ETV Bharat / bharat

ತೆಂಗಿನಮರದೊಳಗೆ ಕಾಯಿ ಬದಲು ತೆಂಗಿನ ಸಸಿಗಳೇ ಟಿಸಿಲೊಡೆಯುತ್ತಿವೆ.. ಅಚ್ಚರಿಯಾದ್ರೂ ಇದು ನಿಜ

ಈ ತೆಂಗಿನ ಮರ ಹೂವು ಬಿಡುತ್ತದೆ. ಆದರೆ, ಕಾಯಿಯಾಗುತ್ತಿಲ್ಲ ಎಂದು ಕುಂಜಿ ಹೇಳುತ್ತಾರೆ. ಸುಮಾರು ಎರಡು ವರ್ಷಗಳ ಹಿಂದೆ ಮರದ ಮೇಲೆ ಮೊದಲ ತೆಂಗಿನ ಹೂವು ಕಾಣಿಸಿತು. ಅವುಗಳಲ್ಲಿ ಒಂದು ಸಸಿ ಮೊಳಕೆಯೊಡೆದಾಗ, ಕುಂಜಿ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ..

Coconut tree
ತೆಂಗಿನಕಾಯಿ ಬದಲಿಗೆ ಸಸಿಗಳನ್ನೇ ಬಿಡುವ ಮರ
author img

By

Published : Apr 17, 2021, 5:18 PM IST

ಕಾಸರಗೋಡು : ಕೇರಳದ ಕಾಸರಗೋಡು ಜಿಲ್ಲೆಯ ತೋಟವೊಂದರಲ್ಲಿ ವಿಸ್ಮಯವೊಂದು ನಡೆದಿದೆ. ನೀರು, ಗೊಬ್ಬರ ಹಾಕಿ ತೆಂಗಿನಕಾಯಿ ಚೆನ್ನಾಗಿ ಬಿಡಲಿ ಎಂದು ಬೆಳೆಸಿದ ಮರವೊಂದರಲ್ಲಿ ತೆಂಗಿನಕಾಯಿ ಬದಲಿಗೆ ಅದರೊಳಗೇ ಮತ್ತೆ ಸಸಿಗಳು ಮೊಳಕೆಯೊಡೆದಿದ್ದು, ತೋಟದ ಮಾಲೀಕ ಕಂಗಾಲಾಗಿದ್ದಾರೆ.

ತೆಂಗಿನಕಾಯಿ ಬದಲಿಗೆ ಸಸಿಗಳನ್ನೇ ಬಿಡುವ ಮರ..

ಕಾಸರಗೋಡಿನ ಮಂಗಾದ್ ಅರಮಂಗನಂನಲ್ಲಿನ ಹಡ್ಡಾದ್ ನಗರದ ನಿವಾಸಿ ಮೊಹಮ್ಮದ್ ಕುಂಜಿಯ ತಮ್ಮ ತೋಟದಲ್ಲಿ ಬೆಳೆಸಿದ ತೆಂಗಿನ ಮರದ ಮೇಲ್ಭಾಗದಿಂದ 12 ತೆಂಗಿನ ಸಸಿಗಳು ಮೊಳಕೆಯೊಡೆದಿರುವುದನ್ನ ನೋಡಬಹುದು. ಇದು ಏಕೆ ಅಥವಾ ಹೇಗೆ ಸಂಭವಿಸಿದೆ ಎಂಬುದಕ್ಕೆ ಮುಹಮ್ಮದ್ ಕುಂಜಿ ಅವರ ಬಳಿ ಉತ್ತರವಿಲ್ಲ.

ಕಳೆದ 6 ವರ್ಷಗಳ ಹಿಂದೆ ಈ ತೆಂಗಿನ ಸಸಿ ನೆಡಲಾಗಿದೆ ಎಂದು ಕುಂಜಿ ಹೇಳುತ್ತಾರೆ. ಈ ಸಸಿ ಜೊತೆ ನೆಟ್ಟ ಇತರೆ ತೆಂಗಿನ ಸಸಿಗಳು ಬೆಳೆದು ಕಾಯಿ ಬಿಡುತ್ತಿವೆ. ಆದರೆ, ಈ ಮರ ಮಾತ್ರ ಕಾಯಿ ಬಿಡುವ ಸ್ಥಳದಲ್ಲಿ ಸಸಿಯನ್ನೇ ಬಿಡುತ್ತದೆ. ಇದಕ್ಕೆ ಕಾರಣವೇನೆಂದು ತಿಳಿಯದೇ ಕುಂಜಿ ಗೊಂದಲಕ್ಕೊಳಗಾಗಿದ್ದಾರೆ.

ಈ ತೆಂಗಿನ ಮರ ಹೂವು ಬಿಡುತ್ತದೆ. ಆದರೆ, ಕಾಯಿಯಾಗುತ್ತಿಲ್ಲ ಎಂದು ಕುಂಜಿ ಹೇಳುತ್ತಾರೆ. ಸುಮಾರು ಎರಡು ವರ್ಷಗಳ ಹಿಂದೆ ಮರದ ಮೇಲೆ ಮೊದಲ ತೆಂಗಿನ ಹೂವು ಕಾಣಿಸಿತು. ಅವುಗಳಲ್ಲಿ ಒಂದು ಸಸಿ ಮೊಳಕೆಯೊಡೆದಾಗ, ಕುಂಜಿ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.

ಆದರೆ, ಅದರ ನಂತರ ಪ್ರತಿ ಸಾರಿ ಬಿಟ್ಟ ಹೂವು ಸಸಿಗಳನ್ನು ಉತ್ಪಾದಿಸಲು ಪ್ರಾರಂಭಿಸಿದಾಗ, ಮುಹಮ್ಮದ್ ಕುಂಜಿ ಗೊಂದಲಕ್ಕೊಳಗಾದರು. ತಜ್ಞರ ಪ್ರಕಾರ, ಆನುವಂಶಿಕ ಮಾರ್ಪಾಡು ಮತ್ತು ದೈಹಿಕ ಕೋಶಗಳಲ್ಲಿನ ಬದಲಾವಣೆಗಳು ಈ ವಿಚಿತ್ರ ವಿದ್ಯಮಾನಕ್ಕೆ ಕಾರಣವಾಗಿರಹುದು.

ಯಾವುದೇ ಕಾರಣವಿರಲಿ, ಮುಹಮ್ಮದ್ ಕುಂಜಿಯ ತೆಂಗಿನ ಮರವು ತೆಂಗಿನಕಾಯಿಯ ಬದಲು ಸಸಿಗಳನ್ನೇ ಹೊತ್ತುಕೊಳ್ಳುತ್ತಿರುವುದನ್ನು ಕಂಡು ಸುತ್ತಲಿನ ಜನ ಆಶ್ಚರ್ಯಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.