ETV Bharat / bharat

ಆಡಳಿತ ಪಕ್ಷ "ರಾಜಕೀಯ ದುರಹಂಕಾರ" ಪ್ರದರ್ಶಿಸುತ್ತಿದೆ: ಕಾಂಗ್ರೆಸ್ ವಾಗ್ದಾಳಿ - ಕಾಂಗ್ರೆಸ್ ಹಿರಿಯ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಪತ್ರಿಕಾ ಗೋಷ್ಠಿ

ಇಂಧನ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಕೊರೊನಾ ಸಾಂಕ್ರಾಮಿಕ ಕಾಲದಲ್ಲಿಯೂ ಅಬಕಾರಿ ಸುಂಕವನ್ನು ಕಡಿಮೆ ಮಾಡದೆ ಆಡಳಿತ ಪಕ್ಷ "ರಾಜಕೀಯ ದುರಹಂಕಾರ" ಪ್ರದರ್ಶಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Congress senior spokesperson Abhishek Manu Singhvi
ಕಾಂಗ್ರೆಸ್ ಹಿರಿಯ ವಕ್ತಾರ ಅಭಿಷೇಕ್ ಮನು ಸಿಂಘ್ವಿ
author img

By

Published : Feb 28, 2021, 10:33 AM IST

ನವದೆಹಲಿ: ಕೊರೊನಾ ಸಾಂಕ್ರಾಮಿಕ ಕಾಲದಲ್ಲಿಯೂ ಅಬಕಾರಿ ಸುಂಕವನ್ನು ಕಡಿಮೆ ಮಾಡದೆ ಆಡಳಿತ ಪಕ್ಷ "ರಾಜಕೀಯ ದುರಹಂಕಾರ" ಪ್ರದರ್ಶಿಸುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಿರಿಯ ವಕ್ತಾರ ಅಭಿಷೇಕ್ ಮನು ಸಿಂಘ್ವಿ ವಾಗ್ದಾಳಿ

ಶನಿವಾರ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ವಕ್ತಾರ ಅಭಿಷೇಕ್ ಮನು ಸಿಂಘ್ವಿ "ಈ ಸರ್ಕಾರ ಎಲ್ಲ ಮಿತಿಗಳನ್ನು ಮೀರಿದೆ. ಕಳೆದ 14 ದಿನಗಳಲ್ಲಿ 14 ಸಂದರ್ಭಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಿಸಿದೆ ಎಂದು ಆರೋಪಿಸಿದರು. ಕಚ್ಚಾ ತೈಲವು 2014ರ ಮೇ ತಿಂಗಳಿನಿಂದ 39.2 ಪ್ರತಿಶತದಷ್ಟು ಅಗ್ಗವಾಗಿದ್ದರೆ, ಮೋದಿ ಆಡಳಿತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ 27.5 ಮತ್ತು 42.2 ಪ್ರತಿಶತದಷ್ಟು ದುಬಾರಿಯಾಗಿದೆ. ಇದು ದುರದೃಷ್ಟಕರ ಸಂಗತಿ ಎಂದು ಅವರು ಹೇಳಿದರು.

ಮೋದಿ ಸರ್ಕಾರವು ಸಾಮಾನ್ಯ ಜನರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ತೆರಿಗೆಯನ್ನು ಕ್ರಮವಾಗಿ 23.78 ಮತ್ತು 28.37 ರೂ.ಗಳ ಹೆಚ್ಚುವರಿ ತೆರಿಗೆಯನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು. ಇದು ಇಂಧನ ಬೆಲೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ ಎಂದರು.

ಯುಪಿಎ ಆಡಳಿತದ ಅವಧಿಯಲ್ಲಿ ಮಾಡಿದ ಪೆಟ್ರೋಲ್, ಡೀಸೆಲ್ ದರಗಳ ಬಗ್ಗೆ ಮೋದಿಯವರ ಹೇಳಿಕೆಗಳನ್ನು ಪ್ರಸ್ತಾಪಿಸಿದ ಅವರು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ತೆಗೆದುಹಾಕುವ ಸಂದಿಗ್ಧತೆ ಇದೆ ಎಂದರು. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಹೆಚ್ಚಿನ ತೆರಿಗೆ ಕಡಿಮೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲು ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ಮಾತುಗಳನ್ನು ಅವರು ಉಲ್ಲೇಖಿಸಿದ್ದಾರೆ. ಸಾಂಕ್ರಾಮಿಕ ರೋಗದ ನಂತರದ ಆರ್ಥಿಕತೆಯ ಕುಸಿತದ ಮಧ್ಯೆ ಹೆಚ್ಚುತ್ತಿರುವ ಹಣದುಬ್ಬರ ಮತ್ತು ನಿರುದ್ಯೋಗದಿಂದಾಗಿ ಸಾಮಾನ್ಯ ಜನರು ಈಗಾಗಲೇ ತೊಂದರೆಗೆ ಸಿಲುಕಿದ್ದಾರೆ. ಪ್ರಧಾನ ಮಂತ್ರಿಗಳು ನಮ್ಮ ಬೇಡಿಕೆಯನ್ನು ನಿರ್ಲಕ್ಷಿಸಬಹುದು, ಆದರೆ ಕೇಂದ್ರದಲ್ಲಿ ಯುಪಿಎ ಆಡಳಿತದ ಅವಧಿಯಲ್ಲಿ ಅವರು ಗುಜರಾತ್ ಸಿಎಂ ಆಗಿ ತಮ್ಮ ಮಾತುಗಳನ್ನಾದರೂ ನೆನಪಿಸಿಕೊಳ್ಳಬೇಕು. ಅಥವಾ ಹೆಚ್ಚುತ್ತಿರುವ ಇಂಧನ ಬೆಲೆಗಳು ಕ್ಯಾಸ್ಕೇಡಿಂಗ್ ಪರಿಣಾಮವನ್ನು ಬೀರುತ್ತವೆ ಎಂಬ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಸಲಹೆಯನ್ನು ಗಮನಿಸಬಹುದು ಎಂದು ಹೇಳಿದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಪ್ರಶ್ನಿಸಿದ ಅವರು ಧರ್ಮ ಸಂಕಟ್ ಎಂದರೇನು? ಬೆಲೆಗಳನ್ನು ಕಡಿಮೆ ಮಾಡಲು ನೀವು ತುಂಬಾ ಉತ್ಸುಕರಾಗಿದ್ದೀರಾ?, ಆದರೆ, ಪ್ರಧಾನಮಂತ್ರಿ ನಿಮ್ಮನ್ನು ನಿಷೇಧಿಸುತ್ತಿದ್ದಾರಾ? ಅಥವಾ ನಿಮಗೆ ಅಡ್ಡಿಪಡಿಸುತ್ತಿದ್ದಾರೆಯೇ? ಈ ದೇಶದ ಹಣಕಾಸು ಸಚಿವರು ಧರ್ಮ ಸಂಕಟ್​ ಮೂಲಕ ಅಸಹಾಯಕತೆಯನ್ನು ಪ್ರತಿಪಾದಿಸಿದರೆ ಆಮ್ ಅದ್ಮಿಯ ಭವಿಷ್ಯವೇನು ಎಂದು ಸಿಂಘ್ವಿ ಪ್ರಶ್ನಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.