ETV Bharat / bharat

ನವ ವಧು-ವರರಿಗೆ 5 ಲೀಟರ್​ ಪೆಟ್ರೋಲ್​ ಉಡುಗೊರೆ.. ಯಾಕೆ ಗೊತ್ತಾ? - ವಧು-ವರರಿಗೆ 5 ಲೀಟರ್​ ಪೆಟ್ರೋಲ್​ ಉಡುಗೊರೆ

ಚೆನ್ನೈನ ಮಧುರಾವೊಯಲ್​​ನಲ್ಲಿ ಮದುವೆಯಾದ ಜೋಡಿಯೊಂದಕ್ಕೆ ಅವರ ಸ್ನೇಹಿತರು ವಿಶಿಷ್ಟ ಹಾಗೂ ಅಪರೂಪದ ಉಡುಗರೆ ನೀಡಿ ಗಮನ ಸೆಳೆದರು. 5 ಲೀಟರ್ ಪೆಟ್ರೋಲ್ ಕ್ಯಾನ್, ಈರುಳ್ಳಿ ಹಾರ ಮತ್ತು ಸಿಲಿಂಡರ್ ಅನ್ನು ನವ ಜೋಡಿಗೆ ಉಡುಗೊರೆ ನೀಡಿ ಪ್ರಸ್ತುತ ದೇಶದಲ್ಲಿನ ಬೆಲೆ ಏರಿಕೆ ಸ್ಥಿತಿಯನ್ನ ದೇಶಕ್ಕೆ ಎತ್ತಿ ತೋರಿದರು.

Couple in Tamilnadu get 5 litres petrol as a wedding gift
ನವ ವಧು-ವರರಿಗೆ 5 ಲೀಟರ್​ ಪೆಟ್ರೋಲ್​ ಉಡುಗೊರೆ
author img

By

Published : Feb 18, 2021, 2:05 PM IST

ಚೆನ್ನೈ: ದೇಶದಲ್ಲಿ ದಿನೇ-ದಿನೇ ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ಒಂದಿಷ್ಟು ದಿನ ಈರುಳ್ಳಿ ಬೆಲೆ ಏರಿಕೆಯಾಗಿ ಗ್ರಾಹಕರಿಗೆ ಸಂಕಷ್ಟ ತಂದಿದ್ದರೆ, ಇದೀಗ ಪೆಟ್ರೋಲ್​-ಡೀಸೆಲ್​ ಬೆಲೆ ಗಗನಮುಖಿಯಾಗಿ ವಾಹನ ಸವಾರರು ಸೇರಿದಂತೆ ಜನ ಸಾಮಾನ್ಯರನ್ನು ಹೈರಾಣಾಗಿಸಿದೆ.

ನವ ವಧು-ವರರಿಗೆ 5 ಲೀಟರ್​ ಪೆಟ್ರೋಲ್​ ಉಡುಗೊರೆ.. ಯಾಕೆ ಗೊತ್ತಾ?

ಈ ನಡುವೆ ಸ್ನೇಹಿತರ ಗುಂಪೊಂದು ಮದುವೆಯಾಗುತ್ತಿರುವ ಸ್ನೇಹಿತ ವಧು-ವರರಿಗೆ ಉಡುಗೊರೆಯಾಗಿ 5 ಲೀಟರ್​ ಪೆಟ್ರೋಲ್​ ನೀಡಿ ಗಮನ ಸೆಳೆದಿದೆ. ಇದು ತಮಾಷೆಯಾದರೂ ದೇಶದಲ್ಲಿ ಜನಸಾಮಾನ್ಯ ಅನುಭವಿಸುತ್ತಿರುವ ಸಂಕಷ್ಟವನ್ನ ಸೂಚ್ಯವಾಗಿ ಸೂಚಿಸುವಂತಿದೆ. ಚೆನ್ನೈನ ಮಧುರಾವೊಯಲ್​​ನಲ್ಲಿ ಮದುವೆಯಾದ ಜೋಡಿಯೊಂದಕ್ಕೆ ಅವರ ಸ್ನೇಹಿತರು ವಿಶಿಷ್ಟ ಹಾಗೂ ಅಪರೂಪದ ಉಡುಗರೆ ನೀಡಿ ಗಮನ ಸೆಳೆದರು. 5 ಲೀಟರ್ ಪೆಟ್ರೋಲ್ ಕ್ಯಾನ್, ಈರುಳ್ಳಿ ಹಾರ ಮತ್ತು ಸಿಲಿಂಡರ್ ಅನ್ನು ನವ ಜೋಡಿಗೆ ಉಡುಗೊರೆ ನೀಡಿ ಪ್ರಸ್ತುತ ದೇಶದಲ್ಲಿನ ಬೆಲೆ ಏರಿಕೆ ಸ್ಥಿತಿಯನ್ನ ದೇಶಕ್ಕೆ ಎತ್ತಿ ತೋರಿದರು.

ಕಾರ್ತಿಕ್ ಮತ್ತು ಶರಣ್ಯ ಅವರಿಗೆ ಈ ವಿನೂತನ ಉಡುಗೊರೆ ನೀಡಿ ಸ್ನೇಹಿತರು ಸಂತಸಪಟ್ಟರು. ವನಗರಂನ ಬಕ್ಯಲಕ್ಷ್ಮಿ ಮದುವೆ ಮಂಟಪ ಇಂತಹೊಂದು ಅಪರೂಪದ ಮದುವೆ ಸಮಾರಂಭಕ್ಕೆ ಸಾಕ್ಷಿಯಾಯಿತು. ದಂಪತಿಯ ಸ್ನೇಹಿತರ ನಿಜವಾದ ಪ್ರಯತ್ನವನ್ನು ಹಲವರು ಮೆಚ್ಚಿ ಹೌದೌದು ಎಂದು ತಲೆದೂಗಿದರು. ಅಂದಹಾಗೆ ಪೆಟ್ರೋಲ್ ಬೆಲೆ ರೂ. ತಮಿಳುನಾಡಿನಲ್ಲಿ ಪ್ರತಿ ಲೀಟರ್‌ಗೆ 92 ರೂ. ಆಗಿದ್ದರೆ, ಪ್ರತಿ ಸಿಲಿಂಡರ್ ಬೆಲೆ 900 ರೂಪಾಯಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.