ಹೈದರಾಬಾದ್ : ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್) ಪಕ್ಷದ ಅಧ್ಯಕ್ಷರಾಗಿ ಸಿಎಂ ಚಂದ್ರಶೇಖರ ರಾವ್ ಒಂಬತ್ತನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೆಸಿಆರ್ ಚುನಾವಣೆಯನ್ನು ಪಕ್ಷದ ಚುನಾವಣಾ ಅಧಿಕಾರಿ ಶ್ರೀನಿವಾಸ್ ರೆಡ್ಡಿ ಘೋಷಿಸಿದ್ದರು. ಈ ಸಂಬಂಧ 18 ನಾಮಪತ್ರಗಳು ಸಲ್ಲಿಕೆಯಾಗಿದ್ದವು.
ಪಕ್ಷದ ಮುಖಂಡರು ಕೆಸಿಆರ್ ಅವರನ್ನು ಅಭಿನಂದಿಸಿದ್ದಾರೆ. ನಂತರ ಕೆಸಿಆರ್ ಭಾಷಣ ಮಾಡಿ, ತಮ್ಮನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದಕ್ಕಾಗಿ ಎಲ್ಲಾ ಟಿಆರ್‌ಎಸ್ ನಾಯಕರಿಗೆ ಧನ್ಯವಾದ ಎಂದರು.
ಟಿಆರ್‌ಎಸ್ ಪಕ್ಷದ 20 ವರ್ಷಗಳ ಸುಧೀರ್ಘ ಪಯಣವನ್ನು ಸಂಭ್ರಮಿಸುವ ಉದ್ದೇಶದಿಂದ ಹೈದರಾಬಾದ್‌ನ ಮಾದಾಪುರದ ಹೈಟೆಕ್ಸ್‌ನಲ್ಲಿ ಅದ್ಧೂರಿ ಸಭೆ ಆಯೋಜನೆ ಮಾಡಿದೆ. ಸಿಎಂ ಕೆಸಿಆರ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಟಿಆರ್ ಎಸ್ ಧ್ವಜ ಅನಾವರಣಗೊಳಿಸಿದರು. ಬಳಿಕ ತೆಲಂಗಾಣ ತಾಳಿ ಮೂರ್ತಿಗೆ ಮಾಲಾರ್ಪಣೆ ಮಾಡಿ, ತದನಂತರ ತೆಲಂಗಾಣ ಹುತಾತ್ಮರಿಗೆ ಗೌರವ ಸಲ್ಲಿಸಿದರು.
ಏಪ್ರಿಲ್ 27, 2001 ರಂದು ಕೊಂಡ ಲಕ್ಷ್ಮಣ್ ಬಾಪೂಜಿ ಅವರ ಸಮ್ಮುಖದಲ್ಲಿ ಟಿಆರ್‌ಎಸ್ ಪಕ್ಷದ ಆಳ್ವಿಕೆ ಪ್ರಾರಂಭವಾಯಿತು ಎಂದು ಕೆಸಿಆರ್ ಇದೇ ವೇಳೆ, ಪಕ್ಷದ ಬೆಳವಣಿಗೆ ಬಗ್ಗೆ ಮಾತನಾಡಿದರು.
ಏಳು ವರ್ಷಗಳ ಆಡಳಿತದಲ್ಲಿ ಎಫ್‌ಸಿಐಗೂ ಕೊಳ್ಳಲಾಗದಷ್ಟು ಭತ್ತ ಬೆಳೆದು ನಂಬರ್ ಒನ್ ಸ್ಥಾನದಲ್ಲಿ ನಿಂತಿದ್ದೇವೆ. ಆರ್ಥಿಕ ಅಭಿವೃದ್ಧಿಯಲ್ಲಿ ಉನ್ನತ ಸ್ಥಾನದಲ್ಲಿದ್ದೇವೆ. ಪಾಲಮುರು ಜಿಲ್ಲೆಯವರು ಉದ್ಯೋಗಕ್ಕಾಗಿ ಮುಂಬೈಗೆ ಹೋಗುತ್ತಿದ್ದರು, ಈಗ ಮುಂಬೈ ಜನರು ಪಾಲಮುರಿಗೆ ಬರುತ್ತಿದ್ದಾರೆ. ದಲಿತಬಂಧು ಘೋಷಣೆಯ ನಂತರ ಆಂಧ್ರಪ್ರದೇಶದಿಂದ ಸಾವಿರಾರು ಮನವಿಗಳು ಬರುತ್ತಿವೆ.
ಅವರು ಆಂಧ್ರಪ್ರದೇಶದಲ್ಲಿ ಟಿಆರ್‌ಎಸ್ ಪಕ್ಷದ ಅಭ್ಯರ್ಥಿಗಳನ್ನು ಹಾಕುವಂತೆ ಕೇಳಿದ್ದಾರೆ. ನಾಂದೇಡ್ (ಮಹಾರಾಷ್ಟ್ರ), ಮತ್ತು ರಾಯಚೂರು (ಕರ್ನಾಟಕ) ಜಿಲ್ಲೆಗಳ ಜನರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ತಮ್ಮ ರಾಜ್ಯಗಳಲ್ಲಿ ತೆಲಂಗಾಣ ರಾಜ್ಯದ ಯೋಜನೆಗಳಂತೆ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲು ತಮ್ಮ ರಾಜ್ಯಗಳನ್ನು ಒತ್ತಾಯಿಸುತ್ತಿದ್ದಾರೆ ಎಂದು ಸಿಎಂ ಕೆಸಿಆರ್ ಪಕ್ಷದ ಕಾರ್ಯಸಾಧನೆ ಬಗ್ಗೆ ವಿವರಿಸಿದರು.