ETV Bharat / bharat

ನಿಲ್ಲದ ಕೋವಿಡ್ ಅಬ್ಬರ: ಕಳೆದ 24 ಗಂಟೆಗಳಲ್ಲಿ 47,092 ಜನರಿಗೆ ವಕ್ಕರಿಸಿರುವ ವೈರಸ್ - ಐಸಿಎಂಆರ್​

ದೇಶದಲ್ಲಿ ಕೋವಿಡ್ ಅಬ್ಬರ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹೊಸದಾಗಿ 47,092 ಕೋವಿಡ್ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 3,28,57,937 ಕ್ಕೇರಿದೆ.

ಕೋವಿಡ್
ಕೋವಿಡ್
author img

By

Published : Sep 2, 2021, 10:50 AM IST

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 47,092 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 3,28,57,937 ಕ್ಕೇರಿದೆ. 35,181 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗುಣಮುಖರಾದವರ ಸಂಖ್ಯೆ 3,20,28,825 ಅಗಿದೆ.

ನಿನ್ನೆ ಒಂದೇ ದಿನ ವೈರಸ್​ಗೆ 509 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 4,39,529 ಕ್ಕೆ ಏರಿದೆ. ಸದ್ಯ ದೇಶದಲ್ಲಿ 3,89,583 ಸಕ್ರಿಯ ಪ್ರಕರಣಗಳಿವೆ. ನಿನ್ನೆ 81,09,244 ವ್ಯಾಕ್ಸಿನ್​ ಡೋಸ್​​ಗಳನ್ನು ನೀಡಲಾಗಿದ್ದು, ಸೆಪ್ಟೆಂಬರ್ 1 ರವರೆಗೆ 66,30,37,334 ಲಸಿಕೆ ಡೋಸ್​ಗಳನ್ನು ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಸೆಪ್ಟೆಂಬರ್ 1 ರಂದು 16,84,441 ಸ್ವ್ಯಾಬ್​ ಟೆಸ್ಟ್ ಮಾಡಲಾಗಿದ್ದರೆ, ಈವರೆಗೆ 52,48,68,734 ಗಂಟಲು ದ್ರವ ಮಾದರಿಗಳನ್ನು ತಪಾಸಣೆ ಮಾಡಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.