ETV Bharat / bharat

ಕೊವಾಕ್ಸಿನ್​, ಕೋವಿಶೀಲ್ಡ್​ ಬೂಸ್ಟರ್​ ಡೋಸ್​ ಜೊತೆಗೆ ಕಾರ್ಬೆವಾಕ್ಸ್​ಗೂ ಅನುಮತಿ - ಕಾರ್ಬೆವಾಕ್ಸ್​ ಲಸಿಕೆಯನ್ನು ಮುನ್ನೆಚ್ಚರಿಕಾ ಡೋಸ್​ ಆಗಿ ತೆಗೆದುಕೊಳ್ಳಲು ಅನುಮತಿ

ಕೋವಿಶೀಲ್ಡ್​ ಹಾಗೂ ಕೊವಾಕ್ಸಿನ್​ ಬೂಸ್ಟರ್​ ಡೋಸ್​ಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಅದರ ಜೊತೆಗೆ ಮಕ್ಕಳಿಗೆ ನೀಡಲಾಗುತ್ತಿದ್ದ ಕಾರ್ಬೆವಾಕ್ಸ್​ ಲಸಿಕೆಯನ್ನು ಬೂಸ್ಟರ್​ ಡೋಸ್​ ಆಗಿ 18 ವರ್ಷ ಮೇಲ್ಪಟ್ಟವರು ಪಡೆಯಬಹುದಾಗಿದೆ.

corbevax-approved-as-precaution-dose
ಕಾರ್ಬೆವಾಕ್ಸ್​ಗೂ ಅನುಮತಿ
author img

By

Published : Aug 10, 2022, 12:59 PM IST

ನವದೆಹಲಿ: ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ 2 ಡೋಸ್​ ಕೊವ್ಯಾಕ್ಸಿನ್​, ಕೋವಿಶೀಲ್ಡ್​ ಲಸಿಕೆ ಅಲ್ಲದೇ ಬೂಸ್ಟರ್​ ಡೋಸ್​ ಅನ್ನೂ ಉಚಿತವಾಗಿ ನೀಡುತ್ತಿದೆ. ಅದರ ಜೊತೆಗೆ ಇದೀಗ 18 ವರ್ಷ ಮೇಲ್ಪಟ್ಟವರಿಗೆ ಬಯೋಲಾಜಿಕಲ್​ ಇ ಕಾರ್ಬೆವಾಕ್ಸ್​ ಲಸಿಕೆಯನ್ನು ಮುನ್ನೆಚ್ಚರಿಕಾ ಡೋಸ್​ ಆಗಿ ತೆಗೆದುಕೊಳ್ಳಲು ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.

ಏಕವ್ಯಕ್ತಿ ಎರಡು ಮಾದರಿಯ ಲಸಿಕೆಯನ್ನು ಪಡೆಯಲು ಅನುಮತಿಸಿರುವುದು ಇದೇ ಮೊದಲಾಗಿದೆ. ಅದರಲ್ಲೂ ಬೂಸ್ಟರ್​ ಡೋಸ್​ಗೆ ಅನುಮತಿಸಿರುವುದು ವಿಶೇಷವಾಗಿದೆ. ಇಮ್ಯುನೈಸೇಶನ್‌ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನ ಮೇರೆಗೆ ಕೇಂದ್ರ ಆರೋಗ್ಯ ಸಚಿವಾಲಯ ಇದನ್ನು ಅನುಮೋದಿಸಿದೆ ಎಂದು ಗೊತ್ತಾಗಿದೆ.

18 ವರ್ಷಕ್ಕಿಂತ ಮೇಲ್ಪಟ್ಟವರು ಕೊವ್ಯಾಕ್ಸಿನ್​ ಮತ್ತು ಕೋವಿಶೀಲ್ಡ್​ ಪಡೆದ 6 ತಿಂಗಳು ಅಥವಾ 26 ವಾರಗಳ ನಂತರ ಕಾರ್ಬೆವಾಕ್ಸ್ ಅನ್ನು ಮುನ್ನೆಚ್ಚರಿಕೆ ಡೋಸ್ ಆಗಿ ಹಾಕಿಸಿಕೊಳ್ಳಬಹುದು. ಕಾರ್ಬೆವಾಕ್ಸ್ ವೈವಿಧ್ಯಮಯ ಕೋವಿಡ್​ ಲಸಿಕೆಯಾಗಿರುವುದರಿಂದ ಈ ವಯೋಮಾನದವರಲ್ಲಿ ಹೆಚ್ಚಿನ ರೋಗ ನಿರೋಧಕತೆ ಉತ್ಪಾದಿಸಲು ಈ ಬೂಸ್ಟರ್​ ಡೋಸ್​ ನೆರವಾಗಲಿದೆ ಎಂದು ಹೇಳಲಾಗಿದೆ.

ಈಗಾಗಲೇ ನೀಡಲಾಗಿರುವ ಮಾರ್ಗಸೂಚಿಗಳ ಪ್ರಕಾರ ಕೊವ್ಯಾಕ್ಸಿನ್​ ಅಥವಾ ಕೋವಿಶೀಲ್ಡ್​ ಅನ್ನು ಬೂಸ್ಟರ್​ ಡೋಸ್​ ಆಗಿ ಪಡೆದುಕೊಳ್ಳಲು ಅನುಮತಿಸಲಾಗಿದೆ. ಕಾರ್ಬೆವಾಕ್ಸ್​ ಡೋಸ್​ ಪಡೆದುಕೊಳ್ಳಲು ನೀಡಿದ ಅನುಮತಿ ಮಾರ್ಗಸೂಚಿಗಳಲ್ಲಿ ಹೆಚ್ಚುವರಿಯಾಗಿದೆ.

ಸ್ಥಳೀಯವಾಗಿ ಉತ್ಪಾದಿಸಲಾದ ಬಯೋಲಾಜಿಕಲ್​ ಲಸಿಕೆಯಾದ ಕಾರ್ಬೆವಾಕ್ಸ್​ ಅನ್ನು ಈ ಮೊದಲು 12-14 ವರ್ಷದ ವಯೋಮಾನದ ಮಕ್ಕಳಿಗೆ ಮಾತ್ರ ನೀಡಲು ಅನುಮೋದಿಸಲಾಗಿತ್ತು.

ಕೊವಾಕ್ಸಿನ್​ ಮತ್ತು ಕೋವಿಶೀಲ್ಡ್​ ಲಸಿಕೆಯ ಡೋಸ್​ ಪಡೆದ ಆಯ್ದ ವ್ಯಕ್ತಿಗಳ ಮೇಲೆ ನಡೆಸಲಾದ ಪ್ರಯೋಗದಲ್ಲಿ ಕಾರ್ಬೆವಾಕ್ಸ್​ ಬೂಸ್ಟರ್​ ಡೋಸ್​ ಹೆಚ್ಚಿನ ಫಲಿತಾಂಶ ತಂದಿದೆ. ಬೂಸ್ಟರ್​ ಡೋಸ್​ ಆಗಿ ಪಡೆದ ವ್ಯಕ್ತಿಗಳಲ್ಲಿ ಪ್ರತಿಕಾಯಗಳು ಗಮನಾರ್ಹವಾಗಿ ಹೆಚ್ಚಳ ಕಂಡಿವೆ. ಹೀಗಾಗಿ ಇದು ಸೋಂಕಿನ ವಿರುದ್ಧ ಇನ್ನಷ್ಟು ರಕ್ಷಣೆ ನೀಡುತ್ತದೆ ಎಂಬುದು ಅಧ್ಯಯನದಲ್ಲಿ ಕಂಡುಬಂದಿದೆ.

ಓದಿ: ಕುಡಿದ ಅಮಲಿನಲ್ಲಿದ್ದವ ಸರಿರಾತ್ರಿ ಮನೆಗೆ ಹೋಗಲು ಸರ್ಕಾರಿ ಬಸ್ಸನ್ನೇ ಕದ್ದ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.