ETV Bharat / bharat

ಯುಪಿ ಸಮ್ಮಿಶ್ರ ರಾಜಕೀಯ ಒಂದು ಫ್ಲಾಪ್​​​ ಶೋ.. ಅಂದಿನಿಂದ ಇಂದಿನವರೆಗಿನ ರಾಜಕೀಯ ಇತಿಹಾಸ! - ಮುಂದಿನ ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಮೈತ್ರಿ

History of UP political coalition: ಉತ್ತರ ಪ್ರದೇಶದಲ್ಲಿ ಎಲ್ಲಾ ದೊಡ್ಡ ಪಕ್ಷಗಳು ಮೈತ್ರಿ ರಾಜಕಾರಣ ಮಾಡಿದರೂ ಯಾರಿಗೂ ಯಶಸ್ಸು ಸಿಕ್ಕಿಲ್ಲ. 1967 ರಿಂದ 2019 ರವರೆಗೆ ಪರಿಸ್ಥಿತಿ ಹೆಚ್ಚು ಕಡಿಮೆ ಒಂದೇ ಆಗಿದೆ. ಮುಂಬರುವ 2022 ರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷವು ಇತರ ದೊಡ್ಡ ಪಕ್ಷಗಳೊಂದಿಗಿನ ಮೈತ್ರಿಯನ್ನು ಬದಿಗೊತ್ತಿ ಸಣ್ಣ ಪಕ್ಷಗಳೊಂದಿಗೆ ಮೈತ್ರಿಗೆ ಆದ್ಯತೆ ನೀಡಿವೆ. ಯುಪಿಯಲ್ಲಿ ರಾಜಕೀಯದ ದೋಸ್ತಿ ಕುರಿತ ಇತಿಹಾಸವನ್ನು ಮೆಲುಕು ಹಾಕೋಣ..

ಉತ್ತರ ಪ್ರದೇಶದಲ್ಲಿ ಚುನಾವಣೆ
ಉತ್ತರ ಪ್ರದೇಶದಲ್ಲಿ ಚುನಾವಣೆ
author img

By

Published : Dec 27, 2021, 4:06 PM IST

Updated : Dec 27, 2021, 4:12 PM IST

ಹೈದರಾಬಾದ್: ಮುಂದಿನ ವರ್ಷ ಯುಪಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈಗಿಂದಲೇ ಅಲ್ಲಿ ರಾಜಕೀಯ ಪಕ್ಷಗಳ ನಾಯಕರು ಮತಬೇಟೆ ಆರಂಭಿಸಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ತಳಮಟ್ಟದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಈಗ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ಪ್ರಮುಖ ಪೈಪೋಟಿ ಕಂಡುಬರುತ್ತಿದೆ.

ರಾಜ್ಯದ ಇತರೆ ಪ್ರಮುಖ ಪಕ್ಷಗಳೊಂದಿಗೆ ಈ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳದಿರಲು ನಿರ್ಧರಿಸಿವೆ. ಈ ಕಾರಣಕ್ಕೆ ಈ ಎರಡೂ ಪಕ್ಷಗಳು ರಾಜ್ಯದ ಸಣ್ಣ ಪಕ್ಷಗಳೊಂದಿಗೆ ಕೈಜೋಡಿಸಿವೆ.

ಉತ್ತರ ಪ್ರದೇಶದಲ್ಲಿ ಚುನಾವಣೆ
ಉತ್ತರ ಪ್ರದೇಶದ ರಾಜಕೀಯ ನಾಯಕರು

ಓಂ ಪ್ರಕಾಶ್ ರಾಜ್‌ಭರ್ ಅವರ ಪಕ್ಷಕ್ಕಿಂತ ಅಖಿಲೇಶ್ ಯಾದವ್ ಹೆಚ್ಚಿನ ಭರವಸೆ ಹೊಂದಿದ್ದಾರೆ. ಹಾಗೆ ಬಿಜೆಪಿಯು ಅಪ್ನಾ ದಳ ಮತ್ತು ನಿಶಾದ್ ಪಕ್ಷದ ಮೇಲೆ ರಾಜಕೀಯ ಚದುರಂಗ ಆಡುತ್ತಿದೆ. ಮತ್ತು ಪಶ್ಚಿಮ ಯುಪಿಯಲ್ಲಿ ಸಮಾಜವಾದಿ ಪಕ್ಷವು ಆರ್‌ಎಲ್‌ಡಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಈ ಎಲ್ಲಾ ಬೆಳವಣಿಗಳು ರಾಜಕೀಯ ಗಣಿತ ಏರಿಳಿಯುವಂತೆ ಮಾಡಿದೆ.

ಮೈತ್ರಿಯ ಕಹಿ ಅನುಭವ ಪಡೆದ ಮಾಯಾವತಿ :

2019 ರಲ್ಲಿ ಮೈತ್ರಿಯ ಕಹಿ ಅನುಭವ ಪಡೆದ ಬಿಎಸ್​ಪಿ ವರಿಷ್ಠೆ ಮಾಯಾವತಿ ಈ ಬಾರಿ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದಾರೆ. ಆದರೆ ಬಿಎಸ್‌ಪಿಯೊಳಗೆ ಓವೈಸಿ ಅವರ ಎಐಎಂಐಎಂ ಪಕ್ಷದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಮತ್ತೊಂದೆಡೆ, ಕಾಂಗ್ರೆಸ್ ಕಡೆ ಗಮನ ಹರಿಸಿದರೆ ಅದರ ಜೊತೆ ಕೈಜೋಡಿಸಲು ಯಾವುದೇ ಪಕ್ಷಗಳು ಸಿದ್ಧವಿಲ್ಲ ಎಂದು ತಿಳಿದುಬಂದಿದೆ. ಇದರ ಹಿಂದೆ ಮುಖ್ಯವಾಗಿ ಎರಡು ಕಾರಣಗಳಿವೆ. ಒಂದು, ರಾಜ್ಯದಲ್ಲಿ ಕಾಂಗ್ರೆಸ್‌ನ ಬೆಂಬಲ ಕ್ಷಿಪ್ರವಾಗಿ ಕಡಿಮೆಯಾಗಿದೆ. ಎರಡನೇಯದಾಗಿ, ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ಎಲ್ಲಾ ಪಕ್ಷಗಳು ಕಾಂಗ್ರೆಸ್‌ನಿಂದ ದೂರ ಉಳಿದಿವೆ.

ಇದೆಲ್ಲದರ ನಡುವೆ ಬಹುಮುಖ್ಯ ಸಂಗತಿಯೆಂದರೆ ಉತ್ತರ ಪ್ರದೇಶದಲ್ಲಿ ಮೈತ್ರಿ ರಾಜಕಾರಣ ಎಂದಿಗೂ ಯಶಸ್ವಿಯಾಗಿಲ್ಲ. ರಾಜ್ಯದ ರಾಜಕೀಯ ಇತಿಹಾಸವನ್ನು ಅವಲೋಕಿಸಿದರೆ ಕಳೆದ ಐದು ದಶಕಗಳಲ್ಲಿ ಹಲವು ಮೈತ್ರಿಗಳು ನಡೆದು ಬಳಿಕ ಮುರಿದು ಬಿದ್ದಿರುವುದನ್ನು ನೋಡಿದ್ದೇವೆ. ಚುನಾವಣೆಗೆ ಮುನ್ನ ಕೆಲವರು ಮೈತ್ರಿ ಮಾಡಿಕೊಂಡಿದ್ದರೆ ಮತ್ತೆ ಕೆಲವರು ಚುನಾವಣೋತ್ತರ ಮೈತ್ರಿ ಮಾಡಿಕೊಂಡಿದ್ದರು. ಆದರೆ, ಉತ್ತರಪ್ರದೇಶದಲ್ಲಿ ಇದುವರೆಗೆ ಯಾವುದೇ ರಾಜಕೀಯ ಮೈತ್ರಿ ದೀರ್ಘಕಾಲ ಅಧಿಕಾರ ನಡೆಸಿಕೊಂಡು ಬಂದಿಲ್ಲ.

ಯಾವಾಗೆಲ್ಲಾ ಮೈತ್ರಿ ಆಗಿತ್ತು:

ಯುಪಿಯಲ್ಲಿ ಮೊದಲು ಅಂದ್ರೆ 1967 ರಲ್ಲಿ ಮೈತ್ರಿ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿತ್ತು. ಚೌಧರಿ ಚರಣ್ ಸಿಂಗ್ ಅವರು ವಿವಿಧ ರಾಜಕೀಯ ಪಕ್ಷಗಳನ್ನು ಜೊತೆಗೂಡಿಸಿಕೊಂಡು ಸರ್ಕಾರ ರಚಿಸಲು ಮುಂದಾದರು. ಭಾರತೀಯ ಲೋಕದಳ, ಕಮ್ಯುನಿಸ್ಟ್ ಪಕ್ಷ ಮತ್ತು ಜನಸಂಘ ಆ ಸರ್ಕಾರದಲ್ಲಿ ಭಾಗಿಯಾಗಿದ್ದವು. ಆದರೆ ಈ ಸರ್ಕಾರ ಒಂದು ವರ್ಷವೂ ಮುಂದುವರೆಯಲಿಲ್ಲ.

ನಂತರ 1970ರಲ್ಲಿ ಕಾಂಗ್ರೆಸ್‌ನಿಂದ ಬೇರ್ಪಟ್ಟ ಕೆಲವು ಶಾಸಕರು ತ್ರಿಭುವನ್ ಸಿಂಗ್ ನೇತೃತ್ವದಲ್ಲಿ ಜಂಟಿ ಸರ್ಕಾರವನ್ನು ರಚಿಸಿದರು. ಅದನ್ನು ಜನಸಂಘ ಬೆಂಬಲಿಸಿತು. ಆದರೆ, ಈ ಮೈತ್ರಿ ಅಂತಿಮವಾಗಿ ಕುಸಿದುಬಿತ್ತು.

1977 ರಲ್ಲಿ ಮತ್ತೊಮ್ಮೆ ಮೈತ್ರಿ ಆಯಿತು, ಆದರೆ ಈ ಮೈತ್ರಿ ಸಹ ಸಮರ್ಥನೀಯವೆಂದು ಸಾಬೀತುಪಡಿಸಲಿಲ್ಲ. ತುರ್ತು ಪರಿಸ್ಥಿತಿಯಿಂದಾಗಿ ದೇಶದಲ್ಲಿ ಕಾಂಗ್ರೆಸ್ಸಿನ ಮೇಲಿನ ಅಸಮಾಧಾನದಿಂದ ಈ ಮೈತ್ರಿಯು ಮೊದಲಿಗೆ ಲಾಭದಾಯಕವಾಗಿದ್ದರೂ, ಅದರೊಂದಿಗೆ ಸಂಬಂಧ ಹೊಂದಿದ ನಾಯಕರ ಮಹತ್ವಾಕಾಂಕ್ಷೆಗಳು ನಂತರದ ದಿನಗಳಲ್ಲಿ ನುಚ್ಚು ನೂರಾದವು.

ಇದನ್ನೂ ಓದಿ: ಕೋವಿಡ್​ ಸೋಂಕಿತರ 'ರೈಲ್ವೆ ಬೋಗಿ ವಾರ್ಡ್​'ನಲ್ಲಿ ಬೆಂಕಿ ಅವಘಡ.. ಸುಟ್ಟು ಕರಕಲಾದ ಬೋಗಿ

ಜನಸಂಘದ ಬೆಂಬಲದೊಂದಿಗೆ ಜನತಾ ಪಕ್ಷವು ರಾಮ್ ನರೇಶ್ ಯಾದವ್ ನೇತೃತ್ವದಲ್ಲಿ ರಾಜ್ಯದಲ್ಲಿ ಸರ್ಕಾರವನ್ನು ರಚಿಸಿತು. ಅದು ಸಹ ಸುಸ್ಥಿರವೆಂದು ಸಾಬೀತಾಗಲಿಲ್ಲ. ಶೀಘ್ರದಲ್ಲೇ ವಿಭಿನ್ನ ಸಿದ್ಧಾಂತಗಳನ್ನು ಬೆರೆಸಿ ರಚಿಸಲಾದ ಈ ಮೈತ್ರಿ ಕೆಲವೇ ದಿನಗಳಲ್ಲಿ ಛಿದ್ರವಾಯಿತು.

ಇದಾದ ನಂತರ ರಾಜ್ಯದಲ್ಲಿ ರಾಮಮಂದಿರ ಚಳವಳಿಯ ಬಿರುಗಾಳಿ ಎದ್ದಿದ್ದು, ಬಿಜೆಪಿಯನ್ನು ತಡೆಯಲು ಮುಲಾಯಂ ಸಿಂಗ್ ಯಾದವ್ ಮತ್ತು ಕಾನ್ಶಿ ರಾಮ್ ಒಗ್ಗೂಡಿದರು. ಆ ಸಮಯದಲ್ಲಿ "ಮಿಲೇ ಮುಲಾಯಂ-ಕಾನ್ಶಿ ರಾಮ್, ಹವಾ ಮೇ ಉದ್ ಗಯೇ ಜೈ ಶ್ರೀ ರಾಮ್" ಎಂಬ ಘೋಷವಾಕ್ಯವು ಪ್ರಮುಖವಾಗಿತ್ತು. ಆದರೆ, ಇದು ಕೂಡ ಯಶಸ್ಸು ಕಾಣಲಿಲ್ಲ. 1995 ರಲ್ಲಿ ಅತಿಥಿ ಗೃಹದ ಘಟನೆಯೊಂದಿಗೆ ಈ ಮೈತ್ರಿ ಮುರಿದುಹೋಯಿತು.

ಬಿಎಸ್​ಪಿ- ಬಿಜೆಪಿ ಒಪ್ಪಂದ:

ಎಸ್‌ಪಿಯಿಂದ ಬಿಜೆಪಿಯ ಬ್ರಹ್ಮದತ್ ದ್ವಿವೇದಿ ಅವರು ಮಾಯಾವತಿ ಅವರ ಪ್ರಾಣ ಉಳಿಸಿದ್ದಾರೆ ಎಂಬ ಮಾತು ಒಮ್ಮೆ ಕೇಳಿಬಂದಿತು. ಬಿಜೆಪಿ ಮತ್ತು ಬಿಎಸ್‌ಪಿ ಮತ್ತೊಮ್ಮೆ ಒಂದಾಗಲು ಇದು ಕಾರಣವಾಯಿತು. ದಲಿತ ಮಹಿಳೆಯನ್ನು ಮುಖ್ಯಮಂತ್ರಿ ಮಾಡಿದ ಹೆಗ್ಗಳಿಕೆ ಹಿನ್ನೆಲೆ ಬಿಜೆಪಿ ಕೂಡ ಮಾಯಾವತಿಗೆ ಅಧಿಕಾರ ಹಸ್ತಾಂತರಿಸಿತ್ತು. ಇದರೊಂದಿಗೆ ಮಾಯಾವತಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ಆದರೆ, ಬಿಜೆಪಿ ಜೊತೆ ಬಿಎಸ್‌ಪಿ ಮೈತ್ರಿ ಹೆಚ್ಚು ದಿನ ಉಳಿಯಲಿಲ್ಲ.

6-6 ತಿಂಗಳ ಆಡಳಿತ :

1996ರ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಹಿನ್ನೆಲೆ ಮತ್ತೊಮ್ಮೆ 6-6 ತಿಂಗಳ ಕಾಲ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಬಿಎಸ್‌ಪಿ ನಡುವೆ ಒಪ್ಪಂದ ಏರ್ಪಟ್ಟಿತ್ತು. ಇಡೀ ದೇಶದಲ್ಲೇ ಪ್ರಥಮ ಬಾರಿಗೆ ಈ ಪ್ರಯೋಗ ಮಾಡಲಾಗಿತ್ತು. ಮಾಯಾವತಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾದರು. ಆದರೆ 6 ತಿಂಗಳು ಪೂರ್ಣಗೊಂಡ ನಂತರ ಕಲ್ಯಾಣ್ ಸಿಂಗ್ ಅವರಿಗೆ ಅಧಿಕಾರ ಹಸ್ತಾಂತರಿಸಲು ಮಾಯಾವತಿ ನಿರಾಕರಿಸಿದರು. ಇದಾದ ಬಳಿಕ ಮೈತ್ರಿ ಮುರಿದುಬಿತ್ತು.

ಉತ್ತರ ಪ್ರದೇಶದಲ್ಲಿ ಚುನಾವಣೆ
ಎಸ್​ ಪಿ - ಬಿಎಸ್​ಪಿ ಮೈತ್ರಿ

ಇದನ್ನೂ ಓದಿ: ಮಂಡಿನೋವಿನಿಂದ ಹೊರಬರಲು ನಾಟಿ ವೈದ್ಯರ ಮೊರೆ ಹೋದ ಬೊಮ್ಮಾಯಿ : ಬೆಳಗಾವಿಯಲ್ಲಿ ಸಿಎಂಗೆ ಚಿಕಿತ್ಸೆ

ಬಿಜೆಪಿಯ ಶಾಸಕರನ್ನು ಒಡೆದ ಮುಲಾಯಂ ಸಿಂಗ್ ಯಾದವ್ :

2002ರ ಚುನಾವಣೆಯಲ್ಲಿಯೂ ಯಾವುದೇ ಪಕ್ಷಕ್ಕೆ ಬಹುಮತ ಬರಲಿಲ್ಲ. ಮಾಯಾವತಿ ಮತ್ತೊಮ್ಮೆ ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಿದರು. ಆದರೆ, ಈ ಬಾರಿ ಬಿರುಕುಗಳು ಹೆಚ್ಚಾಗಿದ್ದು, ಈ ಮೈತ್ರಿ ಮುರಿದುಬಿತ್ತು. ಈ ವೇಳೆ ರಾಜ್ಯದಲ್ಲಿ ನಾಟಕೀಯ ಬೆಳವಣಿಗೆಗಳು ನಡೆದವು. ಬಿಎಸ್‌ಪಿ ಮತ್ತು ಬಿಜೆಪಿಯ ಶಾಸಕರನ್ನು ಒಡೆದು ಮುಲಾಯಂ ಸಿಂಗ್ ಯಾದವ್ ಸರ್ಕಾರ ರಚಿಸಿದರು.

ಅದೇ ಸಮಯದಲ್ಲಿ 2007 ಮತ್ತು 2012 ರ ಚುನಾವಣೆಗಳಲ್ಲಿ ಜನರು ಸಂಪೂರ್ಣ ಬಹುಮತದ ಸರ್ಕಾರವನ್ನು ರಚಿಸಿದರು. ಇದರೊಂದಿಗೆ 2017ರ ಚುನಾವಣೆಯಲ್ಲೂ ಬಿಜೆಪಿ ವನವಾಸ ಅಂತ್ಯಗೊಳಿಸುವುದರೊಂದಿಗೆ ಸಂಪೂರ್ಣ ಬಹುಮತದ ಸರ್ಕಾರ ರಚಿಸಿತು. 2017ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಒಗ್ಗೂಡಿದವು. ಇದರ ಹೊರತಾಗಿಯೂ ಅವರು ಬಿಜೆಪಿ ಮುಂದೆ ಸೋಲನ್ನು ಎದುರಿಸಬೇಕಾಯಿತು. 2019 ರ ಲೋಕಸಭಾ ಚುನಾವಣೆ ಮತ್ತೊಮ್ಮೆ ಸುದ್ದಿಯಾಯಿತು. ಯುಪಿಯಲ್ಲಿ ಅನಿರೀಕ್ಷಿತ ಮೈತ್ರಿ ಎಲ್ಲರನ್ನೂ ಆಶ್ಚರ್ಯಗೊಳಿಸಿತು. ಈ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಒಟ್ಟಿಗೆ ಬಂದರು. ಈ ಮೈತ್ರಿ ಬಿಜೆಪಿಗೆ ಸವಾಲೊಡ್ಡಲಿದೆ ಎಂದು ನಂಬಲಾಗಿತ್ತು. ಆದರೆ, ಫಲಿತಾಂಶವು ವಿಫಲವಾಯಿತು.

Last Updated : Dec 27, 2021, 4:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.