ETV Bharat / bharat

ದೇಶದಲ್ಲಿ ಕೋವಿಡ್ 3ನೇ ಅಲೆ ಅನಿವಾರ್ಯ: ಸಂಚಲನದ ಹೇಳಿಕೆ ನೀಡಿದ ಕೇಂದ್ರದ ಅಧಿಕಾರಿ

ದೇಶದಲ್ಲಿ ಕೊರೊನಾ ಮಹಾಮಾರಿಯ ಎರಡನೇ ಅಲೆಗೆ ಭಾರತ ತತ್ತರಿಸಿ ಹೋಗಿದ್ದು, ಇದೀಗ ಮೂರನೇ ಅಲೆ ಸಹ ಅಪ್ಪಳಿಸಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ.

Prof K Vijay Raghavan
Prof K Vijay Raghavan
author img

By

Published : May 5, 2021, 10:19 PM IST

ಹೈದರಾಬಾದ್​: ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಈಗಾಗಲೇ ಜೋರಾಗಿ ಬೀಸಲು ಶುರುವಾಗಿದ್ದು, ಇದರ ಮಧ್ಯೆ ಮೂರನೇ ಅಲೆ ಅನಿವಾರ್ಯ ಎಂದು ಕೇಂದ್ರ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಕೆ. ವಿಜಯ್​ ರಾಘವನ್​ ಅಭಿಪ್ರಾಯಪಟ್ಟಿದ್ದಾರೆ.

  • A phase three is inevitable, given the higher levels of circulating virus but it is not clear on what time scale this phase three will occur. We should prepare for new waves: K VijayRaghavan, Principal Scientific Advisor to Centre pic.twitter.com/c6lRzYaV2q

    — ANI (@ANI) May 5, 2021 " class="align-text-top noRightClick twitterSection" data=" ">

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದೇಶದಲ್ಲಿ 3ನೇ ಹಂತದ ಕೋವಿಡ್​ ಅಲೆ ಅನಿವಾರ್ಯ, ಅದರ ಸಮಯ ಮತ್ತು ಪ್ರಮಾಣ ಉಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಕೊರೊನಾ 2ನೇ ಅಲೆಯಿಂದ ಸಾವಿನ ಸಂಖ್ಯೆ ಹೆಚ್ಚಳ: ಆರೋಗ್ಯ ಇಲಾಖೆಗೆ ಹೆಚ್ಚಿದ ಒತ್ತಡ

ಕೋವಿಡ್ ರೂಪಾಂತರ ಸ್ವರೂಪ ಬದಲಾಗುತ್ತಿರುವ ಕಾರಣ ನಾವು ಮೂರನೇ ಹಂತದ ಅಲೆಗೆ ಸಿದ್ಧರಾಗಿರಬೇಕು ಎಂದಿರುವ ಅವರು, ಯಾವ ಸಮಯದಲ್ಲಿ ಇದು ಅಪ್ಪಳಿಸಲಿದೆ ಎಂದು ಉಳಿಸಲು ಸಾಧ್ಯವಿಲ್ಲ. ಇದಕ್ಕಾಗಿ ನಾವು ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು ಎಂದರು. ಹೊಸ ರೂಪಾಂತರಿ ವೈರಸ್​ ಎದುರಿಸಲು ಕೋವಿಡ್ ಲಸಿಕೆ ನಿಯಮಿತವಾಗಿ ಮೇಲ್ವಿಚಾರಣೆ ಮಾಡುವ ಅಗತ್ಯವಿದೆ ಎಂದಿರುವ ಅವರು, ಅದಕ್ಕಾಗಿ ಲಸಿಕೆ ಸಿದ್ಧಪಡಿಸಬೇಕು ಎಂದರು.

ದೇಶದಲ್ಲಿ ಕೊರೊನಾ ವಿರುದ್ಧ ಬಲಿಷ್ಠವಾಗಿ ಹೋರಾಡಲು ನಾವು ಕಠಿಣ ನಿರ್ಬಂಧ ಹಾಗೂ ಮಾರ್ಗಸೂಚಿ ಅನುಸರಣೆ ಮಾಡುವ ಅನಿವಾರ್ಯತೆ ನಿರ್ಮಾಣಗೊಂಡಿದೆ ಎಂದು ಇದೇ ವೇಳೆ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.