ETV Bharat / bharat

ಭೋಪಾಲಿ ಎಂದರೆ 'ಸಲಿಂಗಿ' ಎಂದ ವಿವೇಕ್​ ಅಗ್ನಿಹೋತ್ರಿ ವಿರುದ್ಧ ಪ್ರಕರಣ ದಾಖಲು - ವಿವೇಕ್​ ಅಗ್ನಿಹೋತ್ರಿ ವಿರುದ್ಧ ಪ್ರಕರಣ ದಾಖಲು

ಭೋಪಾಲಿ ಎಂದರೆ, ಸಲಿಂಗಕಾಮಿ ಎಂದು ಅರ್ಥ ಎಂದು ದಿ ಕಾಶ್ಮೀರ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೇಳಿಕೆ ನೀಡಿದ್ದು, ಅವರ ವಿರುದ್ಧ ಮಹಾರಾಷ್ಟ್ರದಲ್ಲಿ ಪ್ರಕರಣ ದಾಖಲಾಗಿದೆ..

Complaint against Kashmir Files director Vivek Agnihotri

author img

By

Published : Mar 26, 2022, 4:52 PM IST

ಮುಂಬೈ(ಮಹಾರಾಷ್ಟ್ರ): ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ವೇಳೆ 'ದಿ ಕಾಶ್ಮೀರಿ ಫೈಲ್ಸ್'​ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ 'ನಾನು ಭೋಪಾಲ್‌ಗೆ ಸೇರಿದವನು. ಭೋಪಾಲಿ ಅಲ್ಲ, ಭೋಪಾಲಿ ಪದದ ಅರ್ಥ ಸಲಿಂಗಿ ಎಂದು ಹೇಳಿಕೆ ನೀಡಿದ್ದರು. ಇದರ ವಿರುದ್ಧ ಕಾಂಗ್ರೆಸ್​​​ ಸೇರಿದಂತೆ ವಿವಿಧ ಸಂಘಟನೆಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿವಾದಿತ ಹೇಳಿಕೆ ನೀಡಿರುವುದಕ್ಕಾಗಿ ವರ್ಸೋಲಾ ಪೊಲೀಸ್ ಠಾಣೆಯಲ್ಲಿ ವಿವೇಕ್ ಅಗ್ನಿಹೋತ್ರಿ ವಿರುದ್ಧ ಪ್ರಕರಣ ದಾಖಲಾಗಿದೆ. ಭೋಪಾಲ್ ಮೂಲದ ಪತ್ರಕರ್ತ ಮತ್ತು ಸೆಲೆಬ್ರೆಟಿ ಮ್ಯಾನೇಜರ್​​ ಆಗಿರುವ ರೋಹಿತ್ ಪಾಂಡೆ ಈ ದೂರು ದಾಖಲು ಮಾಡಿದ್ದಾಗಿ ತಿಳಿದು ಬಂದಿದೆ. ಭೋಪಾಲ್‌ನಲ್ಲಿ ವೆಬ್​ಸೈಟ್​​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿವೇಕ್ ಅಗ್ನಿಹೋತ್ರಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ನಾನು ಭೋಪಾಲ್‌ನಲ್ಲಿ ಬೆಳೆದಿದ್ದೇನೆ. ಭೋಪಾಲ್​ ಜನರು ವಿಭಿನ್ನ ಶೈಲಿಯ ಬದುಕನ್ನು ಹೊಂದಿದ್ದಾರೆ. ಅದನ್ನು ನಿಮಗೆ ನಾನು ಯಾವಾಗಲಾದರೂ, ಖಾಸಗಿಯಾಗಿ ವಿವರಿಸುತ್ತೇನೆ. ಯಾರಿಗಾದರೂ ಕೇಳಿ, ಭೋಪಾಲಿ ಎಂದರೆ, ಸಲಿಂಗಕಾಮಿ ಎಂದರ್ಥ. ನೀವು ಬೇಕಾದರೆ ಯಾವುದೇ ಭೋಪಾಲಿಯನ್ನು ಕೇಳಬಹುದು ಎಂದಿದ್ದರು. ಇದಕ್ಕೆ ಇನ್ನಿಲ್ಲದ ಟೀಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಭೋಪಾಲಿ ಎಂದರೆ 'ಸಲಿಂಗಿ' ಎಂದ ವಿವೇಕ್ ಅಗ್ನಿಹೋತ್ರಿ; ಕಾಂಗ್ರೆಸ್‌ ಆಕ್ರೋಶ

ವಿವೇಕ್​ ಅಗ್ನಿಹೋತ್ರಿ ನಿರ್ದೇಶನ ಮಾಡಿರುವ ದಿ ಕಾಶ್ಮೀರಿ ಫೈಲ್ಸ್​​ಗೆ ದೇಶಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಚಿತ್ರ ಮೆಚ್ಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಅವರು ವಿವಾದಿತ ಹೇಳಿಕೆ ನೀಡಿ, ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.