ETV Bharat / bharat

ಭೂಗತ ಪಾತಕಿ ಛೋಟಾ ರಾಜನ್​ಗೆ ಕೊರೊನಾ ದೃಢ - ಭೂಗತ ಪಾತಕಿ ಛೋಟಾ ರಾಜನ್​ಗೆ ಕೊರೊನಾ

ಛೋಟಾ ರಾಜನ್​ಗೆ ಕೋವಿಡ್​ ದೃಢಪಟ್ಟಿದ್ದು, ಏಮ್ಸ್​ಗೆ ದಾಖಲಿಸಲಾಗಿದೆ. ತಿಹಾರ್ ಜೈಲಿನ ಸಹಾಯಕ ಜೈಲರ್ ದೂರವಾಣಿ ಮೂಲಕ ಇಲ್ಲಿನ ಸೆಷನ್ಸ್ ನ್ಯಾಯಾಲಯಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

author img

By

Published : Apr 27, 2021, 9:15 AM IST

ಮುಂಬೈ: ಭೂಗತ ಪಾತಕಿ ರಾಜೇಂದ್ರ ನಿಕಲ್ಜೆ ಅಲಿಯಾಸ್ ಛೋಟಾ ರಾಜನ್​ಗೆ ಕೋವಿಡ್​ ದೃಢಪಟ್ಟಿದ್ದು ತಿಹಾರ್ ಜೈಲಿನ ಅಧಿಕಾರಿಗಳು ಏಮ್ಸ್​ಗೆ ದಾಖಲಿಸಿದ್ದಾರೆ.

61 ವರ್ಷದ ರಾಜನ್‌ನನ್ನು 2015 ರಲ್ಲಿ ಇಂಡೋನೇಷ್ಯಾದ ಬಾಲಿಯಿಂದ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ನಂತರ ಆತನನ್ನು ಬಂಧಿಸಿ ನವದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು.

ಸೋಮವಾರ, ತಿಹಾರ್ ಜೈಲಿನ ಸಹಾಯಕ ಜೈಲರ್ ದೂರವಾಣಿ ಮೂಲಕ ಇಲ್ಲಿನ ಸೆಷನ್ಸ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ಪ್ರಕರಣದ ವಿಚಾರಣೆಗಾಗಿ ನ್ಯಾಯಾಧೀಶರ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಾಜಪೇಯಿ​ ಸಂಬಂಧಿ, ಕಾಂಗ್ರೆಸ್ ನಾಯಕಿ ಕರುಣಾ ಶುಕ್ಲಾ ಕೋವಿಡ್​ಗೆ ಬಲಿ

ರಾಜನ್‌ ಅಪರಾಧ ಹಿನ್ನೆಲೆ:

ಮುಂಬೈನಲ್ಲಿ ಸುಲಿಗೆ ಮತ್ತು ಕೊಲೆಗೆ ಸಂಬಂಧಿಸಿದ 70 ಕ್ರಿಮಿನಲ್ ಪ್ರಕರಣಗಳನ್ನು ರಾಜನ್ ಎದುರಿಸುತ್ತಿದ್ದಾನೆ. 2018 ರಲ್ಲಿ ಪತ್ರಕರ್ತ ಜ್ಯೋತಿರ್ಮಯಿ ಡೇ ಹತ್ಯೆ ಪ್ರಕರಣದಲ್ಲಿ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಕಳೆದ ವಾರ, ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯ 1993 ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಹನೀಫ್ ಕಡವಾಲಾ ಹತ್ಯೆಗೆ ಸಂಬಂಧಿಸಿದಂತೆ ರಾಜನ್ ಮತ್ತು ಸಹಾಯಕರನ್ನು ಖುಲಾಸೆಗೊಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.