ವಾರಾಣಸಿ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಸಿಎಂ ಆದಾಗಿನಿಂದ ಹಲವಾರು ಮೂಢ ಸಂಪ್ರದಾಯಗಳನ್ನು ತೊಡೆದು ಹಾಕಿದ್ದಾರೆ ಮತ್ತು ಹಲವಾರು ಹೊಸ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಇವರು ಸತತ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆಯಲ್ಲಿರುವ ಬಿಜೆಪಿಯ ಪ್ರಥಮ ಮುಖ್ಯಮಂತ್ರಿಯಾಗಿದ್ದಾರೆ. ಈಗ ಸಿಎಂ ವಾರಾಣಸಿಗೆ ಪ್ರಯಾಣಿಸುವುದರಲ್ಲೂ ಹೊಸ ರೆಕಾರ್ಡ್ ಮಾಡಿದ್ದಾರೆ.
ವಾರಾಣಸಿಯು ಪ್ರಧಾನಿ ಮೋದಿಯವರ ಲೋಕಸಭಾ ಕ್ಷೇತ್ರವಾಗಿದೆ. ಜೊತೆಗೆ ಇದು ಯೋಗಿ ಆದಿತ್ಯನಾಥ್ ರವರ ಅಚ್ಚುಮೆಚ್ಚಿನ ನಗರವೂ ಆಗಿದೆ. ಇಲ್ಲಿ ಸಿಎಂ ಯೋಗಿಯ ಹಲವಾರು ಡ್ರೀಮ್ ಪ್ರಾಜೆಕ್ಟ್ಗಳು ಕೂಡ ನಡೆಯುತ್ತಿವೆ. ನಗರದ ಅಭಿವೃದ್ಧಿ ಪರಿಶೀಲನೆ ಜತೆಗೆ ಬಾಬಾ ವಿಶ್ವನಾಥ್ ಭೇಟಿ ಮಾಡಿ ಕಾಶಿಯ ಜನರ ಸ್ಥಿತಿಗತಿ ಅರಿಯಲು ಸಿಎಂ ವಾರಾಣಸಿಗೆ ಬರುತ್ತಲೇ ಇರುತ್ತಾರೆ.
ಸಿಎಂ ಅವರ ವಾರಾಣಸಿ ಪ್ರವಾಸ ಇದೀಗ ದಾಖಲೆಯಾಗಿ ಪರಿವರ್ತನೆಯಾಗಲಿದೆ. ಕಳೆದ 5 ವರ್ಷಗಳಲ್ಲಿ ವಾರಾಣಸಿಗೆ 99 ಬಾರಿ ಭೇಟಿ ನೀಡಿರುವ ಯೋಗಿ ಆದಿತ್ಯನಾಥ್, ಹೀಗೆ ಮಾಡಿದ ಯುಪಿಯ ಮೊದಲ ಮುಖ್ಯಮಂತ್ರಿಯಾಗಿದ್ದಾರೆ. ಮಂಗಳವಾರ ಸಿಎಂ ತಮ್ಮ ಪ್ರವಾಸದ ಶತಕ ಪೂರೈಸಿದರು.
ಬಾಬಾ ವಿಶ್ವನಾಥ್ ಧಾಮಕ್ಕೆ ಸಿಎಂ ಯೋಗಿ 89 ಬಾರಿ ಭೇಟಿ: ಸಿಎಂ ಯೋಗಿ ಬಾಬಾ ವಿಶ್ವನಾಥ್ ದೇವಸ್ಥಾನಕ್ಕೆ ಸುಮಾರು 89 ಬಾರಿ ಹಾಜರಾಗಿ ದೇವರ ಆಶೀರ್ವಾದ ಪಡೆದಿದ್ದಾರೆ. 2017ರಲ್ಲಿ 6 ಬಾರಿ, 2018ರಲ್ಲಿ 22 ಬಾರಿ, 2019ರಲ್ಲಿ 23 ಬಾರಿ, 2020ರಲ್ಲಿ 13 ಬಾರಿ, 2021ರಲ್ಲಿ 23 ಬಾರಿ ಹಾಗೂ 2022ರಲ್ಲಿ ಅಕ್ಟೋಬರ್ 11ರವರೆಗೆ 13 ಬಾರಿ ಸಿಎಂ ಕಾಶಿಗೆ ಭೇಟಿ ನೀಡಿದ್ದಾರೆ.
ಒಟ್ಟಾರೆ 26 ಮೇ 2017 ರಿಂದ 11 ಅಕ್ಟೋಬರ್ 2022 ರವರೆಗೆ ಅವರು 89 ಬಾರಿ ಕಾಶಿ ವಿಶ್ವನಾಥನಿಗೆ ಪೂಜೆ ಸಲ್ಲಿಸಿದ್ದಾರೆ. ಅವರು ಮಂಗಳವಾರ ಅ.11 ರಂದು ಇಲ್ಲಿಗೆ ಭೇಟಿ ನೀಡಿದ್ದು ಅವರ 100 ನೇ ಭೇಟಿಯಾಗಿತ್ತು.
99 ಬಾರಿ ಕಾಶಿಗೆ ಭೇಟಿ ನೀಡಿದ ಯುಪಿಯ ಮೊದಲ ಸಿಎಂ: ವಾರಾಣಸಿಗೆ ಭೇಟಿ ನೀಡಿದ ಯೋಗಿ ಆದಿತ್ಯನಾಥ್ ಮತ್ತೊಂದು ದಾಖಲೆ ಮಾಡಿದ್ದಾರೆ. ತಮ್ಮ ಐದೂವರೆ ವರ್ಷಗಳ ಅವಧಿಯಲ್ಲಿ 100ನೇ ಬಾರಿಗೆ ವಾರಾಣಸಿಗೆ ಭೇಟಿ ನೀಡಿದ ಯುಪಿಯ ಮೊದಲ ಮುಖ್ಯಮಂತ್ರಿ ಇವರಾಗಿದ್ದಾರೆ. ಮಂಗಳವಾರ ಸಿಎಂ ಕಾಶಿ ಪ್ರವಾಸ ಶತಕ ಪೂರೈಸಿದೆ.
ಪಿಎಂ ಮೋದಿ 2014 ರಿಂದ 2021 ರವರೆಗೆ 30 ಬಾರಿ ಕಾಶಿ ಭೇಟಿ: ಕಾಶಿಯು ಭಗವಾನ್ ವಿಶ್ವನಾಥನ ನಗರವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರವಾಗಿದೆ. ವಾರಾಣಸಿಯಿಂದ ಸಂಸದರಾದ ಬಳಿಕ ಮೋದಿ ದೇಶದ ಪ್ರಧಾನಿಯಾದ ನಂತರ 2014 ರಿಂದ 2021ರವರೆಗೆ ಸುಮಾರು 30 ಬಾರಿ ವಾರಾಣಸಿಗೆ ಭೇಟಿ ನೀಡಿದ್ದಾರೆ. 2014 ರಿಂದ 2021 ರವರೆಗಿನ ಏಳು ವರ್ಷಗಳಲ್ಲಿ ಸುಮಾರು 310 ಹೊಸ ಯೋಜನೆಗಳನ್ನು ಇಲ್ಲಿ ಪ್ರಾರಂಭಿಸಲಾಗಿದೆ.
ಇದನ್ನೂ ಓದಿ: ಗೋರಖನಾಥನಿಗೆ ಪೂಜಿಸಿ ಸಿಎಂ ಯೋಗಿ ಆದಿತ್ಯನಾಥ್ ಶ್ರೀಕೃಷ್ಣ ಜನ್ಮಾಷ್ಟಮಿ