ಕಟಕ್(ಒಡಿಶಾ): ಗಾಳಿಪಟಕ್ಕೆ ಬಳಸುವ ಮಾಂಜಾ ದಾರ ಯುವಕನೊಬ್ಬನ ಕುತ್ತಿಗೆಯನ್ನು ಸೀಳಿ, ಸಾವಿಗೆ ಕಾರಣವಾದ ದಾರುಣ ಘಟನೆ ಒಡಿಶಾದ ಕಟಕ್ನಲ್ಲಿ ನಡೆದಿದೆ. ಈ ಮಾಂಜಾವನ್ನು ಚೀನಾ ತಯಾರಿಸಿದ್ದು ಎಂದು ತಿಳಿದುಬಂದಿದೆ.
ಜಗತ್ಪುರದ ಪಿರ್ಬಜಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಬಯಾರ್ಪುರ ಪ್ರದೇಶದ ಜಯಂತ್ ಸಮಾಲ್ ಎಂಬ ಯುವಕ ಸಾವನ್ನಪ್ಪಿದ್ದಾನೆ. ಜಯಂತ್ ಸಮಾಲ್ ಭಾನುವಾರ ಸಂಜೆ 4 ಗಂಟೆಗೆ ತನ್ನ ಪತ್ನಿಯೊಂದಿಗೆ ಮಾವನ ಮನೆಗೆ ತೆರಳುವಾಗ ಈ ಘಟನೆ ನಡೆದಿದೆ.
ಬೈಕ್ನಲ್ಲಿ ತೆರಳುವ ವೇಳೆ ಗಾಳಿಪಟದ ಮಾಂಜಾ ಜಯಂತ್ ಸಮಾಲ್ ಕುತ್ತಿಗೆಗೆ ಸಿಲುಕಿದ್ದು, ಅದು ಕುತ್ತಿಗೆ ಸೀಳಿದೆ. ಸ್ಥಳೀಯ ಆಸ್ಪತ್ರೆಗೆ ಆತನನ್ನು ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದು, ಜಗತ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಬಸ್ ಡಿಕ್ಕಿ : ಇಬ್ಬರು ಸ್ಥಳದಲ್ಲೇ ದುರ್ಮರಣ