ETV Bharat / bharat

'ಪ್ರತಿ ನಿಮಿಷವೂ ಅಮೂಲ್ಯ...' ನವೀನ್ ಸಾವಿನ ಬೆನ್ನಲ್ಲೇ ಕೇಂದ್ರದ ವಿರುದ್ಧ ಕಾಂಗ್ರೆಸ್, ಎಎಪಿ ವಾಗ್ದಾಳಿ

ಉಕ್ರೇನ್​​ನಲ್ಲಿ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಪಕ್ಷಗಳ ಮುಖಂಡರು ವಾಗ್ದಾಳಿ ನಡೆಸಿದ್ದು, ಭಾರತೀಯರ ರಕ್ಷಣೆಗೆ ಪ್ರತಿ ನಿಮಿಷವೂ ಅಮೂಲ್ಯವಾಗಿದೆ ಎಂದಿದ್ದಾರೆ.

Indian student death in ukraine
Indian student death in ukraine
author img

By

Published : Mar 1, 2022, 5:28 PM IST

ನವದೆಹಲಿ: ರಷ್ಯಾ-ಉಕ್ರೇನ್​ ನಡುವಿನ ಮಿಲಿಟರಿ ಸಂಘರ್ಷದಲ್ಲಿ ಕರ್ನಾಟಕದ ಹಾವೇರಿಯ ವಿದ್ಯಾರ್ಥಿ ನವೀನ್​​(21) ಸಾವನ್ನಪ್ಪಿದ್ದಾನೆ. ಇದೇ ವಿಷಯವನ್ನಿಟ್ಟುಕೊಂಡು ಕೇಂದ್ರದ ವಿರುದ್ಧ ಕಾಂಗ್ರೆಸ್​ ಸೇರಿದಂತೆ ವಿವಿಧ ಪಕ್ಷಗಳು ಹರಿಹಾಯ್ದಿವೆ.

ಉಕ್ರೇನ್​ ಮೇಲೆ ರಷ್ಯಾ ದಾಳಿ ನಡೆಸಲು ಆರಂಭಿಸುತ್ತಿದ್ದಂತೆ ಅಲ್ಲಿ ವ್ಯಾಸಂಗ ಮಾಡ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆತರುವ ಪ್ರಯತ್ನ ಮುಂದುವರೆದಿದೆ. ಇದರ ಮಧ್ಯೆ ಇಂದು ಬೆಳಗ್ಗೆ ಖಾರ್ಕಿವ್​​ನಲ್ಲಿ ನಡೆದ ಶೆಲ್​ ದಾಳಿಯಲ್ಲಿ ನವೀನ್ ಸಾವನ್ನಪ್ಪಿದ್ದಾನೆ.

  • Received the tragic news of an Indian student Naveen losing his life in Ukraine.

    My heartfelt condolences to his family and friends.

    I reiterate, GOI needs a strategic plan for safe evacuation.

    Every minute is precious.

    — Rahul Gandhi (@RahulGandhi) March 1, 2022 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್​ ಮುಖಂಡ ರಾಹುಲ್ ಗಾಂಧಿ, ಉಕ್ರೇನ್​​ನಲ್ಲಿ ಭಾರತೀಯ ವಿದ್ಯಾರ್ಥಿ ನವೀನ್ ಸಾವನ್ನಪ್ಪಿರುವ ಸುದ್ದಿ ಕೇಳಿ ಆಘಾತವಾಗಿದೆ. ಅಲ್ಲಿರುವ ಭಾರತೀಯರ ರಕ್ಷಣೆಗೆ ಪ್ರತಿ ನಿಮಿಷವೂ ಅಮೂಲ್ಯವಾಗಿದೆ. ಭಾರತೀಯರನ್ನು ವಾಪಸ್ ಕರೆತರುವಲ್ಲಿ ಕೇಂದ್ರ ಸರ್ಕಾರ ಮಹತ್ವದ ಕಾರ್ಯತಂತ್ರ ರೂಪಿಸುವ ಅಗತ್ಯವಿದೆ ಎಂದಿದ್ದಾರೆ.

ಇನ್ನೋರ್ವ ಕಾಂಗ್ರೆಸ್‌ ನಾಯಕ ರಂದೀಪ್ ಸುರ್ಜೇವಾಲ್​ ಟ್ವೀಟ್‌ ಮಾಡಿ, ಮೋದಿಜೀ ನಿಮ್ಮ ಸರ್ಕಾರದ ಅಸೂಕ್ಷ್ಮತೆಯಿಂದಾಗಿ ಮಗುವನ್ನು ಕಳೆದುಕೊಂಡಿರುವ ಕರ್ನಾಟಕದ ಕುಟುಂಬಕ್ಕೆ ಏನು ಹೇಳುತ್ತೀರಿ? ಉಕ್ರೇನ್​​ ರಷ್ಯಾ ಯುದ್ಧದ ಮಧ್ಯೆ ಅಲ್ಲಿರುವ 20 ಸಾವಿರ ಭಾರತೀಯರ ಜೀವ ಅಪಾಯದಲ್ಲಿದೆ. ಸಾವಿರಾರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಜವಾಬ್ದಾರಿ ಯಾರದ್ದು? ಎಂದು ಕೇಳಿದ್ದಾರೆ.

  • मोदी जी,

    आपकी सरकार की संवेदन शून्यता के कारण कर्नाटक के जिस परिवार ने अपने बच्चे को खो दिया, उन्हें क्या कहेंगे ?#UkraineRussiaWar के बीच 20000 हज़ार भारतीयों ज़िन्दगी हर पल ख़तरे में है और आप ये सब करने में जुटे हैं ?

    हज़ारों बच्चों को सुरक्षित लाने की जिम्मेदारी किसकी है? pic.twitter.com/PvilvFvWqy

    — Randeep Singh Surjewala (@rssurjewala) March 1, 2022 " class="align-text-top noRightClick twitterSection" data=" ">

ಆಮ್‌ ಆದ್ಮಿ ಪಕ್ಷ ಟ್ವೀಟ್ ಮಾಡಿದ್ದು, ಉಕ್ರೇನ್​​ನಲ್ಲಿ ಭಾರತೀಯ ವಿದ್ಯಾರ್ಥಿಗಳ ಪ್ರಾಣ ರಕ್ಷಣೆ ಮಾಡುವಂತೆ ಮನವಿ ಮಾಡ್ತಿದ್ದು,ಪ್ರಧಾನಿ ಮೋದಿ ಮಾತ್ರ ಚುನಾವಣೆ ಪ್ರಚಾರದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ ಎಂದು ಟೀಕೆ ಮಾಡಿದೆ.

  • Ukraine से दुखद खबर!

    एक भारतीय छात्र की मौत हुई।

    यूक्रेन में फंसे भारतीय छात्र आज सुरक्षित वापस आने को रो-बिलख रहे हैं और प्रधानमंत्री मोदी चुनाव प्रचार में व्यस्त हैं। pic.twitter.com/E5xnAdhKW7

    — AAP (@AamAadmiParty) March 1, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಉಕ್ರೇನ್​​ನಲ್ಲಿ ಹಾವೇರಿ ವಿದ್ಯಾರ್ಥಿ ಸಾವು.. ನವೀನ್​ ಮೃತದೇಹ ಭಾರತಕ್ಕೆ ತರಿಸಿಕೊಳ್ಳಲು ಪ್ರಯತ್ನ: ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.