ನವದೆಹಲಿ : ಭಾರತದಲ್ಲಿ ಕೋವಿಡ್ ತುರ್ತು ಬಳಕೆಗಾಗಿ ಎಲಿ ಲಿಲ್ಲಿ ಸಂಸ್ಥೆಯ ಔಷಧ ಅನುಮೋದನೆ ಪಡೆದುಕೊಂಡಿದೆ. ಈ ಸಂಸ್ಥೆಯ ಮೊನೊಕ್ಲೋನಲ್ ಪ್ರತಿಕಾಯಗಳಾದ ಬಾಮ್ಲನಿವಿಮಾಬ್ ಮತ್ತು ಎಟೆಸೆವಿಮಾಬ್‌ಗಳ ಎಂಬ ಔಷಧಿ ಬಳಕೆಗೆ ಡಿಸಿಜಿಐ ಅನುಮತಿ ನೀಡಿದೆ.
ಈ ಎರಡೂ ಔಷಧಿಗಳನ್ನು ತುರ್ತು ಪರಿಸ್ಥಿತಿಯ ವೇಳೆ ಏಕಕಾಲದಲ್ಲಿ ಬಳಕೆಗೆ ಅನುಮತಿ ನೀಡಲಾಗಿದೆ. ಹೀಗಾಗಿ, ಭಾರತಕ್ಕೆ ಅಗತ್ಯವಿರುವ ಔಷಧ ರಫ್ತಿನ ಕುರಿತು ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಅಲ್ಲದೆ ಕೋವಿಡ್ ವಿರುದ್ಧದ ಹೋರಾಟದಲ್ಲಿ ನಾವು ನಿರಂತರವಾಗಿ ಜೊತೆಯಲ್ಲಿದ್ದೇವೆ. ಈ ಔಷಧವನ್ನು 12 ವರ್ಷ ಮೇಲ್ಪಟ್ಟವರಿಗೆ ಹಾಗೂ ಕನಿಷ್ಠ 40ಕೆಜಿಗಿಂತ ಹೆಚ್ಚು ತೂಕ ಹೊಂದಿರುವವರಿಗೆ ನೀಡಬಹುದಾಗಿದೆ ಎಂದು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಲೂಕಾ ವಿಸಿನಿ ತಿಳಿಸಿದ್ದಾರೆ.