ನವದೆಹಲಿ: ದೇಶಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 10,488 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 313 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (Ministry of Health and Family Welfare) ಮಾಹಿತಿ ನೀಡಿದೆ.
ನಿನ್ನೆ (ಶನಿವಾರ) ಒಂದೇ ದಿನ 12,329 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಶೇ. 98.30 ಅಂದರೆ 3,39,22,037 ಜನರು ವೈರಸ್ನಿಂದ ಚೇತರಿಸಿಕೊಂಡಿದ್ದಾರೆ. ಇನ್ನು ಕಳೆದ 532 ದಿನಗಳ ಬಳಿಕ ಸಕ್ರಿಯ ಸೋಂಕು ಪ್ರಕರಣದ ಪ್ರಮಾಣ ಶೇ. 0.98ರಷ್ಟು ಇಳಿಕೆಯಾಗಿದ್ದು, ಪ್ರಸ್ತುತ 1,22,714 ಸಕ್ರಿಯ ಪ್ರಕರಣಗಳಿವೆ.
116.50 ಕೋಟಿ ಡೋಸ್ ವ್ಯಾಕ್ಸಿನೇಷನ್:
ದೇಶಾದ್ಯಂತ ಜನವರಿ 16ರಿಂದ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿದ್ದು, ಈವರೆಗೆ 116.50 ಕೋಟಿಗೂ ಹೆಚ್ಚು ಡೋಸ್ ವ್ಯಾಕ್ಸಿನ್ ನೀಡಲಾಗಿದೆ.
ಇದನ್ನೂ ಓದಿ: COVID Update: ರಾಜ್ಯದಲ್ಲಿಂದು 213 ಜನರಲ್ಲಿ ಸೋಂಕು.. 5 ಮಂದಿ ಸಾವು