ETV Bharat / bharat

ದೇಶಾದ್ಯಂತ ‘ಕಿಸಾನ್ ವಿಜಯ್ ದಿವಸ್’ ಆಚರಿಸುತ್ತಿರುವ ಕಾಂಗ್ರೆಸ್​

author img

By

Published : Nov 20, 2021, 12:35 PM IST

ಕೇಂದ್ರ ಸರ್ಕಾರ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದ (repeal three farm laws) ಹಿನ್ನೆಲೆ ಇಂದು ದೇಶಾದ್ಯಂತ ‘ಕಿಸಾನ್ ವಿಜಯ್ ದಿವಸ್’ (Kisan Vijay Diwas) ಆಚರಿಸಲು ಕಾಂಗ್ರೆಸ್​ ಕರೆ ನೀಡಿದೆ.

Kisan Vijay Diwas  Congress to celebrate Kisan Vijay Diwas  repeal three farm laws  All India Congress Committee General Secretary K.C. Venugopal  Jan Jagran Abhiyan  Dandi march  ಕಿಸಾನ್ ವಿಜಯ್ ದಿವಸ್  ಮೂರು ಕೃಷಿ ಕಾಯ್ದೆಗಳು ರದ್ದು  ಕಿಸಾನ್ ವಿಜಯ್ ದಿವಸ್ ಆಚರಣೆಗೆ ಕರೆ ನೀಡಿದ ಕಾಂಗ್ರೆಸ್​ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್  ಜನ ಜಾಗರಣ ಅಭಿಯಾನ  ದಂಡಿ ಮೆರವಣಿಗೆ
ಇಂದು ದೇಶಾದ್ಯಂತ ‘ಕಿಸಾನ್ ವಿಜಯ್ ದಿವಸ್’ ಆಚರಿಸಲಿರುವ ಕಾಂಗ್ರೆಸ್

ನವದೆಹಲಿ: ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು (repeal three farm laws) ವಾಪಸ್ ಪಡೆಯುವುದಾಗಿ ಪ್ರಧಾನಿ ಮೋದಿ ಶುಕ್ರವಾರ ಘೋಷಿಸಿದ ಹಿನ್ನೆಲೆ ಇಂದು (ಶನಿವಾರ) ‘ಕಿಸಾನ್ ವಿಜಯ್ ದಿವಸ್’ (Kisan Vijay Diwas) ಆಚರಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಅಲ್ಲದೇ ದೇಶಾದ್ಯಂತ ಗೆಲುವಿನ ರ‍್ಯಾಲಿಗಳನ್ನು (victory rally) ಆಯೋಜಿಸಲಿದೆ.

ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಇಳಿಕೆ ನಂತರ ಕೇಂದ್ರ ಸರ್ಕಾರವು ತೆಗೆದುಕೊಂಡ ಎರಡನೇ ಪ್ರಮುಖ ನಿರ್ಧಾರ ಎಂದರೆ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದು.

ಮೂರು ಕೃಷಿ ಕಾನೂನುಗಳನ್ನು (repeal three farm laws) ಹಿಂತೆಗೆದುಕೊಂಡ ನಂತರ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ (All India Congress Committee General Secretary K.C. Venugopal) ಶುಕ್ರವಾರ ಎಲ್ಲಾ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್​ ಪಕ್ಷವು ಶನಿವಾರ ದೇಶಾದ್ಯಂತ 'ಕಿಸಾನ್ ವಿಜಯ್ ದಿವಸ್' (Kisan Vijay Diwas) ಅನ್ನು ಆಚರಿಸಲಿದೆ ಎಂದು ಹೇಳಿದ್ದರು.

ವಿಜಯ್​ ದಿವಸ್​ ಆಚರಣೆಗೆ ವೇಣುಗೋಪಾಲ್​ ಸೂಚನೆ

ಕೇಂದ್ರ ಸರ್ಕಾರವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ಆಚರಣೆಯನ್ನು ಜನರಿಗೆ ತಲುಪಬೇಕು. ಹೀಗಾಗಿ 'ಕಿಸಾನ್ ವಿಜಯೋತ್ಸವ'ವನ್ನು ಆಯೋಜಿಸಲಾಗುವುದು. ಕಿಸಾನ್ ವಿಜಯ್ ದಿವಸ್ (Kisan Vijay Diwas) ಆಚರಿಸಲು ಜಿಲ್ಲೆಯಿಂದ ಬ್ಲಾಕ್ ಮಟ್ಟದವರೆಗಿನ ಎಲ್ಲ ಪಕ್ಷದ ಕಾರ್ಯಕರ್ತರಿಗೆ ಕಾಂಗ್ರೆಸ್ ರಾಜ್ಯ ಘಟಕದ ಎಲ್ಲಾ ಅಧ್ಯಕ್ಷರು ಸೂಚನೆ ನೀಡಿದ್ದಾರೆ ಎಂದು ಕಾಂಗ್ರೆಸ್​ ನಾಯಕ ವೇಣುಗೋಪಾಲ್ ತಿಳಿಸಿದ್ದಾರೆ.

ಓದಿ: AP Floods: ಪ್ರವಾಹಕ್ಕೆ ಆಂಧ್ರ ತತ್ತರ: ಇಲ್ಲಿಯವರೆಗೆ 17 ಮಂದಿ ಸಾವು

ಈ ಹಿಂದೆ ಜನ ಜಾಗರಣ ಅಭಿಯಾನ ನಡೆಸಲು ನಿರ್ಧರಿಸಿದ್ದ ಕಾಂಗ್ರೆಸ್​

ಇದಕ್ಕೂ ಮುನ್ನ ನವೆಂಬರ್ 14 ರಿಂದ ದೇಶದಾದ್ಯಂತ ಮೋದಿ ಸರ್ಕಾರದ ನೀತಿಗಳ ವಿರುದ್ಧ 'ಜನ ಜಾಗರಣ ಅಭಿಯಾನ' (Jan Jagran Abhiyan) ನಡೆಸಲು ಕಾಂಗ್ರೆಸ್ ನಿರ್ಧರಿಸಿತ್ತು. ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆ, ನಿರುದ್ಯೋಗ, ಹಣದುಬ್ಬರ ಮುಂತಾದ ವಿವಿಧ ವಿಷಯಗಳ ಕುರಿತು ಕಾಂಗ್ರೆಸ್ ಈ ಅಭಿಯಾನವನ್ನು ಆರಂಭಿಸಿತ್ತು.

ಮಹಾತ್ಮಾ ಗಾಂಧಿಯವರು ಬ್ರಿಟಿಷರ ವಿರುದ್ಧ ಕೈಗೊಂಡ ‘ದಂಡಿ ಮೆರವಣಿಗೆ’ (Dandi march) ಮಾದರಿಯಲ್ಲೇ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಕಾಲ್ನಡಿಗೆ ಜಾಥಾ ಮತ್ತು ಮೆರವಣಿಗೆಗಳನ್ನು ನಡೆಸಲು ಕಾಂಗ್ರೆಸ್ ನಿರ್ಧರಿಸಿತ್ತು. ಕಾಂಗ್ರೆಸ್ ಪ್ರತಿಭಟನೆಯ ನಂತರ ಸಾರ್ವಜನಿಕರಿಗೆ ಪರಿಹಾರವನ್ನು ಒದಗಿಸುವ ಮೂಲಕ ಕೇಂದ್ರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು.

ಶುಕ್ರವಾರ ಕೇಂದ್ರ ಸರ್ಕಾರವು ಅಂತಿಮವಾಗಿ ಮೂರು ಕೇಂದ್ರ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡಿತ್ತು. ಕೇಂದ್ರದ ಇಂತಹ ನಿರ್ಧಾರಗಳ ನಂತರ ಕಾಂಗ್ರೆಸ್ ಕೂಡ ತನ್ನ ಜನ ಜಾಗರಣ ಅಭಿಯಾನದ ಒಟ್ಟಾರೆ ತಂತ್ರವನ್ನು ಬದಲಾಯಿಸಿದೆ.

ಓದಿ: ಅಂದು ಕಾಂಗ್ರೆಸ್​ನವರು ಮುಚ್ಚಿಹಾಕಿದ್ದ ಬಿಟ್​ಕಾಯಿನ್​ ಕೇಸ್​ಅನ್ನು ಇಂದು ಬಿಚ್ಚಿಟ್ಟಿದ್ದೇವೆ: ಸಚಿವ ಆರಗ ಜ್ಞಾನೇಂದ್ರ

ಜನರ ಬಳಿ ಹೋಗಲು ಕಾಂಗ್ರೆಸ್​ ನಿರ್ಧಾರ

ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರವು ಬೆಳೆಗಳ ಮೇಲಿನ ಕನಿಷ್ಠ ಬೆಂಬಲ ಬೆಲೆ (MSP) ಭರವಸೆ, ಸಾಲ ಮನ್ನಾ, ಕೃಷಿ ಕ್ಷೇತ್ರದಿಂದ ಜಿಎಸ್‌ಟಿ ತೆಗೆದುಹಾಕುವುದು ಮತ್ತು ಇತರ ಪ್ರಮುಖ ವಿಷಯಗಳ ಕುರಿತು ಒತ್ತಾಯಿಸಿ, ಜನಮನ ಗೆಲ್ಲಲು ಯೋಜನೆ ರೂಪಿಸಿದ್ದಾರೆ.

ಕಳೆದ ಸಂಸತ್ತಿನ ಅಧಿವೇಶನದಲ್ಲಿ ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಲು ಒತ್ತಾಯಿಸಿದಾಗ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ನಿಲ್ಲುವಂತೆ ಮಾಡುವಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿತ್ತು. ಸಂಸತ್ತಿನಿಂದ ಬೀದಿಗಳವರೆಗೆ, ವಿರೋಧ ಪಕ್ಷಗಳು ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒಮ್ಮತದಿಂದ ಒತ್ತಾಯಿಸಿದವು.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್, ತೃಣಮೂಲ ಕಾಂಗ್ರೆಸ್, ರಾಷ್ಟ್ರೀಯ ಜನತಾ ದಳ ಸೇರಿದಂತೆ 20 ವಿರೋಧ ಪಕ್ಷಗಳು ಈ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಜಂಟಿ ಪತ್ರ ಬರೆದಿದ್ದವು.

ಈ ಬಾರಿಯೂ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಈ ಜವಾಬ್ದಾರಿಯನ್ನು ಕಾಂಗ್ರೆಸ್​ ಪಕ್ಷವು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ವಹಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.