ಶಿಮ್ಲಾ (ಹಿಮಾಚಲಪ್ರದೇಶ): ಹಳೆಯ ಪಿಂಚಣಿ ಯೋಜನೆ ರದ್ದುಪಡಿಸುವ ಮೂಲಕ ಬಿಜೆಪಿ ಹಿರಿಯರ ಆರ್ಥಿಕ ಭದ್ರತೆ ಕಿತ್ತುಕೊಂಡಿದೆ. ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ತಕ್ಷಣ ಹಳೆಯ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪುನರುಚ್ಛರಿಸಿದ್ದಾರೆ.
ಫೇಸ್ಬುಕ್ ದಲ್ಲಿ ಹಿಂದಿಯಲ್ಲಿ ಗುರುವಾರ ಪೋಸ್ಟ್ ಮಾಡಿದ್ದ ಅವರು, ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ನೌಕರರು ತಮ್ಮ ವೃದ್ಧಾಪ್ಯ ಜೀವನದಲ್ಲಿ ಯಾರನ್ನೂ ಅವಲಂಬಿಸಬಾರದು. ಪಿಂಚಣಿ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಅದ್ದರಿಂದ ಕಾಂಗ್ರೆಸ್ ಸರ್ಕಾರಗಳಿರುವ ಹೊಂದಿರುವ ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಿದೆ ಎಂದು ತಿಳಿಸಿದ್ದಾರೆ.
ಹಿರಿಯ ನೌಕರರ ಆರ್ಥಿಕ ಭದ್ರತೆ ಕಸಿದ ಬಿಜೆಪಿ: ಬಿಜೆಪಿ ಹಳೆಯ ಪಿಂಚಣಿ ರದ್ದುಪಡಿಸಿ, ಹಿರಿಯರ ಆರ್ಥಿಕ ಭದ್ರತೆ ಕಸಿದುಕೊಂಡಿದೆ. ಹಿರಿಯರು ಜೀವನವಿಡೀ ದೇಶ ಸೇವೆ ಮಾಡುವವರು. ಆದರೆ ವೃದ್ಧಾಪ್ಯದಲ್ಲಿ ಎಲ್ಲಿಗೆ ಹೋಗಬೇಕು? ಹೇಗೆ ಜೀವನ ನಡೆಸಬೇಕು ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.
ಸೈನಿಕರ ಆರ್ಥಿಕ ಭದ್ರತೆ: ಒಬ್ಬ ವ್ಯಕ್ತಿಯು ಸರ್ಕಾರಿ ಕೆಲಸಕ್ಕೆ ಸೇರಿ ನಿವೃತ್ತಿಯಾದರೆ ಅವರು ಆರ್ಥಿಕ ಅಭದ್ರತೆ ಎದುರಿಸಬಾರದು. ಈ ಹಿರಿಯರಿಗೆ ಹಳೆ ಪಿಂಚಣಿ ನೀಡುವ ಮೂಲಕ ಕಾಂಗ್ರೆಸ್ ಬೆಂಬಲ ಮುಂದುವರಿಸಲಿದೆ. ಆದರೆ ಬಿಜೆಪಿಗೆ ಕಿತ್ತುಕೊಳ್ಳುವುದು ಮಾತ್ರ ಗೊತ್ತು. ಗಡಿಯಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶವನ್ನು ಸಂರಕ್ಷಿಸುವರು. ಆದರೆ ಬಿಜೆಪಿ ಸರ್ಕಾರ ದೇಶ ಕಾಯುವ ಸೈನಿಕರ ಆರ್ಥಿಕ ಭದ್ರತೆಯನ್ನು ಒಂದೊಂದಾಗಿ ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು. ಆದರೆ ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ತಕ್ಷಣ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಭರವಸೆ ನೀಡಿದರು.