ನವದೆಹಲಿ: ಗಡಿಯಲ್ಲಿ ಭಾರತಕ್ಕೆ ಚೀನಾ ಈಗಲೂ ಅಸಾಧಾರಣ ಸವಾಲಾಗಿದೆ ಮತ್ತು ಭಯೋತ್ಪಾದನೆಯು ದೇಶಕ್ಕೆ ಪ್ರಮುಖ ಭದ್ರತಾ ಬೆದರಿಕೆಯಾಗಿದೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ ಮಂಗಳವಾರ ಹೇಳಿದ್ದಾರೆ. ಚೀನಾ ಅಸಾಧಾರಣ ಸವಾಲಾಗಿ ಉಳಿದಿದೆ ಮತ್ತು ಭೂಮಿಯ ಮೇಲೆ ಮಾತ್ರವಲ್ಲದೇ ಸಮುದ್ರದ ಗಡಿಗಳಲ್ಲಿಯೂ ತನ್ನ ಅಸ್ತಿತ್ವ ಹೆಚ್ಚಿಸಿಕೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸಂಭಾವ್ಯ ಎದುರಾಳಿಗಳೊಂದಿಗಿನ ಯುದ್ಧವನ್ನು ತಳ್ಳಿಹಾಕಲಾಗುವುದಿಲ್ಲ. ಆದರೆ, ಸಶಸ್ತ್ರ ಕಾರ್ಯಾಚರಣೆ ಇಲ್ಲದೆಯೇ ಯುದ್ಧವಾಗಬಹುದು ಎಂದು ಕುಮಾರ್ ಹೇಳಿದರು.
ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಪಾಕಿಸ್ತಾನ ತನ್ನ ಮಿಲಿಟರಿ ಆಧುನೀಕರಣ ಮುಂದುವರೆಸಿದೆ. ಸಾಂಪ್ರದಾಯಿಕ ಮಿಲಿಟರಿ ಸವಾಲುಗಳ ಮಧ್ಯೆ ಭಯೋತ್ಪಾದನೆಯು ಒಂದು ಪ್ರಮುಖ ಭದ್ರತಾ ಬೆದರಿಕೆಯಾಗಿ ಉಳಿದಿದೆ. ಅದು ಆಕಾರ, ಪ್ರಮಾಣ ಮತ್ತು ಗಾತ್ರದಲ್ಲಿ ವಿಕಸನಗೊಳ್ಳುತ್ತಲೇ ಇದೆ. ಇಂಥ ಅದೃಶ್ಯ ಶತ್ರುಗಳಿಗಿಂತ ಒಂದು ಹೆಜ್ಜೆ ಮುಂದೆ ಇರಬೇಕಾಗುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಚೀನಾ ಅಟ್ಯಾಕ್ ಮಾಡಿದರೆ ತೈವಾನ್ ರಕ್ಷಿಸುತ್ತೇವೆ: ಅಮೆರಿಕ ಖಡಕ್ ವಾರ್ನಿಂಗ್