ಕುಲ್ಗಾಮ್: ಜಮ್ಮು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಹಡಿಗಾಂ ಎಂಬ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಬುಧವಾರ (ನಿನ್ನೆ) ಸಂಜೆ ಆರಂಭವಾದ ಎನ್‌ಕೌಂಟರ್ ಗುರುವಾರವೂ ಮುಂದುವರಿದಿದೆ.
ಈ ಬಗ್ಗೆ ಹಡಿಗಾಂ ಎಸ್ಪಿ ಮಾಹಿತಿ ನೀಡಿದ್ದು, ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಮತ್ತು ಸೇನಾ ಪಡೆ ಜಂಟಿ ಕಾರ್ಯಾಚರಣೆ ಪ್ರಾರಂಭಿಸಿತು. ಎರಡು ಪಡೆಗಳು ಶಂಕಿತ ಸ್ಥಳಕ್ಕೆ ತಲುಪಿದ ತಕ್ಷಣ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸೇನಾ ಪಡೆಯೂ ಗುಂಡಿನ ದಾಳಿ ನಡೆಸಿದೆ. ಈವರೆಗೆ ಉಗ್ರರು ಪತ್ತೆಯಾಗಿಲ್ಲ, ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು ಡಿಸೆಂಬರ್ 22 ರಂದು ಜಮ್ಮುವಿನ ಪೂಂಚ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಐವರು ಸೈನಿಕರು ಹುತಾತ್ಮರಾಗಿದ್ದರು. 2023ರಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ 87ಕ್ಕೂ ಹೆಚ್ಚು ಉಗ್ರಗಾಮಿಗಳು, 33 ಭದ್ರತಾ ಪಡೆಗಳ ಸಿಬ್ಬಂದಿ ಮತ್ತು 12ಕ್ಕೂ ಹೆಚ್ಚು ನಾಗರಿಕರು ಸೇರಿದಂತೆ ಉಗ್ರರ ಸೆರೆ ಕಾರ್ಯಾಚರಣೆಯಲ್ಲಿ 134ಕ್ಕೂ ಹೆಚ್ಚು ಸಾವು ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ಇದನ್ನೂ ಓದಿ: ಚಳಿಗೆ ನಡುಗುತ್ತಿರುವ ದೆಹಲಿ; ಹಿಮಪಾತದ ನಿರೀಕ್ಷೆಯಲ್ಲಿ ಕಾಶ್ಮೀರ