ರಾಯ್‌ಪುರ (ಛತ್ತೀಸ್ಗಢ) : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಸಂಗ್ರಹಿಸಿದ ದೇಣಿಗೆಯ ಲೆಕ್ಕ ನೀಡುವಂತೆ ಬಿಜೆಪಿಗೆ ಒತ್ತಾಯಿಸಿರುವ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಗೆಲ್, ಬಿಜೆಪಿ ಈವರೆಗೆ ಸಂಗ್ರಹಿಸಿದ ದೇಣಿಗೆಯ ಕುರಿತು ರಾಷ್ಟ್ರಕ್ಕೆ ತಿಳಿಸಬೇಕು ಎಂದು ಹೇಳಿದ್ದಾರೆ.
ರಾಮ ಮಂದಿರಕ್ಕೆ ರಾಜ್ಯ ಸರ್ಕಾರ 101 ಕೋಟಿ ರೂ. ದೇಣಿಗೆ ನೀಡಬೇಕು ಎಂದು ಬಿಜೆಪಿ ಶಾಸಕ ಬ್ರಿಜ್ಮೋಹನ್ ಅಗ್ರವಾಲ್ ಅವರ ಹೇಳಿಕೆಯ ಕುರಿತು ಮಾತನಾಡಿದ ಅವರು, 1992ರಿಂದ ಬಿಜೆಪಿ ಸಂಗ್ರಹಿಸಿದ ಹಣದ ಲೆಕ್ಕವನ್ನು ಮೊದಲು ನೀಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಯಾವುದೇ ರೀತಿಯ ದೇಣಿಗೆ ನೀಡಿಲ್ಲ, ಹೀಗಾಗಿ ಲೆಕ್ಕ ಪಡೆಯುವ ಹಕ್ಕು ಅವರಿಗಿಲ್ಲ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.