ETV Bharat / bharat

26,624 ಹೊಸ ಪ್ರಕರಣಗಳು ಪತ್ತೆ: ದೇಶದಲ್ಲಿ 1 ಕೋಟಿ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ

ಭಾರತದಲ್ಲಿ ಕೋರೋನಾ ಸೋಂಕಿತರ ಸಂಖ್ಯೆ 1 ಕೋಟಿ ದಾಟಿದ್ದು, 95 ಲಕ್ಷಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

India reports 26,624 new cases
1 ಕೋಟಿ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ
author img

By

Published : Dec 20, 2020, 1:36 PM IST

ನವದೆಹಲಿ: ಕಳೆದ 24 ಗಂಟೆಗಳಲ್ಲಿ 26,624 ಸೋಂಕಿತರು ಪತ್ತೆಯಾಗಿದ್ದು, 341 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1 ಕೋಟಿ 31 ಸಾವಿರದ 223ಕ್ಕೆ ತಲುಪಿದ್ದು, ಮೃತರ ಸಂಖ್ಯೆ 1,45,477 ಕ್ಕೆ ಏರಿಕೆಯಾಗಿದೆ.

ಶನಿವಾರ 33,813 ಜನ ಕೊರೊನಾದಿಂದ ಚೇತರಿಸಿಕೊಂಡಿದ್ದು, ಒಟ್ಟು ಸೋಂಕಿತರ ಪೈಕಿ ಇದುವರೆಗೆ 95.80 ಲಕ್ಷ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. 3,05,344 ಲಕ್ಷ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

  • India records 26,624 new COVID-19 cases, 29,690 recoveries, & 341 deaths in the last 24 hours, as per Health Ministry.

    Total cases: 1,00,31,223

    Total recoveries: 95,80,402

    Active cases: 3,05,344

    Death toll: 1,45,477 pic.twitter.com/JWFahf7s5Q

    — ANI (@ANI) December 20, 2020 " class="align-text-top noRightClick twitterSection" data=" ">

ಭಾರತದಲ್ಲಿ 2020ರ ಆಗಸ್ಟ್ 23 ರಂದು 20 ಲಕ್ಷ ಸೋಂಕಿತರಿದ್ದರು. ಈ ಸಂಖ್ಯೆ ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷ ದಾಟಿತ್ತು. ಸೆಪ್ಟೆಂಬರ್ 28 ರಂದು 60 ಲಕ್ಷ ದಾಟಿದ್ರೆ, ಅಕ್ಟೋಬರ್ 11 ರಂದು 70 ಲಕ್ಷಕ್ಕೆ ತಲುಪಿತ್ತು. ಅಕ್ಟೋಬರ್ 29 ರಂದು 80 ಲಕ್ಷ, ನವೆಂಬರ್ 20 ರಂದು 90 ಲಕ್ಷ ಮತ್ತು ಡಿಸೆಂಬರ್ 19 ರಂದು ಒಂದು ಕೋಟಿ ಗಡಿ ದಾಟಿದೆ.

ಡಿಸೆಂಬರ್ 19 ರವರೆಗೆ 16,11,98,195 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಶನಿವಾರ 11,07,681 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.