ETV Bharat / bharat

ಭ್ರಷ್ಟರನ್ನು ಯಾರು ರಕ್ಷಿಸುತ್ತಿದ್ದಾರೆ?: ಪ್ರಧಾನಿಗೆ ಕಪಿಲ್ ಸಿಬಲ್ ತಿರುಗೇಟು - ನವದೆಹಲಿ

ಪ್ರತಿಪಕ್ಷಗಳು ದಶಕಗಳಿಂದ ಭ್ರಷ್ಟಾಚಾರದಿಂದ ಲಾಭ ಪಡೆದಿವೆ ಮತ್ತು ತನಿಖಾ ಸಂಸ್ಥೆಗಳ ಮೇಲೆ ದಾಳಿ ಮಾಡುವ ಪರಿಸರ ವ್ಯವಸ್ಥೆಯನ್ನು ರಚಿಸಿವೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದರು. ಇದಕ್ಕೆ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ತಿರುಗೇಟು ನೀಡಿದ್ದಾರೆ.

Kapil Sibal and Narendra Modi
ಕಪಿಲ್ ಸಿಬಲ್ ಮತ್ತು ಪ್ರಧಾನಿ ಮೋದಿ
author img

By

Published : Apr 4, 2023, 11:28 AM IST

ನವದೆಹಲಿ: ರಾಷ್ಟ್ರ ರಾಜಧಾನಿಯ ವಿಜ್ಞಾನ ಭವನದಲ್ಲಿ ನಡೆದ ಸಿಬಿಐ ವಜ್ರ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಯಾವುದೇ ಹಿಂಜರಿಕೆ ಇಲ್ಲದೇ ಮುಂದುವರೆಸುವಂತೆ ಸಿಬಿಐಗೆ ಕರೆ ನೀಡಿದ್ದರು. ಅಲ್ಲದೇ ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡುವಲ್ಲಿ ಸಿಬಿಐನ ಪಾತ್ರ ದೊಡ್ಡದು ಎಂದು ಪ್ರತಿಪಾದಿಸಿದರು. ಇದಕ್ಕೆ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ತಿರುಗೇಟು ನೀಡಿದ್ದಾರೆ. ಯುಪಿಎ ಆಡಳಿತದಲ್ಲಿ ಭ್ರಷ್ಟಾಚಾರ ಪ್ರಕರಣಗಳಲ್ಲಿ ಅಪರಾಧಿಗಳ ಸಂಖ್ಯೆ ಹೆಚ್ಚು ಎಂದು ಹೇಳಿದ್ದಾರೆ.

  • PM to CBI :
    Don’t spare the corrupt

    March 2016 :
    Jitender Singh told Parliament :

    2013 : 1136 persons convicted for corruption
    2014 : 993
    2015 : 878
    2016 : 71

    Conviction of the corrupt higher during UPA !

    Men may lie but facts do not lie
    Who is protecting the corrupt ?

    — Kapil Sibal (@KapilSibal) April 4, 2023 " class="align-text-top noRightClick twitterSection" data=" ">

"ಭ್ರಷ್ಟರನ್ನು ಯಾರು ರಕ್ಷಿಸುತ್ತಿದ್ದಾರೆ?": ಈ ಬಗ್ಗೆ ಟ್ವೀಟ್‌ ಮಾಡಿದ ಕಪಿಲ್ ಸಿಬಲ್, ಮಾರ್ಚ್ 2016ರಂದು ಜಿತೇಂದ್ರ ಸಿಂಗ್ ಅವರು ಸಂಸತ್ತಿಗೆ ನೀಡಿದ ವರದಿಯನ್ನು ಉಲ್ಲೇಖಿಸಿದ್ದಾರೆ. 2013ರಲ್ಲಿ 1,136 ಜನರು, 2014ರಲ್ಲಿ 993 ಮಂದಿ, 2015ರಲ್ಲಿ 878 ಮಂದಿ, 2016ರಲ್ಲಿ 71 ಮಂದಿ ಭ್ರಷ್ಟಾಚಾರಕ್ಕಾಗಿ ಶಿಕ್ಷೆಗೊಳಗಾದವರು. ಪ್ರಧಾನಿ ಸುಳ್ಳು ಹೇಳಬಹುದು. ಆದರೆ ಸತ್ಯಗಳು ಸುಳ್ಳಾಗುವುದಿಲ್ಲ. ಭ್ರಷ್ಟರನ್ನು ರಕ್ಷಿಸುವವರು ಯಾರು? ಎಂದು ಪ್ರಶ್ನಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಸಿಬಲ್ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಸದಸ್ಯರಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

ಪ್ರತಿಪಕ್ಷಗಳ ವಿರುದ್ಧ ಪಿಎಂ ವಾಗ್ದಾಳಿ: ಸೋಮವಾರ ಸಿಬಿಐ ವಜ್ರ ಮಹೋತ್ಸವ ಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ದಶಕಗಳಿಂದ ಭ್ರಷ್ಟಾಚಾರದಿಂದ ಲಾಭ ಪಡೆದವರು ತನಿಖಾ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಹೊಸ ವ್ಯವಸ್ಥೆಯನ್ನು ರಚಿಸಿದ್ದಾರೆ. ಆದರೆ ಅದಕ್ಕೆ ಏಜೆನ್ಸಿಗಳು ಧೃತಿಗೆಡದೇ ತಮ್ಮ ಕೆಲಸಗಳತ್ತ ಗಮನ ಹರಿಸಬೇಕು ಎಂದು ಪ್ರಧಾನಿ ಧೈರ್ಯ ತುಂಬಿದ್ದರು.

ಇಂದು ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳಲು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಲ್ಲ. ನೀವು ಹಿಂಜರಿಯಬೇಡಿ ಎಂದು ಏಜೆನ್ಸಿಗಳಿಗೆ ಸಲಹೆ ನೀಡಿದ್ದರು. ಈ ಜನರು ನಿಮ್ಮನ್ನು ವಿಚಲಿತಗೊಳಿಸುತ್ತಾರೆ. ಆದರೆ, ನೀವು ನಿಮ್ಮ ಕೆಲಸದ ಮೇಲೆ ಗಮನ ಹರಿಸಬೇಕು. ಯಾವುದೇ ಭ್ರಷ್ಟರನ್ನು ಬಿಡಬಾರದು. ನಮ್ಮ ಪ್ರಯತ್ನಗಳಲ್ಲಿ ಯಾವುದೇ ಸಡಿಲಿಕೆ ಇರಬಾರದು. ಇದು ದೇಶದ ಜನತೆಯ ಆಶಯ. ದೇಶ, ಕಾನೂನು ಮತ್ತು ಸಂವಿಧಾನ ನಿಮ್ಮೊಂದಿಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಭ್ರಷ್ಟಾಚಾರ ಒಂದು ಸಾಮಾನ್ಯ ಅಪರಾಧ ಅಲ್ಲ. ಅದು ಬಡವರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಭ್ರಷ್ಟಾಚಾರದಿಂದ ಹಲವು ಅಪರಾಧಗಳು, ಅಕ್ರಮಗಳು ಹುಟ್ಟಿಕೊಳ್ಳುತ್ತವೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ, ನ್ಯಾಯ ದಾನ ವ್ಯವಸ್ಥೆಗೆ ಭ್ರಷ್ಟಾಚಾರವು ಅತಿ ದೊಡ್ಡ ಅಡ್ಡಿ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದರು.

ಕರ್ನಾಟಕ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವಾಗ, ಅದಾನಿ ವಿಚಾರದಲ್ಲಿ ಪ್ರತಿಪಕ್ಷಗಳ ಟೀಕೆ ಎದುರಿಸುತ್ತಿರುವ ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿನ ಭ್ರಷ್ಟಾಚಾರದ ಕುರಿತು ಆನ್‌ಲೈನ್ ವಿಡಿಯೋ ಅಭಿಯಾನವನ್ನು ಅಧಿಕೃತವಾಗಿ ಪ್ರಾರಂಭಿಸಿದೆ. "ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ" ಎಂಬ ಶೀರ್ಷಿಕೆಯ ಮೊದಲ ಸಂಚಿಕೆಯು "ಕಾಂಗ್ರೆಸ್ ತನ್ನ 70 ವರ್ಷಗಳ ಆಡಳಿತದಲ್ಲಿ ಸಾರ್ವಜನಿಕರಿಂದ 48,20,69,00,00,000 ರೂ.ಗಳನ್ನು ಲೂಟಿ ಮಾಡಿದೆ" ಎಂಬ ಹೇಳಿಕೆಯೊಂದಿಗೆ ಪ್ರಾರಂಭಿಸಿತ್ತು.

ಇದನ್ನೂ ಓದಿ: ಸಿಬಿಐ ನ್ಯಾಯ, ಸತ್ಯದ ಬ್ರ್ಯಾಂಡ್​.. ಸಂಸ್ಥೆಯಿಂದ ತನಿಖೆಗಾಗಿ ಜನಾಗ್ರಹ: ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.