ETV Bharat / bharat

WHO ಸುರಕ್ಷಿತವೆಂದು ಘೋಷಿಸಿರುವ ಲಸಿಕೆ ಎಲ್ಲರಿಗೂ ಸಿಗಬೇಕು : Covax - ಡಬ್ಲ್ಯುಹೆಚ್​ಒ

ವ್ಯಾಪಾರ, ವಾಣಿಜ್ಯ ಮತ್ತು ಪ್ರಯಾಣವನ್ನು ಪುನಾರಂಭಿಸಲು ಜಗತ್ತು ಪ್ರಯತ್ನಿಸುತ್ತಿರುವ ಸಮಯದಲ್ಲಿ, ಇದು ಉತ್ಸಾಹ ಮತ್ತು ಫಲಿತಾಂಶದಲ್ಲಿ ಪ್ರತಿ-ಪರಿಣಾಮಕಾರಿ ಎಂದು ಕೋವಾಕ್ಸ್ ಹೇಳಿದೆ. ಕೋವಿಡ್ ಲಸಿಕೆ ಪಡೆದಿರುವವರಿಗೆ ಪ್ರವೇಶಕ್ಕೆ ಅನುಮತಿ ಕೊಟ್ಟಿರುವ ದೇಶಗಳನ್ನು ಕೋವಾಕ್ಸ್​ ಶ್ಲಾಘಿಸಿದೆ. ಇತರೆ ರಾಷ್ಟ್ರಗಳು ಕೂಡ ಈ ಮಾದರಿ ಅನುಸರಿಸಿ ಎಂದು ಸಲಹೆ ನೀಡಿದೆ..

Covax
Covax
author img

By

Published : Jul 2, 2021, 9:40 AM IST

ವಿಶ್ವಸಂಸ್ಥೆ : ಡಬ್ಲ್ಯುಹೆಚ್​ಒ ಸುರಕ್ಷಿತವೆಂದು ಘೋಷಿಸಿರುವ ಕೋವಿಡ್ ಲಸಿಕೆಗಳು ಎಲ್ಲರಿಗೂ ಸಿಗಬೇಕು ಎಂದು ಕೋವಾಕ್ಸ್​ ಕರೆ ನೀಡಿದೆ. ಲಸಿಕೆ ಪಡೆದಿರುವವರಿಗೆ ಇತರೆ ದೇಶಗಳು ಅಥವಾ ರಾಜ್ಯಗಳು ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಕೋವಾಕ್ಸ್ ಸೂಚಿಸಿದೆ.

‘ಕೋವಾಕ್ಸ್​​’ ಇದು ಸಮಾನ ಲಸಿಕೆ ವಿತರಣೆಯ ಜಾಗತಿಕ ಒಕ್ಕೂಟ. ಕೋವಿಡ್​ ಲಸಿಕೆಗಳನ್ನು ಎಲ್ಲರಿಗೂ ತಲುಪಿಸಬೇಕೆನ್ನುವ ಸದುದ್ದೇಶದಿಂದ ಇದನ್ನು ಸ್ಥಾಪಿಸಲಾಗಿದೆ. ಜಗತ್ತಿನ ಎಲ್ಲರ ಆರೋಗ್ಯ ಕಾಪಾಡುವುದರ ಜತೆಗೆ ಜೀವನ, ಜೀವನೋಪಾಯವನ್ನು ರಕ್ಷಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಪಂಚದ ಕೆಲ ಭಾಗಗಳಲ್ಲಿ ಸಂಚಾರಕ್ಕೆ ಅವಕಾಶವಿದ್ದಾಗ, ಕೋವಿಡ್ ಲಸಿಕೆಗಳನ್ನು ಪಡೆದ ಎಲ್ಲ ಜನರನ್ನು ಲಸಿಕೆ ಹಾಕಿಸಿಕೊಂಡವರು ಘೋಷಿಸಬೇಕಿದೆ. ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿರುವ ಲಸಿಕೆ ಪಡೆದವರಿಗೆ ಸಂಚಾರಕ್ಕೆ ಅನುಮತಿ ನೀಡಿದರೆ, ಇತರರೂ ವ್ಯಾಕ್ಸಿನ್ ಪಡೆದುಕೊಳ್ಳುತ್ತಾರೆ. ಇದರಿಂದಾಗಿ ಲಸಿಕೆ ವಿತರಣೆಯಲ್ಲಿನ ಅಸಮಾನತೆ ಕಡಿಮೆಯಾಗುತ್ತದೆ. ಲಸಿಕೆ ಅಸಮಾನತೆಯು ಈಗಾಗಲೇ ನೆಲಕಚ್ಚಿರುವ ಆರ್ಥಿಕತೆ ಮೇಲೆಯೂ ಗಂಭೀರ ಪರಿಣಾಮ ಬೀರುತ್ತದೆ ಎಂದು ಕೋವಾಕ್ಸ್ ಹೇಳಿದೆ.

ವ್ಯಾಪಾರ, ವಾಣಿಜ್ಯ ಮತ್ತು ಪ್ರಯಾಣವನ್ನು ಪುನಾರಂಭಿಸಲು ಜಗತ್ತು ಪ್ರಯತ್ನಿಸುತ್ತಿರುವ ಸಮಯದಲ್ಲಿ, ಇದು ಉತ್ಸಾಹ ಮತ್ತು ಫಲಿತಾಂಶದಲ್ಲಿ ಪ್ರತಿ-ಪರಿಣಾಮಕಾರಿ ಎಂದು ಕೋವಾಕ್ಸ್ ಹೇಳಿದೆ. ಕೋವಿಡ್ ಲಸಿಕೆ ಪಡೆದಿರುವವರಿಗೆ ಪ್ರವೇಶಕ್ಕೆ ಅನುಮತಿ ಕೊಟ್ಟಿರುವ ದೇಶಗಳನ್ನು ಕೋವಾಕ್ಸ್​ ಶ್ಲಾಘಿಸಿದೆ. ಇತರೆ ರಾಷ್ಟ್ರಗಳು ಕೂಡ ಈ ಮಾದರಿ ಅನುಸರಿಸಿ ಎಂದು ಸಲಹೆ ನೀಡಿದೆ.

ಕೋವಿಡ್​​​ ಬಿಕ್ಕಟ್ಟಿನ ಸಮಯದಲ್ಲಿ ಮುಕ್ತ ಸಂಚಾರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಕೊರೊನಾ ಲಸಿಕೆ ಪಡೆದವರಿಗೆ ಯೂರೋಪಿಯನ್​ ಒಕ್ಕೂಟದ ಡಿಜಿಟಲ್​ ಕೋವಿಡ್​ ಪ್ರಮಾಣ ಪತ್ರ ಅಥವಾ ಗ್ರೀನ್​ ಪಾಸ್​ಜಾರಿಗೆ ತಂದಿದೆ.

ಈ ಚೌಕಟ್ಟಿನಡಿ, ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ)ನಿಂದ ಅಧಿಕೃತ ಲಸಿಕೆ ತೆಗೆದುಕೊಂಡವರಿಗೆ ಇಯು ಪ್ರದೇಶದ ಪ್ರಯಾಣ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗುತ್ತದೆ. ಕೋವಿಶೀಲ್ಡ್ ಲಸಿಕೆ ಪಡೆದವರ ಪ್ರವೇಶಕ್ಕೆ ಆಸ್ಟ್ರಿಯಾ, ಜರ್ಮನಿ, ಸ್ಲೊವೇನಿಯಾ, ಗ್ರೀಸ್, ಐಸ್ಲ್ಯಾಂಡ್, ಐರ್ಲೆಂಡ್ ಮತ್ತು ಸ್ಪೇನ್ ಅನುಮತಿ ನೀಡಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.