾಲಕಿಯನ್ನು ರಸ್ತೆಗೆ ಎಸೆದ ಪ್ರೇಮಿ : ಬಾಲಕಿ ತನ್ನ ಮೇಲಾದ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿದಾಗ ಪ್ರೇಮಿ ಕೆಲ ದಿನ ಸುಮ್ಮನಿದ್ದ. ನಂತರ ತಂದೆಯ ಅನಾರೋಗ್ಯದ ನೆಪದಲ್ಲಿ ಸೀತಾಮರ್ಹಿಗೆ ಹೋಗಲು ಸಿದ್ಧನಾದ. ತದನಂತರ ಪ್ರೇಮಿಗಳಿಬ್ಬರೂ ಪಾಟ್ನಾದಿಂದ ಸೀತಾಮರ್ಹಿಗೆ ಕಾರಿನಲ್ಲಿ ಹೋಗುತ್ತಿದ್ದರು. ಇದೇ ವೇಳೆ, ಮುಜಾಫರ್‌ಪುರದ ಇಮ್ಲಿ ಚಟ್ಟಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ಚಲಿಸುತ್ತಿದ್ದ ವಾಹನದಿಂದ ಹುಡುಗಿಯನ್ನ ಎಸೆದು ಪರಾರಿಯಾಗಿದ್ದಾನೆ. ಆಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನು ಸ್ಥಳೀಯರು ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿಯ ಮನೆಯವರಿಗೆ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಹಾಡಹಗಲೇ ಯುವತಿ ಮೇಲೆ ಭಗ್ನ ಪ್ರೇಮಿಯಿಂದ ಮಾರಣಾಂತಿಕ ಹಲ್ಲೆ

ಪಾಗಲ್​ ಪ್ರೇಮಿಯಿಂದ ಯುವತಿ ಮೇಲೆ ಚಾಕುವಿನಿಂದ ದಾಳಿ : ಯುವತಿ ಪ್ರೀತಿ ನಿರಾಕರಿಸಿದ್ದಕ್ಕೆ ಯುವಕನೊಬ್ಬ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ( ಸೆಪ್ಟೆಂಬರ್- 4-2023) ಬಂದಿತ್ತು. ಯುವತಿ ತಂಗಿದ್ದ ಮನೆಗೆ ಬಂದ ಆರೋಪಿ ಯುವಕ ಚಾಕುವಿನಿಂದ ಹಲ್ಲೆ ಮಾಡಿದ್ದ. ಈ ವೇಳೆ ಆರೋಪಿ ಯುವಕನಿಂದ ತನ್ನ ಸಹೋದರಿಯನ್ನು ರಕ್ಷಿಸಲು ತೆರಳಿದ್ದ ಸಹೋದರ ಸಹ ಸಾವನ್ನಪ್ಪಿದ್ದ. ಚಾಕು ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಯುವತಿಯ ಸ್ಥಿತಿ ಚಿಂತಾಜನಕವಾಗಿತ್ತು. ಭಾನುವಾರ ಮಧ್ಯಾಹ್ನ ಹೈದರಾಬಾದ್‌ನ ಎಲ್‌ಬಿ ನಗರದ ಆರ್‌ಟಿಸಿ ಕಾಲೋನಿಯಲ್ಲಿ ಈ ಘಟನೆ ನಡೆದಿತ್ತು.

ಇದನ್ನೂ ಓದಿ: ಪಾಗಲ್​ ಪ್ರೇಮಿಯಿಂದ ಯುವತಿ ಮೇಲೆ ಚಾಕುವಿನಿಂದ ದಾಳಿ.. ಸಹೋದರಿ ಸಹಾಯಕ್ಕೆ ದೌಡಾಯಿಸಿದ್ದ ತಮ್ಮನನ್ನು ಕೊಂದ ಕೀಚಕ

Last Updated : Sep 6, 2023, 5:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.