ETV Bharat / bharat

ಭಾರತದಲ್ಲಿ ಮತ್ತಷ್ಟು ಹೆಚ್ಚಾಯ್ತು ಕೋವಿಡ್​.. 5,233 ಹೊಸ ಪ್ರಕರಣ ದಾಖಲು

ಭಾರತದಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಏರಿಕೆಯಾಗ್ತಿದ್ದು, ನಿನ್ನೆಗೆ ಹೋಲಿಕೆ ಮಾಡಿದಾಗ ಇಂದು ಅದರಲ್ಲಿ ಮತ್ತಷ್ಟು ಹೆಚ್ಚಳ ಕಂಡು ಬಂದಿದೆ.

Coronavirus cases in india
Coronavirus cases in india
author img

By

Published : Jun 8, 2022, 9:46 AM IST

ನವದೆಹಲಿ: ನಿನ್ನೆಗೆ ಹೋಲಿಕೆ ಮಾಡಿದಾಗ ಭಾರತದಲ್ಲಿ ಶೇ. 41ರಷ್ಟು ಕೋವಿಡ್​ ಸೋಂಕಿತ ಪ್ರಕರಣಗಳು ಹೆಚ್ಚಾಗಿದ್ದು, 5,233 ಹೊಸ ಕೇಸ್​​ಗಳು ದಾಖಲಾಗಿವೆ. ನಿನ್ನೆ ದೇಶದಲ್ಲಿ 4,518 ಪ್ರಕರಣ ದಾಖಲಾಗಿದ್ದವು. ಆದರೆ, ಇದೀಗ ಅದರಲ್ಲಿ ತುಸು ಏರಿಕೆ ಕಂಡು ಬಂದಿದೆ. ಆದರೆ, ಕಳೆದ 24 ಗಂಟೆಗಳಲ್ಲಿ 3,345 ಜನರು ಕೋವಿಡ್​ನಿಂದ ಗುಣಮುಖರಾಗಿದ್ದು, 7 ಜನರು ಸಾವನ್ನಪ್ಪಿದ್ದಾರೆ.

ಸದ್ಯ ದೇಶದಲ್ಲಿ 28,857 ಸಕ್ರಿಯ ಪ್ರಕರಣಗಳಿದ್ದು, ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 1,881 ಪ್ರಕರಣ ದಾಖಲಾಗಿದ್ದು, ಮುಂಬೈನಲ್ಲೇ 1,242 ಕೇಸ್​ ಕಾಣಿಸಿಕೊಂಡಿವೆ. ಉಳಿದಂತೆ ಕೇರಳ, ಕರ್ನಾಟಕದಲ್ಲೂ ಮಹಾಮಾರಿ ಆರ್ಭಟ ತುಸು ಹೆಚ್ಚಾಗಿದೆ. ದೆಹಲಿಯಲ್ಲೂ 450 ಪ್ರಕರಣ ಕಾಣಿಸಿಕೊಂಡಿವೆ.

ಇದನ್ನೂ ಓದಿ: ಹರಿಣಗಳ ವಿರುದ್ಧದ ಸರಣಿಯಲ್ಲಿ ಉಮ್ರಾನ್​ ಆಡುವುದು ಅನುಮಾನ.. ಕೋಚ್​ ದ್ರಾವಿಡ್ ಹೇಳಿದ್ದೇನು?

ದೇಶದಲ್ಲಿ ಕೋವಿಡ್​ನಿಂದ ಇಲ್ಲಿಯವರೆಗೆ 4,26,36,710 ಜನರು ಗುಣಮುಖರಾಗಿದ್ದು, 5,24,715 ಜನರು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ದೇಶದಲ್ಲಿ 85,35,22,623 ಜನರಿಗೆ ಕೋವಿಡ್ ಟೆಸ್ಟ್​ ನಡೆಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.