ETV Bharat / bharat

‘ರಾಮಾಯಣ ಯಾತ್ರಾ’ ವಿಶೇಷ ರೈಲಿನಲ್ಲಿ ಕೇಸರಿ ಸಮವಸ್ತ್ರ ವಿವಾದ: ಉಜ್ಜಯಿನಿ ಸಂತರಿಂದ ಆಕ್ರೋಶ - ಪರಮಹಂಸ ಅಖಾರ ಪರಿಷತ್‌

‘ರಾಮಾಯಣ ಯಾತ್ರಾ’ ಸರಣಿಗೆ ನಿಯೋಜಿಸಿರುವ ರೈಲು ನವೆಂಬರ್ 7ರಂದು ದಿಲ್ಲಿಯಿಂದ ಪ್ರಯಾಣ ಆರಂಭಿಸಿದೆ. ಅದು ಮುಂದೆ ಚಿತ್ರಕೂಟ, ನಾಸಿಕ್, ಜನಕ್‌ಪುರ, ಸೀತಾಮರ್ಹಿ, ಶೃಂಗವೇರಪುರ, ಪ್ರಾಚೀನ ಕಿಷ್ಕಿಂಧಾದ ಹಂಪಿ ಮತ್ತು ರಾಮೇಶ್ವರಂವನ್ನು ತಲುಪಿ ದೆಹಲಿಗೆ ಮರಳಲಿದೆ.

saffron uniforms of waiters
ಕೇಸರಿ ಸಮವಸ್ತ್ರ ಧರಿಸಿರುವ ವೇಟರ್​ಗಳು
author img

By

Published : Nov 22, 2021, 10:50 PM IST

ಮಧ್ಯಪ್ರದೇಶ: ಧಾರ್ಮಿಕ ಪ್ರವಾಸೋದ್ಯಮ (Religious Tourism)ವನ್ನು ಉತ್ತೇಜಿಸಲು ಭಾರತೀಯ ರೈಲ್ವೆ ಕೇಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ (IRCTC) ಆರಂಭಿಸಿರುವ ‘ರಾಮಾಯಣ ಯಾತ್ರಾ’ ಸರಣಿಯ (Ramayana Circuit Train) ರೈಲಿನಲ್ಲಿ ಕೇಸರಿ ವಸ್ತ್ರದ ವಿವಾದವೆದ್ದಿದೆ.

ಈ ರೈಲಿನಲ್ಲಿ ಕೆಲಸ ಮಾಡುವ ವೇಟರ್‌ಗಳು ಸಂತರಂತೆ ಕೇಸರಿ ವಸ್ತ್ರಗಳನ್ನು(saffron uniforms of waiters) ಧರಿಸಿ ಬರುವ ಭಕ್ತರಿಗೆ ಊಟ ಬಡಿಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಉಜ್ಜಯಿನಿಯ ಸಂತರು ಖಂಡಿಸಿದ್ದು, ಈ ಬಗ್ಗೆ ರೈಲ್ವೆ ಸಚಿವರಿಗೆ ಪತ್ರ ಬರೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಮಹಂಸ ಅಖಾರ ಪರಿಷತ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಅವಧೇಶ್‌ ಪುರಿ ಮಾತನಾಡಿ, 'ಸಂತರ ವೇಷಭೂಷಣಗಳನ್ನು ಮಾಣಿಗಳು ಧರಿಸಿದ್ದಾರೆ. ಇದು ಸಾಧು ಸಮಾಜಕ್ಕೆ ಮಾಡಿದ ಅವಮಾನ. ಶೀಘ್ರದಲ್ಲೇ ಅವರು ಧರಿಸಿರುವ ವೇಷಭೂಷಣವನ್ನು ಬದಲಾಯಿಸಬೇಕು. ಇಲ್ಲದಿದ್ದರೆ ಡಿಸೆಂಬರ್ 12 ರಂದು ರೈಲು ಸಂಚಾರವನ್ನು ವಿರೋಧಿಸಲಾಗುತ್ತದೆ. ರೈಲಿನ ಮುಂದೆ ಸಾವಿರಾರು ಹಿಂದೂಗಳು ಪ್ರತಿಭಟನೆ ನಡೆಸಲಿದ್ದಾರೆ. ವಿಡಿಯೋ ಹೊರಬಿದ್ದ ನಂತರ ನಾನು ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದೇನೆ' ಎಂದಿದ್ದಾರೆ.

Ramayana Circuit Train,
‘ರಾಮಾಯಣ ಯಾತ್ರಾ’ ರೈಲು

ಸುದೀರ್ಘ ಪ್ರಯಾಣದ ಈ ಯಾತ್ರಾ ಸರಣಿಯಲ್ಲಿ ಪ್ರವಾಸಿಗರನ್ನು ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆ ಒಳಗೊಂಡಂತೆ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳಾದ ಉಜ್ಜಯಿನಿ, ಅಯೋಧ್ಯೆ, ಚಿತ್ರಕೂಟ ಮೊದಲಾದ ಸ್ಥಳಗಳಿಗೆ ಕರೆದೊಯ್ಯಲು ಆರಂಭಿಸಲಾಗಿದೆ.

ರಾಮಾಯಣ ಸರ್ಕ್ಯೂಟ್ ರೈಲು ನವೆಂಬರ್ 7ರಂದು ದೆಹಲಿಯಿಂದ ಪ್ರಯಾಣ ಆರಂಭಿಸಿದೆ. ಅದು ಮುಂದೆ ಚಿತ್ರಕೂಟ, ನಾಸಿಕ್, ಜನಕ್‌ಪುರ, ಸೀತಾಮರ್ಹಿ, ಶೃಂಗವೇರಪುರ, ಪ್ರಾಚೀನ ಕಿಷ್ಕಿಂಧಾದ ಹಂಪಿ ಮತ್ತು ರಾಮೇಶ್ವರಂವನ್ನು ತಲುಪಿ 17 ದಿನಗಳ ನಂತರ ಪುನಃ ದೆಹಲಿಗೆ ಮರಳಲಿದೆ.

ದಕ್ಷಿಣ ಹಾಗೂ ಉತ್ತರ ಭಾರತದ ಯಾತ್ರಿಕರ ಅವಶ್ಯಕತೆ ಪೂರೈಸಲು ಸ್ಲೀಪರ್ ಕ್ಲಾಸ್ ಕೋಚ್‌ಗಳನ್ನು ಒಳಗೊಂಡ ವಿಶೇಷ ಸೌಲಭ್ಯವನ್ನು ಒದಗಿಸಲಾಗಿದೆ. ರೈಲು ಸಂಪೂರ್ಣ ಎಸಿ ವ್ಯವಸ್ಥೆ ಹೊಂದಿದೆ. ಇದರಲ್ಲಿ ಒಬ್ಬ ವ್ಯಕ್ತಿಗೆ (ದ್ವಿತೀಯ ದರ್ಜೆಗೆ) 82,950 ರೂ. ಪ್ರಥಮ ದರ್ಜೆಗೆ 1,02,095 ರೂ.ನಿಗದಿ ಪಡಿಸಲಾಗಿದೆ.

ಈ ರೈಲು ಅತ್ಯಾಧುನಿಕವಾಗಿದ್ದು, ಆಹಾರವೂ ವಿಶೇಷವಾಗಿದೆ. ಎರಡು ವಿಶೇಷ ತರಬೇತುದಾರರನ್ನು ಇದಕ್ಕೆ ನಿಯೋಜಿಸಲಾಗಿದೆ. ಇತ್ತೀಚಿನ ಕಿಚನ್ ಕಾರ್ ಮತ್ತು ಫೂಟ್ ಮಸಾಜರ್ ಹಾಗೂ ಲೈಬ್ರರಿಯನ್ನು ಇದರೊಳಗೆ ನಿರ್ಮಿಸಲಾಗಿದೆ.

Ramayana Circuit Train
ಪ್ರಯಾಣಿಕರಿಗಾಗಿ ಅತ್ಯಾಧುನಿಕ ರೈಲು

ಇದರಲ್ಲಿ ಯಾವುದೇ ಪ್ರಯಾಣಿಕ ರಾಮಾಯಣ ಕಾಲದ ಸಾಹಿತ್ಯವನ್ನು ಓದಬಹುದು. ಶವರ್ ಕ್ಯೂಬಿಕಲ್ ಸೌಲಭ್ಯವನ್ನೂ ಇದರಲ್ಲಿ ನೀಡಲಾಗಿದೆ. ಈ ರೈಲಿನಲ್ಲಿ ವಿಶೇಷ ಭದ್ರತಾ ಸಿಬ್ಬಂದಿಯೊಂದಿಗೆ ಲಾಕರ್‌ಗಳು ಮತ್ತು ಸಿಸಿಟಿವಿಗಳನ್ನು ಅಳವಡಿಸಲಾಗಿದೆ.

ಇದನ್ನೂ ಓದಿ: 'ಫಿಟ್​​ ಹೈ ತೋ ಹಿಟ್​ ಹೈ': 85ರ ಹರೆಯದಲ್ಲೂ 3 ಚಿನ್ನದ ಪದಕ ಗೆದ್ದ ಕ್ರೀಡಾಪ್ರೇಮಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.