ಚಂಬಾ: ಹಿಮಾಚಲ ಪ್ರದೇಶ ವಿಧಾನಸಭಾ ಉಪಸಭಾಧ್ಯಕ್ಷ ಹಂಸರಾಜ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವಿದ್ಯಾರ್ಥಿಯೊಬ್ಬನಿಗೆ ಉಪಸಭಾಧ್ಯಕ್ಷ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗ್ತಿದೆ.
ವಿಧಾನಸಭೆಯ ಉಪಸಭಾಧ್ಯಕ್ಷ ಹಂಸರಾಜ್ ದಿಢೀರ್ ತಪಾಸಣೆಗಾಗಿ ಚಂಬಾದ ರೈಲಾ ಗ್ರಾಮದ ಹಿರಿಯ ಮಾಧ್ಯಮಿಕ ಶಾಲೆಗೆ ಭೇಟಿ ನೀಡಿದ್ದರು. ಈ ವೇಳೆ ತರಗತಿಯೊಂದಕ್ಕೆ ಭೇಟಿ ನೀಡಿದ ಡೆಪ್ಯುಟಿ ಸ್ಪೀಕರ್ ವಿದ್ಯಾರ್ಥಿಗಳಿಗೆ ಕೋವಿಡ್ ಮತ್ತು ಲಸಿಕೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಆದ್ರೆ ವಿದ್ಯಾರ್ಥಿಯೊಬ್ಬ ನಗುತ್ತಿದ್ದನು. ಹಂಸರಾಜ್ ಆ ವಿದ್ಯಾರ್ಥಿಗೆ ಯಾಕೆ ನಗುತ್ತಿದ್ದೀಯ ಎಂದು ಹೇಳಿ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗ್ತಿದೆ. ಇದು ವಿಡಿಯೋದಲ್ಲಿ ಸೆರೆಯಾಗಿದ್ರೂ ಸಹ ಸ್ಪಷ್ಟವಾಗಿ ಕಾಣುತ್ತಿಲ್ಲ.
ಓದಿ: ಯುವ ಕುಸ್ತಿಪಟುವಿಗೆ ವೇದಿಕೆ ಮೇಲೆಯೇ ಕಪಾಳ ಮೋಕ್ಷ ಮಾಡಿದ ಬ್ರಿಜ್ ಭೂಷಣ್ ಶರಣ್
ಉಪ ಸಭಾಧ್ಯಕ್ಷ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗ್ತಿದ್ದು, ವಿದ್ಯಾರ್ಥಿಗಳೊಂದಿಗೆ ಈ ರೀತಿ ವರ್ತಿಸಿದ್ದಕ್ಕೆ ಹಲವರ ಕೆಂಗಣ್ಣಿಗೆ ಹಂಸರಾಜ್ ಗುರಿಯಾಗಿದ್ದಾರೆ.
ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಪ್ರಕಾಶ್ ಭೂತಾನಿ ಈ ಕುರಿತ ಪ್ರತಿಕ್ರಿಯಿಸಿದ್ದು, ಬಿಜೆಪಿ ಶಾಸಕ ಹಂಸರಾಜ್ ವಿರುದ್ಧ ಹರಿಹಾಯ್ದಿದ್ದಾರೆ. ಈ ವಿಡಿಯೋವನ್ನು ಆಧಾರವಾಗಿಟ್ಟುಕೊಂಡು ಬಿಜೆಪಿ ಶಾಸಕ ಹಾಗೂ ಉಪಸಭಾಧ್ಯಕ್ಷ ಹಂಸರಾಜ್ ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಶಾಲೆಗೆ ಹೋಗಿ ಮಕ್ಕಳಿಗೆ ಕಪಾಳಮೋಕ್ಷ ಮಾಡುವುದು ಇದೆಂಥ ನ್ಯಾಯ ಎಂದು ಪ್ರಶ್ನಿಸಿದ್ದಾರೆ.