ETV Bharat / bharat

ಸಬರಮತಿ ನದಿ ನೀರಿನಲ್ಲಿ ಪತ್ತೆಯಾದ ಕೊರೊನಾ ವೈರಸ್: ಗಾಂಧಿನಗರ IIT ವರದಿ - ಗುಜರಾತ್​​ನ ನದಿಯಲ್ಲಿ ಕೊರೊನಾ

ಅಹಮದಾಬಾದ್‌ನ ಸಬರಮತಿ ನದಿ, ಕಾಕರಿಯಾ ಮತ್ತು ಚಂದೋಲಾ ಸರೋವರದ ನೀರಿನಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ.

GUJARAT: Corona virus found in Ahmedabad's Sabarmati River, Kakaria and Chandola Lake water
ಸಬರಮತಿ ನದಿ ನೀರಿನಲ್ಲೂ ಕೊರೊನಾ ವೈರಸ್​ ಪತ್ತೆ
author img

By

Published : Jun 18, 2021, 11:47 AM IST

ಅಹಮದಾಬಾದ್​ (ಗುಜರಾತ್​): ಕೋವಿಡ್​ ಮಹಾಮಾರಿಯಿಂದ ಮೃತಪಟ್ಟವರ ಶವಗಳನ್ನು ನದಿಗಳಲ್ಲಿ ಎಸೆಯುತ್ತಿರುವ ಘಟನೆಗಳ ಬೆನ್ನಲ್ಲೇ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಗುಜರಾತ್​​ನ ಅಹಮದಾಬಾದ್‌ನ ಸಬರಮತಿ ನದಿ, ಕಾಕರಿಯಾ ಮತ್ತು ಚಂದೋಲಾ ಸರೋವರದ ನೀರಿನಲ್ಲಿ ಕೊರೊನಾ ವೈರಸ್ ಪತ್ತೆಯಾಗಿರುವುದಾಗಿ ಗಾಂಧಿನಗರ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ವರದಿ ಮಾಡಿದೆ.

ಗಾಂಧಿನಗರ ಐಐಟಿ ಭೂ ವಿಜ್ಞಾನ ವಿಭಾಗದ ಪ್ರೊ.ಮನೀಶ್ ಕುಮಾರ್​ ನೇತೃತ್ವದಲ್ಲಿ ಇತರ ಎಂಟು ಸಂಸ್ಥೆಗಳು ಈ ಸಂಶೋಧನೆ ನಡೆಸಿವೆ. ಸೆಪ್ಟೆಂಬರ್​ನಿಂದ ಡಿಸೆಂಬರ್‌ವರೆಗೆ ಸಬರಮತಿ ನದಿ, ಕಾಕರಿಯಾ ಮತ್ತು ಚಂದೋಲಾ ಸರೋವರ ನೀರಿನ ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲಾಗಿದೆ. ಸಂಶೋಧನೆಯ ವರದಿ ಇನ್ನೂ ಪ್ರಕಟವಾಗಿಲ್ಲ. ಆದರೆ ನೀರಿನಲ್ಲಿ ವೈರಸ್​ ಪತ್ತೆಯಾಗಿರುವುದನ್ನು ಸಂಶೋಧನಾ ತಂಡ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ನೀರಿನಲ್ಲೂ ಪತ್ತೆಯಾದ ಕೋವಿಡ್ ವೈರಸ್​​​!

ಈ ಹಿಂದೆ ಉತ್ತರ ಪ್ರದೇಶದ ಕೆಲ ಭಾಗಗಳಿಂದ ಕೊಳಚೆ ನೀರು ಸಂಗ್ರಹಿಸಿ ಲಖನೌನ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯು ಪರೀಕ್ಷೆಗೆ ಒಳಪಡಿಸಿತ್ತು. ಕೊಳಚೆ ನೀರಿನಲ್ಲಿ ಕೋವಿಡ್​ ಸೋಂಕು ಇರುವುದು ದೃಢಪಟ್ಟಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.