ETV Bharat / bharat

ದಿನದಿನವೂ ಹೆಚ್ಚುತ್ತಿದೆ ಕೋವಿಡ್‌; ಸಿದ್ಧತೆಗಳ ಪರಿಶೀಲನೆಗೆ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಅಣಕು ಕಸರತ್ತು

ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಸದ್ಯ 35,199 ಸಕ್ರಿಯ ಸೋಂಕು ಪ್ರಕರಣಗಳಿವೆ.

ಆಸ್ಪತ್ರೆಗಳಲ್ಲಿ ಪರಿಕರಗಳ ಪರಿಶೀಲನೆ
ಆಸ್ಪತ್ರೆಗಳಲ್ಲಿ ಪರಿಕರಗಳ ಪರಿಶೀಲನೆ
author img

By

Published : Apr 10, 2023, 4:41 PM IST

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 5,880 ಹೊಸ ಕೋವಿಡ್ ಸೋಂಕು ಪ್ರಕರಣಗಳು ದಾಖಲಾಗಿದ್ದು, 14 ಮಂದಿ ಮೃತಪಟ್ಟಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಂತೆ, ಪ್ರಸ್ತುತ ದೇಶದಲ್ಲಿ 35,199 ಸಕ್ರಿಯ ಪ್ರಕರಣಗಳಿವೆ. ದೆಹಲಿ, ಹಿಮಾಚಲ ಪ್ರದೇಶದಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ. ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ ಮತ್ತು ರಾಜಸ್ಥಾನದಿಂದ ಒಬ್ಬೊಬ್ಬರು ಮತ್ತು ಕೇರಳದಿಂದ ಎರಡು ಸಾವು ವರದಿಯಾಗಿದೆ. ದೈನಂದಿನ ಸಕ್ರಿಯ ಸೋಂಕು ದರ 6.91 ರಷ್ಟಿದೆ. ವಾರದ ಸೋಂಕು ದರ ಶೇ 3.67 ರಷ್ಟಿದೆ.

ಹಲವು ರಾಜ್ಯ ಸರ್ಕಾರಗಳು ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಸೌಲಭ್ಯಗಳನ್ನು ಪರೀಕ್ಷಿಸಲು ಇಂದು ಅಣಕು ಕಾರ್ಯಾಚರಣೆ ನಡೆಸುತ್ತಿವೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ರಾಷ್ಟ್ರ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಭೇಟಿ ನೀಡಿ ಅಣಕು ಕಸರತ್ತು ಪರಿಶೀಲಿಸಿದರು. ತಮಿಳುನಾಡು ಆರೋಗ್ಯ ಸಚಿವ ಸುಬ್ರಮಣಿಯನ್ ಚೆನ್ನೈನ ರಾಜೀವ್ ಗಾಂಧಿ ಜನರಲ್ ಆಸ್ಪತ್ರೆಯಲ್ಲಿ ಕೋವಿಡ್‌ ನಿಭಾಯಿಸಲು ತೆಗೆದುಕೊಂಡ ತುರ್ತು ಕ್ರಮಗಳನ್ನು ಪರಿಶೀಲಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ತಮಿಳುನಾಡಿನಲ್ಲಿ 350 ಅಥವಾ ಅದಕ್ಕಿಂತ ಕಡಿಮೆ ಕೋವಿಡ್ ಸೋಂಕಿನ ಪ್ರಕರಣಗಳಿವೆ. ಜನರು ಭಯಪಡುವ ಅಗತ್ಯವಿಲ್ಲ. ಮೂರನೇ ಅಲೆಗೆ ಹೋಲಿಸಿದರೆ 4ನೇ ಅಲೆ ಸೌಮ್ಯ ಪರಿಣಾಮ ಬೀರುತ್ತದೆ ಎಂದರು.

ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (CMHO) ಡಾ. ಭುರೆಸಿಂಗ್ ಸೆಟಿಯಾ ಮಾತನಾಡಿ, ಕೋವಿಡ್​ ಇಂದೋರ್‌ನಲ್ಲಿ ಶೇ 6 ರಿಂದ 7ರ ದರದಲ್ಲಿ ಕೋವಿಡ್ ಹೆಚ್ಚುತ್ತಿದೆ. ಪ್ರಸ್ತುತ ನಗರದಲ್ಲಿ 42 ಸಕ್ರಿಯ ಪ್ರಕರಣಗಳಿವೆ. ಎಲ್ಲರಿಗೂ ಅವರ ಮನೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 778 ಪ್ರಕರಣಗಳು ದಾಖಲಾಗಿವೆ. ಇಲ್ಲಿನ ಜೆಜೆ ಆಸ್ಪತ್ರೆ, ಸೇಂಟ್ ಜಾರ್ಜ್ ಆಸ್ಪತ್ರೆ ಮತ್ತು ಜಿಟಿ ಆಸ್ಪತ್ರೆ ಸೇರಿದಂತೆ ನಗರದ ಮುಖ್ಯ ಆಸ್ಪತ್ರೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

ಇದನ್ನೂ ಓದಿ : ದೇಶದಲ್ಲಿ 35,199ಕ್ಕೆ ಏರಿಕೆಯಾದ ಕೋವಿಡ್​ ಸಕ್ರಿಯ ಪ್ರಕರಣ: ಸೋಂಕು ನಿರ್ವಹಣೆಗೆ ಇಂದು, ನಾಳೆ ಮಾಕ್‌ ಡ್ರಿಲ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.