ETV Bharat / bharat

Omicron ಬಗ್ಗೆ ದೆಹಲಿ ಸರ್ಕಾರ ಅಲರ್ಟ್: 4 ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗಾಗಿ ಮೀಸಲು

ಭಾರತದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ನೂರರ ಗಡಿ ದಾಟಿದೆ. ಈ ನಿಟ್ಟಿನಲ್ಲಿ ದೆಹಲಿ ಸರ್ಕಾರ ಕಟ್ಟೆಚ್ಚರ ವಹಿಸಿದ್ದು, 4 ಖಾಸಗಿ ಆಸ್ಪತ್ರೆಗಳನ್ನು ಸಂಪೂರ್ಣ ಒಮಿಕ್ರಾನ್‌ ಚಿಕಿತ್ಸೆಗಾಗಿ ಮೀಸಲಿರಿಸಿದೆ.

Omicron dedicated centres
ಸಾಂದರ್ಭಿಕ ಚಿತ್ರ
author img

By

Published : Dec 19, 2021, 11:05 AM IST

ನವದೆಹಲಿ: ದೇಶದಲ್ಲಿ ಕೋವಿಡ್ -19 ರೂಪಾಂತರ ತಳಿ ಒಮಿಕ್ರಾನ್‌ ಹೆಚ್ಚುತ್ತಿರುವ ಕಾರಣಕ್ಕೆ ದೆಹಲಿ ಸರ್ಕಾರ ಶನಿವಾರ 4 ಖಾಸಗಿ ಆಸ್ಪತ್ರೆಗಳನ್ನು ಸಂಪೂರ್ಣ ಒಮಿಕ್ರಾನ್‌ ಚಿಕಿತ್ಸೆಗಾಗಿ ಮೀಸಲಿರಿಸಿದೆ.

ಆ ನಾಲ್ಕು ಆಸ್ಪತ್ರೆಗಳೆಂದರೆ:

  1. ಸರ್ ಗಂಗಾ ರಾಮ್ ಆಸ್ಪತ್ರೆ
  2. ಸಾಕೇತ್‌ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆ
  3. ವಸಂತ್ ಕುಂಜ್‌ನಲ್ಲಿರುವ ಫೋರ್ಟಿಸ್ ಆಸ್ಪತ್ರೆ
  4. ತುಘಲಕಾಬಾದ್ ಪ್ರದೇಶದ ಬಾತ್ರಾ ಆಸ್ಪತ್ರೆ

ಈ ಹಿಂದೆ, ಒಮಿಕ್ರಾನ್ ಚಿಕಿತ್ಸೆಗಾಗಿ ಸರ್ಕಾರಿ ಲೋಕನಾಯಕ ಜೈ ಪ್ರಕಾಶ್ (ಎಲ್‌ಎನ್‌ಜೆಪಿ) ಆಸ್ಪತ್ರೆಯನ್ನು ಮಾತ್ರ ಗೊತ್ತುಪಡಿಸಲಾಗಿತ್ತು. ದೇಶದಲ್ಲಿ ಈವರೆಗೆ 10ಕ್ಕೂ ಹೆಚ್ಚು ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಡಿ.2 ರಂದು ಕರ್ನಾಟಕದಲ್ಲಿ ದೇಶದ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆಯಾಗಿತ್ತು.

ಮೊದಲ ಬಾರಿಗೆ ಕೋವಿಡ್​​-19 ಹೊಸ ರೂಪಾಂತರ ಒಮಿಕ್ರಾನ್​​ ನ.25 ರಂದು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ವರದಿ ಮಾಡಿತ್ತು. WHO ಪ್ರಕಾರ, ಈ ವರ್ಷ ನ.9 ರಂದು ಸಂಗ್ರಹಿಸಲಾದ ಮಾದರಿಯಿಂದ ಮೊದಲ ಬಾರಿಗೆ ದೃಢಪಟ್ಟಿತ್ತು. ನ.26 ರಂದು, ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಹೊಸ ಸೋಂಕನ್ನು WHO 'ಒಮಿಕ್ರಾನ್' ಎಂದು ಹೆಸರಿಸಿದೆ. ಒಮಿಕ್ರಾನ್​​ ಪತ್ತೆಯಾದಾಗಿನಿಂದ ಹಲವು ದೇಶಗಳು ದಕ್ಷಿಣ ಆಫ್ರಿಕಾದ ರಾಷ್ಟ್ರಗಳ ಮೇಲೆ ಪ್ರಯಾಣ ನಿರ್ಬಂಧ ವಿಧಿಸಿವೆ.

ಇದನ್ನೂ ಓದಿ: India Covid Report: 7,081 ಹೊಸ ಕೋವಿಡ್ ಕೇಸ್​ ಪತ್ತೆ, 264 ಮಂದಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.