ಆಂಧ್ರಪ್ರದೇಶ: ಸರ್ಕಲ್ ಇನ್ಸ್ಪೆಕ್ಟರ್ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಹೃದಯಾಘಾತವಾಗಿ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಶ್ಚಿಮ ಗೋದಾವರಿ ಜಿಲ್ಲೆಯ ನಿಡಮರು ಭುವನ್‌ಪಲ್ಲಿಯಲ್ಲಿ ನಡೆದಿದೆ.
ಗಣಪವರಂನ ಸಿಐ ದೆಗಲಾ ಪ್ರಸಾದ್ (42) ಮೃತರು. ಇವರು ಎಂದಿನಂತೆ ಕರ್ತವ್ಯ ಮುಗಿಸಿದ ನಂತರ ಭುವನಪಲ್ಲಿಗೆ ಬ್ಯಾಡ್ಮಿಂಟನ್ ಆಡಲು ಹೋಗಿದ್ದಾರೆ. ಈ ವೇಳೆ, ಆಟ ಆಡುತ್ತಿರುವಾಗಲೇ ಹೃದಯಾಘಾತ ಸಂಭವಿಸಿದೆ. ಕುಸಿದುಬಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಇದನ್ನು ಓದಿ: 'ಲಾಥ್ಮಾರ್ ಹೋಳಿ': ಪುರುಷರಿಗೆ ಮಹಿಳೆಯರು ಕೋಲಿನಿಂದ ಹೊಡೆಯುವುದು ಇಲ್ಲಿನ ಸಂಪ್ರದಾಯ!
ಸಿಐಗೆ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇನ್ನು ಪ್ರಸಾದ್ ಸಾವಿಗೆ ಅನೇಕ ಗಣ್ಯರು, ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.