ETV Bharat / bharat

Businessman robbed: ಬಂದೂಕು ತೋರಿಸಿ ಉದ್ಯಮಿಯ ದರೋಡೆ, ಕಾರು ಅಡ್ಡಗಟ್ಟಿ 2 ಲಕ್ಷದ ಬ್ಯಾಗ್​ ದೋಚಿದ ಕಳ್ಳರು!

ದೆಹಲಿಯಲ್ಲಿ ಹಾಡಹಗಲೇ ದರೋಡೆ ನಡೆಸಲಾಗಿದೆ. ಉದ್ಯಮಿಯ ಕಾರು ಅಡ್ಡಗಟ್ಟಿ ಬಂದೂಕು ತೋರಿಸಿ 2 ಲಕ್ಷ ಹಣವನ್ನು ದೋಚಲಾಗಿದೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಂದೂಕು ತೋರಿಸಿ ಉದ್ಯಮಿಯ ದರೋಡೆ
ಬಂದೂಕು ತೋರಿಸಿ ಉದ್ಯಮಿಯ ದರೋಡೆ
author img

By

Published : Jun 26, 2023, 1:12 PM IST

Updated : Jun 26, 2023, 1:29 PM IST

ಬಂದೂಕು ತೋರಿಸಿ ಉದ್ಯಮಿಯ ದರೋಡೆ

ನವದೆಹಲಿ: ನಗರದಲ್ಲಿ ಹಾಡಹಗಲೇ ದೋಚಿದ ಘಟನೆ 2 ದಿನಗಳ ಹಿಂದೆ ನಡೆದಿದೆ. ಕಾರಿನಲ್ಲಿ ತೆರಳುತ್ತಿದ್ದ ಉದ್ಯಮಿಯನ್ನು ಬೈಕ್​ನಲ್ಲಿ ಬಂದ ನಾಲ್ವರು ಅಡ್ಡಗಟ್ಟಿ ಬಂದೂಕು ತೋರಿಸಿ 2 ಲಕ್ಷ ರೂಪಾಯಿ ನಗದು ಇದ್ದ ಬ್ಯಾಗ್​ ಅನ್ನು ತೆಗೆದುಕೊಂಡು ಹೋಗಿದ್ದಾರೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸಿಎಂ ಅರವಿಂದ್​ ಕೇಜ್ರಿವಾಲ್​ ಲೆಫ್ಟಿನೆಂಟ್​ ಗವರ್ನರ್​ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಶನಿವಾರ ಮಧ್ಯಾಹ್ನ ಪ್ರಗತಿ ಮೈದಾನದ ಸುರಂಗ ಮಾರ್ಗದಲ್ಲಿ ದುಷ್ಕರ್ಮಿಗಳು ಉದ್ಯಮಿಯನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ರಸ್ತೆ ಮಧ್ಯೆಯೇ ಕಾರು ಅಡ್ಡಗಟ್ಟಿ ಬಂದೂಕು ತೋರಿಸಿ ಉದ್ಯಮಿ ಬಳಿಯಿದ್ದ ಹಣದ ಬ್ಯಾಗ್ ಅನ್ನು ದೋಚಿದ್ದಾರೆ. ಅಲ್ಲದೇ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.

  • #WATCH | A delivery agent and his associate were robbed at gunpoint of Rs 1.5 to Rs 2 lakh cash by a group of unknown assailants inside the Pragati Maidan Tunnel on June 24. Police registered a case and efforts are being made to apprehend the criminals: Delhi Police

    (CCTV… pic.twitter.com/WchQo2lXSj

    — ANI (@ANI) June 26, 2023 " class="align-text-top noRightClick twitterSection" data=" ">

ಗುಜರಾತ್‌ನ ಮೆಹ್ಸಾನಾ ನಿವಾಸಿಯಾಗಿರುವ ಸಜನ್ ಕುಮಾರ್ ನಷ್ಟಕ್ಕೊಳಗಾದವರು. ಇವರು ಚಾಂದಿನಿ ಚೌಕ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳ ಅಂಗಡಿಯನ್ನು ಹೊಂದಿದ್ದಾರೆ. ಶನಿವಾರ ಮಧ್ಯಾಹ್ನ ಗುರುಗ್ರಾಮ ಮೂಲದ ಸಂಸ್ಥೆಗೆ 2 ಲಕ್ಷ ರೂ. ಕಟ್ಟಲು ಇನ್ನೊಬ್ಬ ವ್ಯಕ್ತಿಯ ಜೊತೆಗೆ ತೆರಳುತ್ತಿದ್ದರು. ಕೆಂಪುಕೋಟೆಯಿಂದ ಕ್ಯಾಬ್ ಕಾಯ್ದಿರಿಸಿ, ರಿಂಗ್ ರಸ್ತೆಯಿಂದ ಪ್ರಗತಿ ಮೈದಾನದ ಸುರಂಗ ಮಾರ್ಗದ ಒಳಗೆ ಹೋಗುತ್ತಿದ್ದಾಗ, ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಕ್ಯಾಬ್ ನಿಲ್ಲಿಸಿದ್ದಾರೆ. ಪಿಸ್ತೂಲ್ ತೋರಿಸಿ ಹಣ ಬ್ಯಾಗ್ ಅನ್ನು ದೋಚಿದ್ದಾರೆ. ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದರೋಡೆಕೋರರು ಪರಾರಿಯಾದ ನಂತರ ಉದ್ಯಮಿ, ಪೊಲೀಸರಿಗೆ ಕರೆ ಕರೆ ಮಾಡಿ ದೂರು ನೀಡಿದ್ದಾರೆ.

ಸಂಜೆ 3 ರಿಂದ 4 ರ ನಡುವೆ ಈ ಘಟನೆ ನಡೆದಿದೆ. ಸಂಜೆ 6 ಗಂಟೆಗೆ ಉದ್ಯಮಿ ದೂರು ನೀಡಿದ್ದಾರೆ. ಸದ್ಯ, ಸುರಂಗದೊಳಗೆ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ದರೋಡೆಕೋರರು ಕೆಂಪು ಕೋಟೆಯಿಂದ ಬೆನ್ನಟ್ಟಿ ಬಂದಿದ್ದರೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ದುಷ್ಕರ್ಮಿಗಳಿಗಾಗಿ ಶೋಧ ಆರಂಭಿಸಿದ್ದಾರೆ. ದರೋಡೆಗೆ ಯಾರೋ ದುಷ್ಕರ್ಮಿಗಳಿಗೆ ಮಾಹಿತಿ ನೀಡಿದ ಶಂಕೆ ವ್ಯಕ್ತವಾಗಿದೆ. ಘಟನೆಯನ್ನು ಎಲ್ಲ ಕೋನಗಳಿಂದ ತನಿಖೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಎಂ ಕೇಜ್ರಿವಾಲ್ ಕಿಡಿ: ಇನ್ನು ಘಟನೆಗೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಕಿಡಿಕಾರಿದ್ದಾರೆ. ನಗರದಲ್ಲಿ ಭದ್ರತೆ ಇಲ್ಲವಾಗಿದೆ. ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಲೆಫ್ಟಿನೆಂಟ್​ ಗವರ್ನರ್​ ವಿಫಲರಾಗಿದ್ದಾರೆ. ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ದೆಹಲಿಯನ್ನು ಸುರಕ್ಷಿತವಾಗಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗದಿದ್ದರೆ, ಅದನ್ನು ನಮಗೆ ಒಪ್ಪಿಸಿ. ನಾಗರಿಕರ ಸುರಕ್ಷತೆಯ ಹೇಗೆ ಮಾಡಬೇಕು ಎಂಬುದನ್ನು ನಾವು ನಿಮಗೆ ತೋರಿಸುತ್ತೇವೆ ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: Selfie Death: ಶತಾಬ್ದಿ ಎಕ್ಸ್‌ಪ್ರೆಸ್ ಡಿಕ್ಕಿ.. ರೈಲ್ವೆ ಹಳಿ ಮೇಲೆ ಸೆಲ್ಫಿ ತೆಗೆಯುತ್ತಿದ್ದ ಇಬ್ಬರು ಯುವಕರ ದಾರುಣ ಸಾವು

Last Updated : Jun 26, 2023, 1:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.