ಭರತಪುರ (ರಾಜಸ್ಥಾನ): ಕಾರು-ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ದಂಪತಿ-ಮಗು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ರೂಪಾಸ್ನಲ್ಲಿ ನಡೆದಿದೆ. ರಕ್ಷಾ ಬಂಧನ ಆಚರಿಸಲು ತವರಿಗೆ ತೆರಳಿದ್ದ ಮಹಿಳೆಯು, ಪತಿ-ಮಗುವಿನೊಂದಿಗೆ ಹಿಂದಿರುಗುವ ವೇಳೆ ಈ ಅವಘಡ ಸಂಭವಿಸಿದೆ.
ಫತೇಪುರ್ ಸಿಕ್ರಿಯ ಬಂಡರೋನ್ಲಿ ನಿವಾಸಿ ಬಬ್ಲು ಕುಶ್ವಾಹ, ಪತ್ನಿ ಆರತಿ ಮತ್ತು ಮಗ ಕಾರ್ತಿಕ್ ಮೃತ ದುರ್ದೈವಿಗಳಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಲ್ಲದೆ, ಕಾರನ್ನು ಜಪ್ತಿ ಮಾಡಿ ತನಿಖೆ ಮುಂದುವರಿಸಿದ್ದಾರೆ.
ರಾಖಿ ಕಟ್ಟಿಸಿಕೊಂಡು ಹಿಂದಿರುಗುತ್ತಿದ್ದ ವೇಳೆ ಅಪಘಾತ, ಯುವಕ ಸಾವು
ಅಲ್ವಾರ್ನಲ್ಲಿ ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡು ಹಿಂದಿರುಗುತ್ತಿದ್ದ ವೇಳೆ, ರಸ್ತೆ ಅಪಘಾತದಲ್ಲಿ ಪಿನಾನ್ ನಿವಾಸಿ ರವಿಕುಮಾರ್ ಗೌತಮ್ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಹೆಣ್ಣು ಮಗು ಜನಿಸಿತೆಂದು ಹೀಗೆ ಮಾಡೋದಾ.. ಛೇ.. ಇವಳೆಂಥ ಅಮ್ಮ?