ನವದೆಹಲಿ: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE)ನ 10ನೇ ತರಗತಿ ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್(ICSE) ಮತ್ತು 12ನೇ ತರಗತಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ (ISC) ಫಲಿತಾಂಶ ಇಂದು (ಭಾನುವಾರ) ಮಧ್ಯಾಹ್ನ 3 ಗಂಟೆಗೆ ಪ್ರಕಟಗೊಳ್ಳಲಿದೆ ಎಂದು ಮಂಡಳಿಯ ಕಾರ್ಯದರ್ಶಿ ಗೆರ್ರಿ ಅರಾಥೂನ್ ತಿಳಿಸಿದ್ದಾರೆ.
ಫಲಿತಾಂಶ ನೋಡುವುದು ಹೇಗೆ?: ಮಂಡಳಿಯ ಸೂಚನೆಯ ಪ್ರಕಾರ, ವಿದ್ಯಾರ್ಥಿಗಳು ಸಿಐಎಸ್ಸಿಇಯ ವೆಬ್‌ಸೈಟ್ http://cisce.org ಅಥವಾ http: //results.cisce.orgಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ನೋಡಲು ತಮ್ಮ ಐಡಿ ನಮೂದಿಸಬೇಕಾಗುತ್ತದೆ. ಸಿಐಎಸ್ಸಿಇ ಬೋರ್ಡ್ ಫಲಿತಾಂಶಗಳು digilocker.gov.in ನಲ್ಲಿಯೂ ಲಭ್ಯ.
ಇದನ್ನೂ ಓದಿ: ಸಿಬಿಎಸ್ಇ 12th: ಕಳೆದ ವರ್ಷಕ್ಕಿಂತ ಕಡಿಮೆ ಫಲಿತಾಂಶ; ಟಾಪರ್ಸ್ ಹೆಸರು ಬಿಡುಗಡೆ ಇಲ್ಲ
ವಿದ್ಯಾರ್ಥಿಗಳು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸುವ ಮೂಲಕ 10ನೇ ತರಗತಿ ಐಸಿಎಸ್‌ಇ ಫಲಿತಾಂಶ ಮತ್ತು 12ನೇ ತರಗತಿ ಐಎಸ್‌ಸಿ ಫಲಿತಾಂಶಗಳನ್ನು ಪಡೆಯಬಹುದು.
- ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ
- 'ಫಲಿತಾಂಶಗಳು' ಟ್ಯಾಬ್ ಮೇಲೆ ಕ್ಲಿಕ್ಕಿಸಿ
- ಸಂಬಂಧಿತ ಕೋರ್ಸ್ ಆಯ್ಕೆ ಮಾಡಿ - ICSE/ ISC
- ನಿಮ್ಮ ಐಡಿ ಸಂಖ್ಯೆಯನ್ನು ನಮೂದಿಸಿ
- ವಿವರ ಸಲ್ಲಿಸಿ
- ಭವಿಷ್ಯಕ್ಕಾಗಿ ನಿಮ್ಮ ಫಲಿತಾಂಶಗಳ ಮುದ್ರಣವನ್ನು ಡೌನ್‌ಲೋಡ್ ಮಾಡಿಕೊಳ್ಳಿ
ಇದನ್ನೂ ಓದಿ: ಅಂಧತ್ವ ಮೆಟ್ಟಿ ನಿಂತ ಬಾಲೆ.. CBSE 12ನೇ ತರಗತಿಯಲ್ಲಿ 496 ಅಂಕಗಳಿಸಿ ದೇಶಕ್ಕೆ ಮೊದಲ ಸ್ಥಾನ
ಪಾಸಿಂಗ್ ಮಾರ್ಕ್ಸ್:
- 10ನೇ ತರಗತಿ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಶೇ.33 ಅಂಕಗಳನ್ನು ಗಳಿಸಬೇಕು.
- 12ನೇ ತರಗತಿ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಪ್ರತಿ ವಿಷಯದಲ್ಲಿ 35 ಪ್ರತಿಶತ ಅಂಕಗಳನ್ನು ಗಳಿಸಬೇಕು.
10ನೇ ತರಗತಿ (ಐಸಿಎಸ್‌ಇ) ಪರೀಕ್ಷೆಗಳು ಫೆಬ್ರವರಿ 27 ರಿಂದ ಮಾರ್ಚ್ 29, 2023ರ ವರೆಗೆ ನಡೆಸಲಾಗಿತ್ತು. 12ನೇ ತರಗತಿ (ಐಎಸ್‌ಸಿ) ಪರೀಕ್ಷೆ ಫೆಬ್ರವರಿ 13 ರಂದು ಪ್ರಾರಂಭವಾಗಿ ಮಾರ್ಚ್ 31ರಂದು ಮುಕ್ತಾಯಗೊಂಡಿದ್ದವು. ಈ ವರ್ಷ ಒಟ್ಟು ಸುಮಾರು 2.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಇತ್ತೀಚೆಗೆ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) 10ನೇ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿತ್ತು. ಶೇ 93.12 ಫಲಿತಾಂಶ ಪ್ರಕಟಗೊಂಡಿದ್ದು, ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಸಾಧಿಸಿದ್ದರು. 94.25ರಷ್ಟು ಬಾಲಕಿಯರು ಉತ್ತೀರ್ಣರಾದರೆ, ಬಾಲಕರ ಉತ್ತೀರ್ಣ ಪ್ರಮಾಣ ಶೇ 92.27 ರಷ್ಟಿತ್ತು. ಬೋರ್ಡ್ ಪರೀಕ್ಷೆಯಲ್ಲಿ ಐದು ಮುಖ್ಯ ವಿಷಯಗಳ ಪೈಕಿ ಒಂದನ್ನು ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕಂಪಾರ್ಟ್‌ಮೆಂಟ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 1.34 ಲಕ್ಷ ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಇದನ್ನೂ ಓದಿ: ಸಿಬಿಎಸ್ಇ 10ನೇ ತರಗತಿ: ಶೇ 93.12 ಫಲಿತಾಂಶ, ಕಳೆದ ಬಾರಿಗಿಂತ ಕಡಿಮೆ