ETV Bharat / bharat

Covid-19 vaccine : ಸ್ಪುಟ್ನಿಕ್ ವಿ, ಸ್ಪುಟ್ನಿಕ್ ಲೈಟ್ ಉತ್ಪಾದನೆಗೆ ವೋಕ್‌ಹಾರ್ಡ್‌ ಸಹಿ - ಸ್ಪುಟ್ನಿಕ್ ಲೈಟ್ ಉತ್ಪಾದಿಸಲಿರುವ ವೋಕ್‌ಹಾರ್ಡ್‌

ರೆಗ್ಯುಲೇಟರಿ ಫೈಲಿಂಗ್‌ನಲ್ಲಿ, ವೋಕ್‌ಹಾರ್ಡ್ ಅಗತ್ಯ ಅನುಮೋದನೆಗಳು ಮತ್ತು ಇತರ ಷರತ್ತುಗಳಿಗೆ ಒಳಪಟ್ಟಿವೆ. 620 ದಶಲಕ್ಷ ಡೋಸ್‌ಗಳವರೆಗೆ ಸ್ಪುಟ್ನಿಕ್ ವಿ ಮತ್ತು ಸ್ಪುಟ್ನಿಕ್ ಲೈಟ್ ಲಸಿಕೆಗಳನ್ನು Ensoಗೆ ತಯಾರಿಸಿ ಪೂರೈಸುತ್ತದೆ. ಒಪ್ಪಂದದ ಅವಧಿ ಜೂನ್ 2023ರವರೆಗೆ ಇದೆ..

ಸ್ಪುಟ್ನಿಕ್ ವಿ, ಸ್ಪುಟ್ನಿಕ್ ಲೈಟ್ ಉತ್ಪಾದನೆಗೆ ವೋಕ್‌ಹಾರ್ಡ್‌ ಸಹಿ

author img

By

Published : Aug 13, 2021, 8:34 PM IST

ನವದೆಹಲಿ : ಸ್ಪುಟ್ನಿಕ್ ವಿ ಮತ್ತು ಸ್ಪುಟ್ನಿಕ್ ಲೈಟ್ ಕೋವಿಡ್-19 ಲಸಿಕೆಗಳನ್ನು ತಯಾರಿಸಲು ಮತ್ತು ಪೂರೈಸಲು ರಷ್ಯಾದ ನೇರ ಹೂಡಿಕೆ ನಿಧಿಯೊಂದಿಗೆ (ಆರ್‌ಡಿಐಎಫ್) ಒಪ್ಪಂದ ಮಾಡಿಕೊಂಡಿರುವುದಾಗಿ ಔಷಧ ತಯಾರಕ ವೋಕ್‌ಹಾರ್ಡ್‌ (Wockhardt) ಶುಕ್ರವಾರ ಹೇಳಿದೆ.

Enso ಹೆಲ್ತ್‌ಕೇರ್ ಆರ್‌ಡಿಐಎಫ್‌ನ ಸಮನ್ವಯ ಪಾಲುದಾರರಾದ ಸ್ಪುಟ್ನಿಕ್ ವಿ ಲಸಿಕೆಗಳನ್ನು ಭಾರತದಲ್ಲಿ ಪಡೆಯುವುದಕ್ಕಾಗಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. "ಸ್ಪುಟ್ನಿಕ್ ವಿ ಮತ್ತು ಸ್ಪುಟ್ನಿಕ್ ಲೈಟ್ ಲಸಿಕೆಗಳ ಜಾಗತಿಕ ಪೂರೈಕೆಗಾಗಿ ಆರ್‌ಡಿಐಎಫ್ ಜೊತೆ ಪಾಲುದಾರಿಕೆ ಹೊಂದಲು ನಮಗೆ ಸಂತೋಷವಾಗಿದೆ. ಇದು ವಾಣಿಜ್ಯ ಲಭ್ಯವಿರುವ ಅತ್ಯಂತ ಪರಿಣಾಮಕಾರಿ ಲಸಿಕೆಗಳಲ್ಲಿ ಒಂದಾಗಿದೆ" ಎಂದು ವೋಕ್‌ಹಾರ್ಡ್‌ ಗ್ರೂಪ್ ಸ್ಥಾಪಕ ಅಧ್ಯಕ್ಷ ಹಬಿಲ್ ಖೋರಕಿವಾಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಆರ್‌ಡಿಐಎಫ್ ಮತ್ತು ವೋಕ್‌ಹಾರ್ಡ್‌ನೊಂದಿಗೆ ಪಾಲುದಾರಿಕೆ ಮಾಡುವುದು ನಮ್ಮ ಸವಲತ್ತು, ಸ್ಪುಟ್ನಿಕ್ ವಿ ಮತ್ತು ಸ್ಪುಟ್ನಿಕ್ ಲೈಟ್ ಲಸಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲು ಅನುಕೂಲವಾಗಿದೆ" ಎಂದು ಎನ್ಸೊ ಹೆಲ್ತ್‌ಕೇರ್ ಚೇರ್​ಮನ್ ವಿನಯ್ ಮಾಲೂ ಹೇಳಿದರು.

ರೆಗ್ಯುಲೇಟರಿ ಫೈಲಿಂಗ್‌ನಲ್ಲಿ, ವೋಕ್‌ಹಾರ್ಡ್ ಅಗತ್ಯ ಅನುಮೋದನೆಗಳು ಮತ್ತು ಇತರ ಷರತ್ತುಗಳಿಗೆ ಒಳಪಟ್ಟಿವೆ. 620 ದಶಲಕ್ಷ ಡೋಸ್‌ಗಳವರೆಗೆ ಸ್ಪುಟ್ನಿಕ್ ವಿ ಮತ್ತು ಸ್ಪುಟ್ನಿಕ್ ಲೈಟ್ ಲಸಿಕೆಗಳನ್ನು Ensoಗೆ ತಯಾರಿಸಿ ಪೂರೈಸುತ್ತದೆ. ಒಪ್ಪಂದದ ಅವಧಿ ಜೂನ್ 2023 ರವರೆಗೆ ಇದೆ ಎಂದು ಅದು ಹೇಳಿದೆ.

ಓದಿ:ಇಂದೂ ಏರಿಕೆ ಕಂಡ ಚಿನ್ನ-ಬೆಳ್ಳಿ ಧಾರಣೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.