ETV Bharat / bharat

CPI(M) leader shot dead: ರಾಂಚಿಯಲ್ಲಿ ಸಿಪಿಐ(ಎಂ) ಮುಖಂಡನ ಗುಂಡಿಕ್ಕಿ ಹತ್ಯೆ - Jharkhand crime news

CPI(M) leader shot dead: ರಾಂಚಿಯಲ್ಲಿ ಸಿಪಿಐ(ಎಂ) ಮುಖಂಡ ಸುಭಾಷ್ ಮುಂಡಾ ಎಂಬವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

Subhash Munda
ಸುಭಾಷ್ ಮುಂಡಾ
author img

By

Published : Jul 27, 2023, 12:11 PM IST

ಜಾರ್ಖಂಡ್‌ : ರಾಜಧಾನಿ ರಾಂಚಿಯಲ್ಲಿ ಸಿಪಿಐಎಂ ಮುಖಂಡರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ದಲಾದ್ಲಿ ಚೌಕ್ ಬಳಿಯ ಕಚೇರಿಯಲ್ಲಿ ಕುಳಿತಿದ್ದ ಸಿಪಿಐ (ಎಂ) ನಾಯಕ ಸುಭಾಷ್ ಮುಂಡಾ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬುಧವಾರ ರಾತ್ರಿ 7 ರಿಂದ 8 ಗಂಟೆಯ ನಡುವೆ ಘಟನೆ ನಡೆದಿದೆ.

ಮಾಹಿತಿಯ ಪ್ರಕಾರ, ಆರೋಪಿಗಳು ಸುಭಾಷ್ ಮುಂಡಾ ಮೇಲೆ 7 ಬಾರಿ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಘಟನೆ ನಡೆದ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿದೆ.

ದಲ್ದಾಲಿ ಚೌಕ್ ಬಗೀಚ ಟೋಲಿ ನಿವಾಸಿಯಾದ ಸುಭಾಷ್ ಮುಂಡಾ ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯರಾಗಿದ್ದರು. ಗುರುವಾರ ರಾಜ್ಯ ಸಮಿತಿ ಸಭೆ ನಿಗದಿಯಾಗಿದ್ದು, ಸುಭಾಷ್ ಕೂಡ ಪಾಲ್ಗೊಳ್ಳಬೇಕಿತ್ತು. ಅಷ್ಟೇ ಅಲ್ಲದೆ, ಅವರು ಹಟಿಯಾ ಕ್ಷೇತ್ರದಿಂದ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮತ್ತು ಮಂದರ್ ಕ್ಷೇತ್ರದಿಂದ ಉಪಚುನಾವಣೆಗೆ ಸ್ಪರ್ಧಿಸಿದ್ದರು.

ಕಮಲ್ ಭೂಷಣ್ ಆಪ್ತರಾಗಿದ್ದ ಸುಭಾಷ್ : ಕೊಲೆಗೀಡಾದ ಸುಭಾಷ್ ಮುಂಡಾ ಅವರು ರಾಂಚಿಯ ಪ್ರಸಿದ್ಧ ಬಿಲ್ಡರ್ ಮತ್ತು ಉದ್ಯಮಿ ದಿವಂಗತ ಕಮಲ್ ಭೂಷಣ್ ಅವರಿಗೆ ಬಹಳ ನಿಕಟರಾಗಿದ್ದರು. ಕಮಲ್ ಭೂಷಣ್ ಅವರ ಇನ್ನೊಬ್ಬ ಆಪ್ತಸ್ನೇಹಿತನನ್ನು ಕ್ರಿಮಿನಲ್‌ಗಳು ಗುಂಡಿಕ್ಕಿ ಕೊಂದ ಒಂದು ತಿಂಗಳ ಅವಧಿಯಲ್ಲಿ ಸಂಭವಿಸಿದ ಎರಡನೇ ಘಟನೆ ಇದಾಗಿದೆ. ಇದಕ್ಕೂ ಮೊದಲು, ರಾಂಚಿಯ ಪಿಸ್ಕಾ ಮೋರ್‌ನಲ್ಲಿ ಕಮಲ್ ಭೂಷಣ್ ಅವರ ಅಕೌಂಟೆಂಟ್ ಸಂಜಯ್ ಸಿಂಗ್ ಅವರನ್ನು ಖದೀಮರು ಗುಂಡಿಕ್ಕಿ ಕೊಂದಿದ್ದರು. ಈ ಹತ್ಯೆಯಲ್ಲೂ ಕಮಲ್ ಭೂಷಣ್ ಅವರ ಹಳೆಯ ಶತ್ರುಗಳ ಕೈವಾಡವಿದೆ ಎಂಬ ಆತಂಕ ವ್ಯಕ್ತವಾಗಿದೆ.

ಜನರ ಆಕ್ರೋಶ : ಸುಭಾಷ್ ಮುಂಡಾ ಹತ್ಯೆ ಸುದ್ದಿ ಕೇಳಿದ ಸ್ಥಳೀಯರು ಆಕ್ರೋಶಗೊಂಡಿದ್ದು, ಮೃತದೇಹದೊಂದಿಗೆ ಬುಧವಾರ ರಾತ್ರಿ ರಾಂಚಿ-ಗುಮ್ಲಾ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಅನೇಕ ವಾಹನಗಳನ್ನು ಧ್ವಂಸಗೊಳಿಸಲಾಗಿದೆ. ವಿಷಯ ತಿಳಿದ ರಾಂಚಿಯ ಡಿಐಜಿ ಮತ್ತು ಎಸ್‌ಎಸ್‌ಪಿ ಸಿಟ್ಟಿಗೆದ್ದ ಜನರನ್ನು ಮನವೊಲಿಸಿ ವಾಪಸ್ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಭಾಷ್ ಮರಣೋತ್ತರ ಪರೀಕ್ಷೆಯನ್ನು ತಡರಾತ್ರಿ ರಿಮ್ಸ್‌ನಲ್ಲಿ ನಡೆಸಲಾಗಿದ್ದು, ಇಂದು ಬೆಳಗ್ಗೆ ಮೃತ ದೇಹವನ್ನು ದಲ್ದಾಲಿಗೆ ತರಲಾಗಿದೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಮತ್ತೊಂದೆಡೆ, ರಾತು, ಪಿಸ್ಕಾ ಮೋಡ್, ಒರ್ಮಾಂಜಿ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಕೋಪಗೊಂಡ ಜನರ ಗುಂಪು ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : Bengaluru crime: ಹೋಟೆಲ್‌ ಕ್ಯಾಶಿಯರ್ ಭೀಕರ ಹತ್ಯೆ.. ತಲೆಮರೆಸಿಕೊಂಡಿರುವ ಆರೋಪಿ ಹೌಸ್ ಕೀಪರ್

ಕೊಲೆಯ ರಹಸ್ಯ ಬೇಧಿಸಲು ಎಫ್‌ಎಸ್‌ಎಲ್ ಹಾಗೂ ಶ್ವಾನದಳದ ತಂಡ ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದೆ. ಸುಭಾಷ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಸುಳಿವುಗಳು ಪೊಲೀಸರಿಗೆ ಸಿಕ್ಕಿದ್ದು, ಆ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.

"ಕಾನೂನು ಮತ್ತು ಸುವ್ಯವಸ್ಥೆಯನ್ನು ತಮ್ಮ ಕೈಗೆ ತೆಗೆದುಕೊಳ್ಳಬೇಡಿ ಎಂದು ನಾವು ಜನರಿಗೆ ಮನವಿ ಮಾಡಿದ್ದೇವೆ. ಅಪರಾಧಿಗಳನ್ನು ಬಂಧಿಸಲು ತಕ್ಷಣ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ನಾವು ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಒತ್ತಾಯಿಸಿದ್ದೇವೆ" ಎಂದು ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಪ್ರಕಾಶ್ ವಿಪ್ಲವ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.