ETV Bharat / bharat

ಕೋವಿಡ್ 19: ದೇಶದಲ್ಲಿ 4,129 ಹೊಸ ಸೋಂಕು ಪ್ರಕರಣ, 20 ಮಂದಿ ಸಾವು

author img

By

Published : Sep 26, 2022, 12:25 PM IST

ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ದಾಖಲಾದ ಹೊಸ ಕೋವಿಡ್​​ 19 ಪ್ರಕರಣಗಳು, ಗುಣಮುಖರಾದವರು ಹಾಗೂ ವ್ಯಾಕ್ಸಿನೇಷನ್ ಮಾಹಿತಿ ಇಲ್ಲಿದೆ.

ಕೋವಿಡ್
covid

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 4,129 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 4,45,72,243 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲೀಗ 43,415 ಸಕ್ರಿಯ ಪ್ರಕರಣಗಳಿವೆ. ಕಳೆದೊಂದು ದಿನದಲ್ಲಿ 20 ಮಂದಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಒಟ್ಟು ಸಾವನ್ನಪ್ಪಿರುವವರ ಸಂಖ್ಯೆ 5,28,530 ಕ್ಕೆ ತಲುಪಿದೆ. ನಿನ್ನೆ 4,688 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 4,40,00,298 ಕ್ಕೆ ಏರಿಕೆಯಾಗಿದ್ದು, ಚೇತರಿಕೆಯ ಪ್ರಮಾಣ ಶೇ 98.72 ರಷ್ಟಿದೆ. ಸದ್ಯಕ್ಕೆ ದೈನಂದಿನ ಪಾಸಿಟಿವಿಟಿ ದರವು 2.15 % ಇದ್ದು, ಸಾಪ್ತಾಹಿಕ ಪಾಸಿಟಿವಿಟಿ ದರ 1.61 ಇದೆ. ಸಾವಿನ ಪ್ರಮಾಣವು 1.19% ಇದೆ.

ಇದನ್ನೂ ಓದಿ: ಕೋವಿಡ್​ನಿಂದ ಚೇತರಿಸಿಕೊಂಡ ವರ್ಷದ ನಂತರವೂ ವಯಸ್ಸಾದವರಲ್ಲಿ ಅಲ್ಝೈಮರ್​​ ಅಪಾಯ ದ್ವಿಗುಣ: ಸಂಶೋಧನೆ

ರಾಷ್ಟ್ರವ್ಯಾಪಿ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಇದುವರೆಗೆ 217.686 ಕೋಟಿ​ ಕೋವಿಡ್ ಡೋಸ್​ ಲಸಿಕೆ ನೀಡಲಾಗಿದೆ. ಕಳೆದೊಂದು ದಿನದಲ್ಲಿ 11,67,772 ಡೋಸ್​ ವ್ಯಾಕ್ಸಿನ್​ ನೀಡಲಾಗಿದೆ.

ಇದನ್ನೂ ಓದಿ: ಕೊರೊನಾ ವ್ಯಾಕ್ಸಿನ್​ 'ಫೈಝರ್' ಸಿಇಒ ಆಲ್ಬರ್ಟ್ ಬೌರ್ಲಾಗೆ ಕೋವಿಡ್ ಪಾಸಿಟಿವ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.