ETV Bharat / bharat

ಹರೇಕೃಷ್ಣ ಹೆರಿಟೇಜ್ ಟವರ್​ಗೆ ಸಿಎಂ ಕೆಸಿಆರ್ ಶಂಕುಸ್ಥಾಪನೆ - Telangana CM K Chandrasekhar Rao

ಹೈದರಾಬಾದ್ ನಗರದ ನರಸಿಂಗಿಯಲ್ಲಿ ಹರೇ ಕೃಷ್ಣ ಮೂವ್ ಮೆಂಟ್ ಸಂಸ್ಥೆಯ ಆಶ್ರಯದಲ್ಲಿ 400 ಅಡಿ ಎತ್ತರದ ಹರೇಕೃಷ್ಣ ಹೆರಿಕೇಜ್​ ಟವರ್ ನಿರ್ಮಾಣಕ್ಕೆ ಸಿಎಂ ಕೆಸಿಆರ್ ಅವರಿಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಸಿಎಂ ಕೆಸಿಆರ್
ಸಿಎಂ ಕೆಸಿಆರ್
author img

By

Published : May 8, 2023, 8:26 PM IST

ಹೈದರಾಬಾದ್: ಮನುಷ್ಯ ಏನಾದರೂ ಯಶಸ್ಸು ಸಾಧಿಸಿದರೆ ಅದನ್ನು ತನ್ನ ಪ್ರತಿಭೆ ಎಂದು ಹೇಳಿಕೊಳ್ಳುತ್ತಾನೆ. ಆದರೆ ಯಾವುದೇ ವಿಪತ್ತು ಬಂದಾಗ ಅದು ದೇವರ ತಪ್ಪು ಎಂದು ಮನುಷ್ಯ ಬಿಂಬಿಸಿಕೊಳ್ಳುತ್ತಾನೆ ಎಂದು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಹೇಳಿದ್ದಾರೆ.

ಧರ್ಮಭ್ರಷ್ಟತೆ ಮನುಷ್ಯನನ್ನು ಬೆದರಿಸುತ್ತದೆ ಮತ್ತು ಕೆಲವರು ಧಾರ್ಮಿಕ ಅಜ್ಞಾನದಿಂದ ಸಮಾಜದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತಿದ್ದಾರೆ ಎಂದು ಹೇಳಿದರು. ಹೈದರಾಬಾದ್ ನಗರದ ಹೊರವಲಯದ ನರಸಿಂಗಿಯಲ್ಲಿ ಹರೇ ಕೃಷ್ಣ ಮೂವ್ ಮೆಂಟ್ ಸಂಸ್ಥೆಯ ಆಶ್ರಯದಲ್ಲಿ 400 ಅಡಿ ಎತ್ತರದ ಹರೇಕೃಷ್ಣ ಹೆರಿಟೇಜ್ ಟವರ್ (ದೇವಾಲಯ) ನಿರ್ಮಾಣಕ್ಕೆ ಸಿಎಂ ಕೆಸಿಆರ್​ ಶಂಕುಸ್ಥಾಪನೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, "ಹರೇಕೃಷ್ಣ ಫೌಂಡೇಶನ್ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಹರೇಕೃಷ್ಣ ಫೌಂಡೇಶನ್ ನಡೆಸುತ್ತಿರುವ ಅಕ್ಷಯಪಾತ್ರ ಕಾರ್ಯಕ್ರಮ ತುಂಬಾ ಚೆನ್ನಾಗಿದೆ. ಹೈದರಾಬಾದ್​ನಲ್ಲಿ ಶ್ರೀಮಂತರು ಸಹ 5 ರೂಪಾಯಿ ಊಟ ಮಾಡುತ್ತಿದ್ದಾರೆ. ಪ್ರಾಮಾಣಿಕತೆ ಇದ್ದರೆ ಮಾತ್ರ ಅಕ್ಷಯಪಾತ್ರದಂತಹ ಕಾರ್ಯಕ್ರಮಗಳು ನಡೆಯಲು ಸಾಧ್ಯ" ಎಂದು ಸಿಎಂ ಕೆಸಿಆರ್ ಹೇಳಿದ್ದಾರೆ.

ರಾಧಾಕೃಷ್ಣರ ಜೊತೆಗೆ 8 ಪ್ರಮುಖ ಗೋಪಿಕೆಯರ ವಿಗ್ರಹ: ಶ್ರೀಕೃಷ್ಣ ಗೋ ಸೇವಾ ಮಂಡಳಿಯು ನೀಡಿದ ಎರಡು ಎಕರೆ ಜಾಗದಲ್ಲಿ ರೂ 200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಗೋಪುರ ನಗರದ ಸಾಂಸ್ಕೃತಿಕ ಹೆಗ್ಗುರುತಾಗಿ ನಿಲ್ಲಲಿದೆ. ದೇವಸ್ಥಾನದ ಮಂಟಪದಲ್ಲಿ ರಾಧಾಕೃಷ್ಣರ ಜೊತೆಗೆ 8 ಪ್ರಮುಖ ಗೋಪಿಕೆಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುವುದು. ತಿರುಮಲ ಶೈಲಿಯಲ್ಲಿ ಅತಿ ದೊಡ್ಡ ಪ್ರಾಕಾರವಿರುವ ವೆಂಕಟೇಶ್ವರ ಸ್ವಾಮಿಯ ದೇವಾಲಯವೂ ಇರಲಿದೆ ಎಂದು ವಿವರಿಸಲಾಗಿದೆ.

ಇದನ್ನೂ ಓದಿ: ಧಾರವಾಡದಲ್ಲಿ ವಿಧಿವಿಜ್ಞಾನ ಯುನಿವರ್ಸಿಟಿಗೆ ಶಂಕುಸ್ಥಾಪನೆ ನೆರವೇರಿಸಿದ ಅಮಿತ್​ ಶಾ

ದ್ರಾವಿಡ ಚಕ್ರವರ್ತಿಗಳ ಕಟ್ಟಡಗಳ ಶೈಲಿ: 'ಪ್ರೈಡ್ ಆಫ್ ತೆಲಂಗಾಣ' ಯೋಜನೆಯಾಗಿ ನಿರ್ಮಾಣವಾಗಲಿರುವ ಈ ಪಾರಂಪರಿಕ ಗೋಪುರವು ಕಾಕತೀಯ, ಚಾಲುಕ್ಯ, ದ್ರಾವಿಡ ಚಕ್ರವರ್ತಿಗಳ ಕಟ್ಟಡಗಳ ಶೈಲಿಯನ್ನು ಹೋಲುತ್ತದೆ ಎನ್ನಲಾಗಿದೆ. ಗೋಪುರದ ಆವರಣವು ಗ್ರಂಥಾಲಯ, ವಸ್ತುಸಂಗ್ರಹಾಲಯ, ರಂಗಮಂದಿರ ಮತ್ತು ಇತರ ಆಧುನಿಕ ಸೌಲಭ್ಯಗಳಾದ ಮೀಟಿಂಗ್ ಹಾಲ್‌ಗಳು, ಹೊಲೊಗ್ರಾಮ್‌ಗಳು ಮತ್ತು ಲೇಸರ್ ಪ್ರೊಜೆಕ್ಟರ್‌ಗಳನ್ನು ಪ್ರತಿಯೊಬ್ಬರಲ್ಲಿ ಆಧ್ಯಾತ್ಮಿಕತೆಯನ್ನು ಬೆಳೆಸುತ್ತದೆ.

ವಿಧಿವಿಜ್ಞಾನ ಯುನಿವರ್ಸಿಟಿಗೆ ಶಂಕುಸ್ಥಾಪನೆ ನೆರವೇರಿಸಿದ್ದ ಅಮಿತ್​ ಶಾ: ಇನ್ನೊಂದೆಡೆ ಧಾರವಾಡದ ವಿಧಿವಿಜ್ಞಾನ ಕ್ಯಾಂಪಸ್ ನಿರ್ಮಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ( ಜನವರಿ 28-2023)ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಫಾರೆನ್ಸಿಕ್ ಕ್ಯಾಂಪಸ್ ನಿರ್ಮಾಣಕ್ಕೆ ಶಾ ಭೂಮಿ ಪೂಜೆ ನೆರವೇರಿಸಿದ್ದರು. ಈ ಸಂದರ್ಭ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕರಾದ ಅರವಿಂದ ಬೆಲ್ಲದ ಹಾಗೂ ಅಮೃತ ದೇಸಾಯಿ ಅವರು ಕೇಂದ್ರ ಗೃಹ ಸಚಿವರಿಗೆ ಸಾಥ್ ನೀಡಿದ್ದರು.

ಇದನ್ನೂ ಓದಿ : ಸಿಬ್ಬಂದಿಗೆ ವಿಆರ್​ಎಸ್​ ಆಫರ್ ಅವಧಿ ಮೇ 31ರವರೆಗೆ ವಿಸ್ತರಿಸಿದ ಏರ್ ಇಂಡಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.