ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಉದಯ್ ಉಮೇಶ್ ಲಲಿತ್ ಅವರು ತಮ್ಮ ನಂತರ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಡಿ.ವೈ. ಚಂದ್ರಚೂಡ್ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ. ಮುಖ್ಯ ನ್ಯಾಯಮೂರ್ತಿ ಲಲಿತ್ ಅವರು 74 ದಿನಗಳ ಅಧಿಕಾರಾವಧಿಯ ನಂತರ ನವೆಂಬರ್ 8 ರಂದು ಅಧಿಕಾರ ತ್ಯಜಿಸಲಿದ್ದಾರೆ.
ಮಂಗಳವಾರ ಸರ್ವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಭೆಯಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಅವರನ್ನು ಔಪಚಾರಿಕವಾಗಿ 50ನೇ ಸಿಜೆಐ ಎಂದು ಹೆಸರಿಸಲಾಯಿತು.
ಅತಿ ಹಿರಿಯ ನ್ಯಾಯಮೂರ್ತಿಯನ್ನು ಸಿಜೆಐ ಆಗಿ ನೇಮಕ ಮಾಡುವ ಸಂಪ್ರದಾಯದ ಪ್ರಕಾರ, ಮುಖ್ಯ ನ್ಯಾಯಮೂರ್ತಿ ಲಲಿತ್ ಅವರು ಚಂದ್ರಚೂಡ್ರನ್ನು ನೇಮಕ ಮಾಡಿದರು. ಮೆಮೊರಾಂಡಮ್ ಆಫ್ ಪ್ರೊಸೀಜರ್ ಪ್ರಕಾರ, ನಿವೃತ್ತಿಯ ಒಂದು ತಿಂಗಳ ಮೊದಲು ತಮ್ಮ ಉತ್ತರಾಧಿಕಾರಿಯನ್ನು ಹೆಸರಿಸುವಂತೆ ಕೇಂದ್ರವು ನಿವೃತ್ತರಾಗಲಿರುವ ಸಿಜೆಐಗೆ ಕೇಳುತ್ತದೆ.
ಅಕ್ಟೋಬರ್ 7 ರಂದು ಕಾನೂನು ಮತ್ತು ನ್ಯಾಯಾಂಗ ಸಚಿವ ಕಿರಣ್ ರಿಜಿಜು, ಸಿಜೆಐ ಸುಪ್ರೀಂಕೋರ್ಟ್ಗೆ ಮುಂದಿನ ಸಾರಥಿ ನೇಮಕಕ್ಕೆ ಶಿಫಾರಸುಗಳನ್ನು ಕಳುಹಿಸುವಂತೆ ಅವರಿಗೆ ಪತ್ರ ಬರೆದಿದ್ದರು.
ಇದನ್ನೂ ಓದಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಉದಯ್ ಉಮೇಶ್ ಲಲಿತ್ ನೇಮಕ