ETV Bharat / bharat

ಅಮೆರಿಕದಲ್ಲಿ ಕೋವ್ಯಾಕ್ಸಿನ್​ ಪಾಸ್​.. ಪರೀಕ್ಷೆಯಲ್ಲಿ ಸಕಾರಾತ್ಮಕ ಫಲಿತಾಂಶ - ನ್ಯೂ ಇಂಗ್ಲೆಂಡ್ ಕಾಂಪ್ಲೆಕ್ಸ್

ಮೂರು ಹಂತದ ಪ್ರಯೋಗದ ಬಳಿಕ ಕೋವ್ಯಾಕ್ಸಿನ್​ ಸಕಾರಾತ್ಮಕ ಫಲಿತಾಂಶ - 28 ದಿನಗಳ ಅಂತರದಲ್ಲಿ 419 ಜನರ ಮೇಲೆ ಅಧ್ಯಯನ - ಅಮೆರಿಕದ ವ್ಯಾಕ್ಸಿನ್​ಗಿಂತ ಭಾರತದ ಕೋವ್ಯಾಕ್ಸಿನ್​ ಹೆಚ್ಚು ಪರಿಣಾಮ

covaxin tests positive in us bharat biotech subsidiary
ಅಮೆರಿಕಾದಲ್ಲಿ ಕೋವ್ಯಾಕ್ಸಿನ್​ ಪರೀಕ್ಷೆ ಪಾಸಿಟಿವ್​...
author img

By

Published : Jan 10, 2023, 9:44 PM IST

ಹೈದರಾಬಾದ್​: ಅಮೆರಿಕ​ ಮತ್ತು ಕೆನಾಡಾದಲ್ಲಿ ಭಾರತ್​ ಬಯೋಟೆಕ್​ನ ಕೋವಿಡ್​-19 ಲಸಿಕೆ ಕೋವಾಕ್ಸಿನ್​ (ಬಿಬಿವಿ152) ಪಾಲುದಾರರಾದ ಓಕ್ಯುಜೆನ್​ ಇಂಕ್​ ಸೋಮವಾರ ಅಮೆರಿಕಾದಲ್ಲಿ ಎರಡು - ಮೂರು ಹಂತದ ಪ್ರಯೋಗಗಳಲ್ಲಿ ಕೋವ್ಯಾಕ್ಸಿನ್​ ಲಸಿಕೆಯು ಸಕಾರಾತ್ಮಕ ಫಲಿತಾಂಶಗಳನ್ನು ಪಡೆದುಕೊಂಡಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಅಮೆರಿಕದ​ ಬಯೋಫಾರ್ಮಾಸ್ಯುಟಿಕಲ್​ ಕಂಪನಿ ಕೈಗೊಂಡ ಈ ಅಧ್ಯಯನದಲ್ಲಿ 419 ಜನ ವಯಸ್ಕರು ಪಾಲ್ಗೊಂಡಿದ್ದರು. 28 ದಿನಗಳ ಅಂತರದಲ್ಲಿ ಎರಡು ಡೋಸ್​ ಕೋವಾಕ್ಸಿನ್ ನೀಡಿ 1:1 ಉತ್ತಮ ಫಲಿತಾಂಶವನ್ನು ದಾಖಲಿಸಿದೆ ಎಂದು ಹೇಳಿದೆ.

ಎಸ್ ಪ್ರೋಟೀನ್ (ಸ್ಪೈಕ್ ಪ್ರೊಟೀನ್), ರಿಸೆಪ್ಟರ್-ಬೈಂಡಿಂಗ್ ಡೊಮೇನ್ ನಂತಹ ಪ್ರಮುಖ ಪ್ರತಿಜನಕಗಳನ್ನು ಒಳಗೊಂಡಿರುವ ಸಂಪೂರ್ಣ ವೈರಸ್ ವಿರುದ್ಧ ವ್ಯಾಪಕವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಕೋವಾಕ್ಸಿನ್ ಕ್ಲಿನಿಕಲ್ ಪ್ರಯೋಗಗಳು ಅನುಕೂಲ ಒದಗಿಸಿಕೊಟ್ಟಿವೆ ಎಂದು ಒಕ್ಯುಜೆನ್ ಹೇಳಿದ್ದಾರೆ. ಆದರೆ, ಪ್ರಸ್ತುತ ಅನುಮೋದಿತ ಲಸಿಕೆಗಳನ್ನು ಪಡೆದುಕೊಳ್ಳುವುದೇ ಅಮೆರಿಕದ ಮೊದಲ ಆದ್ಯತೆ ಆಗಿದೆ. ಎಂದು ಶಂಕರ್​ ಹೇಳಿದ್ದಾರೆ.

ಈ ಒಂದು ಅಧ್ಯಯನವು ಯಶಸ್ವಿಯಾಗಿ ಕೋವಿಡ್​-19 ನಿರ್ವಹಣೆಗೆ ಪ್ರಮುಖ ಮೈಲಿಗಲ್ಲನ್ನು ತಲುಪಲಿದೆ ಎಂದೂ ಅವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಸಾರ್ವಜನಿಕರಲ್ಲಿ ಒಂದು ಭಾಗವು ಎಂಆರ್‌ಎನ್‌ಎ ಲಸಿಕೆಗಳನ್ನು ಸ್ವೀಕರಿಸಲು ಹಿಂಜರಿಯುತ್ತಿರುವ ಕಾರಣ, ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನೆಗೆ ಉತ್ತಮ ವೇದಿಕೆ ಒದಗಿಸಲು ಈ ಸಂಶೋಧನೆ ಹಾಗೂ ಪರೀಕ್ಷಾರ್ಥ ಪ್ರಯೋಗಗಳು ಕೋವಿಡ್ ಹೋಗಲಾಡಿಸಲು ಪ್ರಮುಖವಾಗಿ ಹೆಚ್ಚುವರಿ ಲಸಿಕೆ ಆಯ್ಕೆಯನ್ನು ಒದಗಿಸಬಹುದು" ಎಂದು ಶಂಕರ್​ ತಿಳಿಸಿದರು.

ಶೇ 100ರಷ್ಟು ಕೋವ್ಯಾಕ್ಸಿನ್​ ಉತ್ತಮ ಪರಿಣಾಮ ಬೀರಲಿದೆ : ಭಾರತದಲ್ಲಿ ಭಾರತ ಬಯೋಟೆಕ್​ ಲಸಿಕೆಯು 3 ಹಂತದ ಅಧ್ಯಯನದಲ್ಲಿ ಕೋವಾಕ್ಸಿನ್​ ಲಸಿಕೆಯನ್ನು ಪಡೆದವರ ಫಲಿತಾಂಶಗಳೊಂದಿಗೆ, ಅಮೆರಿಕದಲ್ಲಿ ಕೋವ್ಯಾಕ್ಸಿನ್​ ಲಸಿಕೆ ಹಾಕಿಸಿ ಕೊಂಡವರಿಗೆ ಹೋಲಿಸಿದಾಗ ಹೆಚ್ಚು ರೋಗನಿರೋಧಕ ಫಲಿತಾಂಶಗಳನ್ನು ನೀಡಿವೆ. ಒಂದು ಅಂದಾಜಿನ ಪ್ರಕಾರ ಸುಮಾರು ಶೇ. 24ರಷ್ಟು ಲಸಿಕೆ ಪಡೆದ ಜನರ ಮೇಲೆ ಲಸಿಕೆ ಹೆಚ್ಚು ಪರಿಣಾಮಕಾರಿ ಫಲಿತಾಂಶ ಪಡೆದುಕೊಂಡಿದ್ದಾರೆ. ಆದರೆ, ಭಾರತ್​ ಬಯೋಟೆಕ್​ 3ನೇ ಹಂತದ ಅಧ್ಯಯನದಲ್ಲಿ ಭಾಗವಹಿಸಿದವರೆಲ್ಲರೂ ಲಸಿಕೆ ಶೇಕಡಾ 100ರಷ್ಟು ಸುರಕ್ಷಿತ ಎಂದು ಹೇಳಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ.

ಇಮ್ಯುನ್​ ಬ್ರಿಡ್ಜಿಂಗ್​ ಮತ್ತು ಬ್ರಾಡ್​​ನಿಂಗ್​​ ಅಧ್ಯಯನದ ಉನ್ನತ ಸಾಲಿನ ಡೇಟಾವು ಅಮೆರಿಕದಲ್ಲಿನ ಕೋವಾಕ್ಸಿನ್​ ಅಭಿವೃದ್ಧಿಗೆ ಒಕೆಜುನ್​ನ ಭವಿಷ್ಯದ ಯೋಜನೆಗಳನ್ನು ಉತ್ತೇಜಿಸಲು ನಿರ್ಣಾಯಕವಾಗಿದೆ. ಬ್ರಿಡ್ಜಿಂಗ್ ಅಧ್ಯಯನಗಳಿಗೆ ಸಮಾನವಾದ ರೋಗ ನಿರೋಧಕ ಶಕ್ತಿಯನ್ನು ಪ್ರದರ್ಶಿಸಲು ವಿನ್ಯಾಸಗೊಳಿಸಲಾಗಿದೆ.

ಕೋವಾಕ್ಸಿನ್​ ಲಸಿಕೆ ಪಡೆದ ವ್ಯಕ್ತಿಗಳು ಮತ್ತು ಮೆಸೆಂಜರ್ ರೈಬೋನ್ಯೂಕ್ಲಿಯಿಕ್ ಆಸಿಡ್ (mRNA) ಲಸಿಕೆ ಪಡೆದವರಿಗಿಂತ ಭಾರತ ಬಯೋಟೆಕ್​ನ ಔಷಧ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಯೋಗಾರ್ಥ ಪರೀಕ್ಷೆಯಲ್ಲಿ ಕಂಡು ಬಂದಿದೆ. ಯಾವುದೇ ಲಸಿಕೆ ಸಂಬಂಧಿತ ಗಂಭೀರ ಪ್ರತಿಕೂಲ ಘಟನೆಗಳು, ಥ್ರಂಬೋಟಿಕ್ ಘಟನೆಗಳು ಅಥವಾ ಮಯೋಕಾರ್ಡಿಟಿಸ್, ಪೆರಿಕಾರ್ಡಿಟಿಸ್ ಪ್ರಕರಣಗಳನ್ನು ಗಮನಿಸಿ ಈ ಅಧ್ಯಯನ ಮಾಡಲಾಗಿದೆ ಎಂದು ನ್ಯೂ ಇಂಗ್ಲೆಂಡ್ ಕಾಂಪ್ಲೆಕ್ಸ್ ಸಿಸ್ಟಮ್ಸ್ ಇನ್‌ಸ್ಟಿಟ್ಯೂಟ್‌ನ ಕೋವಿಡ್ ಕಾರ್ಯಪಡೆಯ ಮುಖ್ಯಸ್ಥ ಹಾಗೂ ಆರೋಗ್ಯ ಅರ್ಥಶಾಸ್ತ್ರಜ್ಞ ಎರಿಕ್ ಫೀಗಲ್​ಡಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಬಿಟ್ಟು ಹೋದ ಘಟನೆ: ಗೋಫಸ್ಟ್‌ಗೆ ಡಿಜಿಸಿಎ ಶೋಕಾಸ್ ನೋಟಿಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.