ನವದೆಹಲಿ: ದೇಶದಲ್ಲಿ ಹೊಸದಾಗಿ 25,467 ಮಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, 24 ಗಂಟೆಯಲ್ಲಿ 354 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಒಂದೇ ದಿನದಲ್ಲಿ 39,486 ಮಂದಿ ಗುಣಮುಖರಾಗಿದ್ದು, ಈವರೆಗೆ 3,17,20,112 ಮಂದಿ ಚೇತರಿಕೆ ಕಂಡಿದ್ದಾರೆ. ದೇಶದಲ್ಲಿ ಈವರೆಗೆ 4,35,110 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 3,19,551 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈಗ ಒಟ್ಟು ಸೋಂಕಿತರ ಸಂಖ್ಯೆ ದೇಶದಲ್ಲಿ 3,24,74,773ಕ್ಕೆ ಏರಿಕೆಯಾಗಿದೆ. ವ್ಯಾಕ್ಸಿನೇಷನ್ ವಿಚಾರಕ್ಕೆ ಬರುವುದಾದರೆ 24 ಗಂಟೆಯಲ್ಲಿ 63,85,298 ಮಂದಿಗೆ ವ್ಯಾಕ್ಸಿನೇಷನ್ ಮಾಡಲಾಗಿದ್ದು, ಈವರೆಗೆ ಒಟ್ಟು 58,89,97,805 ಮಂದಿಗೆ ಲಸಿಕೆ ನೀಡಲಾಗಿದೆ.
ವ್ಯಾಕ್ಸಿನೇಷನ್ ಬಗ್ಗೆ ಮತ್ತಷ್ಟು ಮಾಹಿತಿ
ಭಾರತದಲ್ಲಿ ಈವರೆಗೆ 589 ಮಿಲಿಯನ್ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಸುಮಾರು 132.85 ಮಿಲಿಯನ್ ಮಂದಿಗೆ ಈವರೆಗೆ ಪೂರ್ಣ ಪ್ರಮಾಣದ ವ್ಯಾಕ್ಸಿನ್ ನೀಡಲಾಗಿದೆ. ಕಳೆದ 24 ಗಂಟೆಯಲ್ಲಿ 6.39 ಮಿಲಿಯನ್ ಕೋವಿಡ್ ಡೋಸ್ ನೀಡಲಾಗಿದ್ದು, 1.79 ಮಿಲಿಯನ್ ಮಂದಿಗೆ ಎರಡನೇ ಹಂತದ ಲಸಿಕೆ ನೀಡಲಾಗಿದೆ.
ಭಾರತದ ರಾಜ್ಯಗಳಲ್ಲಿ 64.23 ಮಿಲಿಯನ್ ಡೋಸ್ ಲಸಿಕೆ ನೀಡುವ ಮೂಲಕ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ (53.91 ಮಿಲಿಯನ್) ಮೂರನೇ ಸ್ಥಾನದಲ್ಲಿ ಗುಜರಾತ್ (43.21 ಮಿಲಿಯನ್) ರಾಜ್ಯಗಳಿವೆ.
ಎರಡು ಹಂತದ ಕೋವಿಡ್ ವ್ಯಾಕ್ಸಿನ್ ಪೂರ್ಣಗೊಳಿಸಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ (14.27 ಮಿಲಿಯನ್) ಮೊದಲ ಸ್ಥಾನದಲ್ಲಿದೆ. ಎರಡು ಮತ್ತು ಮೂರನೇ ಸ್ಥಾನಗಳಲ್ಲಿ ಕ್ರಮವಾಗಿ ಗುಜರಾತ್ (10.59 ಮಿಲಿಯನ್) ಮತ್ತು ಉತ್ತರ ಪ್ರದೇಶ (10.2 ಮಿಲಿಯನ್) ರಾಜ್ಯಗಳಿವೆ.
ಚೇತರಿಕೆ ಪ್ರಮಾಣದಲ್ಲಿ ಏರಿಕೆ..
ಕೋವಿಡ್ನಿಂದ ಚೇತರಿಕೆ ಕಾಣುವವರ ಪ್ರಮಾಣ ಕೂಡಾ ದೇಶದಲ್ಲಿ ಏರಿಕೆಯಾಗುತ್ತಿದೆ. ಈಗ ಚೇತರಿಕೆ ಪ್ರಮಾಣ ಶೇಕಡಾ 97.68ರಷ್ಟಿದ್ದು, ಕಳೆದ ಮಾರ್ಚ್ನಿಂದ ಇದೇ ಮೊದಲ ಬಾರಿಗೆ ಚೇತರಿಕೆ ಪ್ರಮಾಣ ಈ ಮಟ್ಟಕ್ಕೆ ಮುಟ್ಟಿದೆ.
ಸಕ್ರಿಯ ಸೋಂಕಿತರ ಪ್ರಮಾಣದ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಸುಮಾರು 156 ದಿನಗಳ ನಂತರ ಇದೇ ಮೊದಲ ಬಾರಿಗೆ ಸಕ್ರಿಯ ಸೋಂಕಿತರ ಸಂಖ್ಯೆ 3,19,551ಕ್ಕೆ ಏರಿಕೆಯಾಗಿದೆ.
ಸೋಂಕು ಪರೀಕ್ಷಾ ಪ್ರಮಾಣ
ದೇಶದಲ್ಲಿ ಈವರೆಗೆ 50,93,91,792 ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ. ಸೋಮವಾರ ಒಂದೇ ದಿನದಲ್ಲಿ 16,47,526 ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ.
ಇದನ್ನೂ ಓದಿ: ಗ್ರೀನ್ಲ್ಯಾಂಡ್ನಲ್ಲಿ ಭಾರಿ ಮಳೆ, ವಿಜ್ಞಾನಿಗಳಲ್ಲಿ ಆತಂಕ: ಭಾರತಕ್ಕೂ ಎಚ್ಚರಿಕೆಯ ಕರೆಗಂಟೆ